Asianet Suvarna News Asianet Suvarna News

Kushbhu Weight loss Journey: 20 ಕೆಜಿ ಇಳಿಸಿಕೊಂಡ ಖುಷ್ಬೂ ಸಲಹೆ ವೈರಲ್!

ಸೋಷಿಯಲ್ ಮೀಡಿಯಾದಲ್ಲಿ ನಟಿ ಖುಷ್ಬೂ ಟ್ರಾನ್ಸಫಾರ್ಮೇಷನ್ ಫೋಟೋ ವೈರಲ್ ಆಗುತ್ತಿದೆ. ಮನೆ ಕೆಲಸ ಮಾಡಿದ್ರೆ ಸಾಕಾ ಎಂದು ನೂರಾರು ಪ್ರಶ್ನೆ ಕೇಳುತ್ತಿರುವ ನೆಟ್ಟಿಗರು....... 

Kannada actress Kushbhu Sundar is 20kg lighter share transformation photo vcs
Author
Bangalore, First Published Dec 7, 2021, 12:39 PM IST
  • Facebook
  • Twitter
  • Whatsapp

ಬಹುಭಾಷಾ ನಟಿ, ರಾಜಕಾರಣಿ, ಚಿತ್ರ ನಿರ್ಮಾಪಕಿ, ಟಿವಿ ನಿರೂಪಕಿ ಖುಷ್ಬೂ (Kushbu) ಸೌತ್ ಸಿನಿ ರಂಗದ ಜನಪ್ರಿಯ ಹಾಗೂ ಮನೆ ಮಗಳು ಎಂದೇ ಹೇಳಬಹುದು. ಮೂರು ತಮಿಳು ನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಒಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ತಮಿಳುನಾಡು ಸರ್ಕಾರದಿಂದ ಒಂದು ಕಲೈಮಾಮಣಿ ಪ್ರಶಸ್ತಿ ಪಡೆದಿರುವ ಖುಷ್ಬೂ ಈಗ ಗೃಹಿಣಿಯರಿಗೆ ಮತ್ತೊಂದು ರೀತಿಯಲ್ಲಿ ಸ್ಪೂರ್ತಿಯಾಗಿದ್ದಾರೆ. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಖತ್ ಬ್ಯುಸಿಯಾಗಿರುವ ಖುಷ್ಬೂ ಆರೋಗ್ಯದ ಬಗ್ಗೆ ಜನರು ಪ್ರಶ್ನೆ ಮಾಡುತ್ತಿರುವ ಕಾರಣ ಟ್ಟಿಟರ್ ಮೂಲಕ ಉತ್ತರಿಸಿದ್ದಾರೆ. 

ಹೌದು! ಮೊದಲ ಕೊರೋನಾ ವೈರಸ್ ಲಾಕ್‌ಡೌನ್‌ (Covid19 Locksdown) ಸಮಯದಲ್ಲಿ ಖುಷ್ಬೂ ಸೋಷಿಯಲ್ ಮೀಡಿಯಾದಲ್ಲಿ ಸ್ಕಿನ್ ಕೇರ್ (Skin care) ಮತ್ತು ಹೇರ್‌ ಕೇರ್ (Hair care) ಟಿಪ್ಸ್ ಕೊಟ್ಟು ಫೋಟೋ ಹಂಚಿಕೊಳ್ಳುತ್ತಿದ್ದರು. ಈ ವೇಳೆ ನಟಿ ಮುಖವನ್ನು ಕ್ಲೋಸಪ್‌ನಲ್ಲಿ ನೋಡುತ್ತಿದ್ದ ನೆಟ್ಟಿಗರು, ನೀವು ತುಂಬಾ ದಪ್ಪ ಆಗಿದ್ದೀರಿ ಎಂದು ಕಾಮೆಂಟ್ (Comment) ಮಾಡುತ್ತಿದ್ದರು. ಯಾವುದಕ್ಕೂ ಪ್ರತಿಕ್ರಿಯೆ ನೀಡದ ಖುಷ್ಬೂ ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿ, ಸಣ್ಣ ಆಗಿದ್ದಾರೆ. ಕೆಲವು ತಿಂಗಳ ಹಿಂದೆ ಒಂದು ಫೋಟೋ ಹಂಚಿಕೊಳ್ಳುವ ಮೂಲಕ ದೇಹದ ತೂಕ ಇಳಿಸಿಕೊಂಡ ಬಗ್ಗೆ ಸಣ್ಣ ಸುಳಿವು ನೀಡಿದ್ದರು ಆದರೆ ಎಷ್ಟು ಕೆಜಿ ಕಡಿಮೆ ಆಗಿದ್ದಾರೆ ಎಂದು ಅವರೇ ಇದೀಗ ಟ್ಟೀಟ್ ಮಾಡಿದ್ದಾರೆ. 

