69th Filmfare Awards South 2024 ಪ್ರಕಟ, ಅತ್ಯುತ್ತಮ ಚಿತ್ರ ಡೇರ್ಡೆವಿಲ್ ಮುಸ್ತಫಾ, ದರ್ಶನ್ಗೆ ಸಿಗಲಿಲ್ಲ ಜಯ
ಸೌತ್ ಇಂಡಿಯನ್ ಫಿಲ್ಮ್ ಫೇರ್ ಪ್ರಶಸ್ತಿ ಪ್ರಕಟ, ಅತ್ಯುತ್ತಮ ಸಿನಿಮಾ ಡೇರ್ಡೆವಿಲ್ ಮುಸ್ತಫಾ, ಅತ್ಯುತ್ತಮ ನಟ ರಕ್ಷಿತ್ ಪಾಲಾಗಿದೆ. ಆದರೆ ದರ್ಶನ್ಗೆ ನಟನೆಯ ಕಾಟೇರಾ ಸಿನೆಮಾಗೆ ಒಂದೇ ಒಂದು ವಿಭಾಗದಲ್ಲೂ ಪ್ರಶಸ್ತಿ ಬಂದಿಲ್ಲ.
ಬೆಂಗಳೂರು (ಆ.4): 2024ರ 69ನೇ ದಕ್ಷಿಣ ಭಾರತದ ಫಿಲ್ಮ್ ಫೇರ್ ಪ್ರಶಸ್ತಿ ಪ್ರಕಟವಾಗಿದೆ. ಈ ಸಲದ ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ. ಒಟ್ಟು 6 ಪ್ರಶಸ್ತಿಗಳು ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನೆಮಾಗೆ ಒಲಿದಿದೆ.
ಅತ್ಯುತ್ತಮ ಸಿನಿಮಾ: ಡೇರ್ಡೆವಿಲ್ ಮುಸ್ತಫಾ
ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ)
ಅತ್ಯುತ್ತಮ ನಟಿ: ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆ ಹನಿಯೇ)
ಅತ್ಯುತ್ತಮ ನಿರ್ದೇಶಕ: ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ: ಪಿಂಕಿ ಎಲ್ಲಿ?
ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಮೈಸೂರು ಪೂರ್ಣ (ಆರ್ಕೆಸ್ಟ್ರಾ ಮೈಸೂರು)
ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು (ಟಗರು ಪಲ್ಯ)
ಅತ್ಯುತ್ತಮ ಪೋಷಕ ನಟಿ: ಸುಧಾ ಬೆಳವಾಡಿ (ಕೌಸಲ್ಯ ಸುಪ್ರಜಾ ರಾಮ)
ಅತ್ಯುತ್ತಮ ಹೊಸ ನಟ: ಶಿಶಿರ್ ಬೈಕಾಡಿ (ಡೇರ್ಡೆವಿಲ್ ಮುಸ್ತಫ)
ಅತ್ಯುತ್ತಮ ಹೊಸ ನಟಿ: ಅಮೃತಾ ಪ್ರೇಮ್ (ಟಗರು ಪಲ್ಯ)
ಅತ್ಯುತ್ತಮ ಹಾಡುಗಳು: ಚರಣ್ ರಾಜ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಸಾಹಿತ್ಯ: ಬಿಆರ್ ಲಕ್ಷ್ಮಣರಾವ್ (ಯಾವ ಚುಂಬಕ, ಚೌಕಬಾರ)
ಅತ್ಯುತ್ತಮ ಗಾಯಕ: ಕಪಿಲ್ ಕಪಿಲನ್ (ನದಿಯೇ: ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಗಾಯಕಿ: ಶ್ರೀಲಕ್ಷ್ಮಿ ಬೆಲಮಣ್ಣು (ಕಡಲನು ಕಾಣ ಹೊರಟ: ಸಪ್ತ ಸಾಗರದಾಚೆ ಎಲ್ಲೊ)
ಜೀವಮಾನ ಸಾಧನೆ: ಹಿರಿಯ ನಟ ಶ್ರೀನಾಥ್
ಒಂದು ವಿಭಾಗದಲ್ಲೂ ಪ್ರಶಸ್ತಿ ಬಾಚದ ಕಾಟೇರಾ: ಇನ್ನು ಸೌತ್ ಇಂಡಿಯನ್ ಫಿಲ್ಮ್ ಫೇರ್ ಪ್ರಶಸ್ತಿಯಲ್ಲಿ ದರ್ಶನ್ ನಟನೆಯ ಕಾಟೇರ ಸಿನೆಮಾಗೆ ಜಯ ಸಿಗಲಿಲ್ಲ. ಫಿಲ್ಮ್ ಫೇರ್ಗೆ ಪ್ರಶಸ್ತಿಗೆ ಕಾಟೇರ ಸಿನಿಮಾ ನಾಮಿನೇಟ್ ಆಗಿತ್ತು. ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿದ ಮೇಲೆ ಫಿಲ್ಮ್ ಫೇರ್ಗೆ ನಾಮಿನೇಟ್ ಆಗಿತ್ತು. ಆದರೆ ಒಂದೇ ಒಂದು ಪ್ರಶಸ್ತಿ 69ನೇ ಸೌತ್ ಇಂಡಿಯನ್ ಫಿಲ್ಮ್ ಫೇರ್ನಲ್ಲಿ ಬಂದಿಲ್ಲ.
ಕಾಟೇರ ಸಿನಿಮಾ ಅತ್ಯುತ್ತಮ ಚಿತ್ರಕ್ಕೆ ನಾಮ ನಿರ್ದೇಶನ ಗೊಂಡಿತ್ತು. ಕಾಟೇರ ಸಿನಿಮಾದಿಂದ ಅತ್ಯುತ್ತಮ ಸಿನಿಮಾ ನಿರ್ದೇಶಕ ಅಂತ ತರುಣ್ ಸುಧೀರ್ ನಾಮಿನೇಟ್ ಆಗಿದ್ದರು. ಲೀಡಿಂಗ್ ರೋಲ್ನಲ್ಲಿ ಅತ್ಯುತ್ತಮ ನಟ ದರ್ಶನ್ ಅಂತ ನಾಮಿನೇಟ್ ಆಗಿತ್ತು. ಇನ್ನು ಅತ್ತುತ್ತಮ ಪೋಷಕ ಪಾತ್ರಕ್ಕೆ ಹಿರಿಯ ನಟಿ ಶೃತಿ ಆಗಿದ್ದರು. ಅತ್ಯುತ್ತಮ ಸಂಗೀತದಲ್ಲಿ ಕಾಟೇರ ಚಿತ್ರಕ್ಕೆ ವಿ ಹರಿಕೃಷ್ಣಗೂ ಪ್ರಶಸ್ತಿ ಒಲಿದು ಬಂದಿಲ್ಲ.