ಅಬ್ಬಬ್ಬಾ! 'ರಣಧೀರ' ಚೆಲುವೆ ತೂಕ ಕಳೆದುಕೊಂಡ ಫೋಟೋಗಳು ಸಖತ್ ವೈರಲ್

ಒಂದು ದಪ್ಪಗಿರುವ ಫೋಟೋ ಮತ್ತೊಂದು ಸಣ್ಣಗಾಗಿರುವ ಫೋಟೋ ಹಂಚಿಕೊಂಡಿದ್ದಾರೆ. 'ಅಲ್ಲಿಂದ ಈಗ ಇಲ್ಲಿಗೆ ಬಂದು ನಿಂತಿರುವೆ. 20 ಕೆಜಿ ಲೈಟ್ ಆಗಿರುವೆ. ನಾನು ಆರೋಗ್ಯವಾಗಿದ್ದೀನಿ. ಮೊದಲು ನಿಮ್ಮನ್ನು ನೀವು ನೋಡಿಕೊಳ್ಳಿ, ನೆನಪಿರಲಿ ಆರೋಗ್ಯವೇ ಭಾಗ್ಯ. ನನಗೆ ಉಷಾರಿಲ್ವಾ ಎಂದು ಪ್ರಶ್ನೆ ಮಾಡುವವರಿಗೆ ಧನ್ಯವಾದಗಳು ನಿಮ್ಮ ಕಾಳಜಿಗೆ. ಈಗಿರುವ ಫಿಟ್ ನಾನು ಎಂದೂ ಇರಲಿಲ್ಲ. ಇದನ್ನು ಓದಿದವರಲ್ಲಿ 10 ಜನರಿಗೆ ಸಣ್ಣ ಆಗಲು ಫಿಟ್ ಆಗಲು ನಾನು ಸ್ಪೂರ್ತಿಯಾದರೆ, ನಾನು ಯಶಸ್ವಿಯಾಗಿರುವೆ ಎಂದು ಭಾವಿಸುವೆ,' ಎಂದು ಬರೆದುಕೊಂಡಿದ್ದಾರೆ. 

Kannada actress Kushbhu Sundar is 20kg lighter share transformation photo vcs

ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಹೇಗೆ ಸಣ್ಣಗಾದರು ಎನ್ನುವ ಪ್ರಶ್ನೆಯನ್ನು ಜನರು ಹೆಚ್ಚು ಕೇಳುವುದಕ್ಕೆ ಶುರು ಮಾಡಿದ್ದಾರೆ. ಆರೋಗ್ಯಕರವಾದ ಆಹಾರ (Healthy food), ಮನೆಗೆಲಸ, ಯೋಗ (Yoga), ವರ್ಕೌಟ್ ಮಾಡಿ ಸಣ್ಣಗಾದೆ, ಎಂದು ಈ ಹಿಂದೆ ನಟಿಯೇ ಹೇಳಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಸುಮಾರು 70 ದಿನ ಮನೆಯಲ್ಲಿ ತಾವೇ ಎಲ್ಲ ಕೆಲಸಗಳನ್ನು ಮಾಡಿಕೊಂಡು ಸಹಜವಾಗಿ ಸಣ್ಣಗಾಗಿದ್ದಾರೆ. ಆನಂತರ ಇದನ್ನೇ ಇನ್ನೂ ಮಾಡಿದರೆ ಫಿಟ್ ಆಗುವೆ ಎಂದು ಸಣ್ಣ ಪುಟ್ಟ ವರ್ಕೌಟ್ ಕೂಡ ಮಾಡಲು ಆರಂಭಿಸಿದ್ದರಂತೆ. ತುಂಬಾ ಕಷ್ಟ ಪಡುತ್ತಿರುವವರಿಗೆ ಸಲಹ ನೀಡಿದ್ದಾರೆ, ವಾಕಿಂಗ್ ಮಾಡುತ್ತಿದ್ದ ವಿಡಿಯೋ ಹಂಚಿಕೊಂಡು ಸಣ್ಣ ಆಗುವುದಕ್ಕೆ ವಾಕಿಂಗ್ ಕೂಡ ಸಹಾಯ ಮಾಡುತ್ತದೆ ಎಂದಿದ್ದಾರೆ. 

ನಟಿ ಖುಷ್ಬೂ ಕೂದಲು ಪಳಪಳ ಹೊಳೆಯುವುದಕ್ಕೆ ಕಾರಣವೇ ಈ ಹೇರ್‌ಪ್ಯಾಕ್‌!

51 ವರ್ಷದ ಖುಷ್ಬೂ ಸಣ್ಣಗಾದ  ಮೇಲಂತೂ ಟ್ರೆಡಿಷನ್ (Tadition Wear) ಮತ್ತು ಮಾರ್ಡನ್ ಉಡುಪುಗಳನ್ನು ಧರಿಸಿ ಫೋಟೋ ಹಂಚಿ ಕೊಳ್ಳುತ್ತಿದ್ದಾರೆ. ಮೇಡಂ ನೀವು ಇನ್ನು ಮುಂದೆ ತಾಯಿ ಅಥವಾ ಅಕ್ಕನ ಪಾತ್ರಗಳನ್ನು ಮಾಡುವ ಅಗತ್ಯವಿಲ್ಲ, ಬಿಡಿ ನೀವು ಮತ್ತೆ ಹೀರೋಯಿನ್ ಆಗಬಹುದು ಎಂದು ನೆಟ್ಟಿಗರು ಹೊಗಳಿದ್ದಾರೆ. ತಮಿಳು  ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಖುಷ್ಬೂ ಅವರು ಸದ್ಯಕ್ಕೆ ತಮ್ಮ ಧಾರಾವಾಹಿ ನಿರ್ಮಾಣದ ಬಗ್ಗೆ ಗಮನ ಹರಿಸುತ್ತಿದ್ದಾರಂತೆ. 

ನವೆಂಬರ್ 29ರಂದು ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಕುಟುಂಬಕ್ಕೆ ಸಾಂತ್ವಾನ ಹೇಳಲು ಖುಷ್ಬೂ ಬೆಂಗಳೂರಿಗೆ ಆಗಮಿಸಿದ್ದರು. ಇದಾದ ನಂತರ ಕುಮಾರ್ ಬಂಗಾರಪ್ಪ ಅವರ ಪುತ್ರಿ ಲಾವಣ್ಯಾ ಅವರ ಮದುವೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು.

 

Follow Us:
Download App:
  • android
  • ios