Asianet Suvarna News Asianet Suvarna News

Valentines Dayಗೆ 'ಡುಮ್ಮ ಬಾಯ್‌ಫ್ರೆಂಡ್' ಪರಿಚಯಿಸಿದ ಕಾರುಣ್ಯ ರಾಮ್‌!

ಸೆಲೆಬ್ರಿಟಿಗಳು ಲವ್‌ ಲೈಫ್‌ ಬಗ್ಗೆ ಮಾತನಾಡುವುದೇ ಕಷ್ಟ. ಅದರಲ್ಲೂ ಪ್ರೇಮಿಗಳ ದಿನವೇ ತಮ್ಮ ಪ್ರೀತಿಯ ಬಗ್ಗೆ ರಿವೀಲ್‌ ಮಾಡಿದ್ದಾರೆ ಅಂದ್ರೆ ಸುಮ್ಮನೇನಾ? ಕಾರುಣ್ಯ ರಾಮ್‌ ಬಾಯ್‌ಫ್ರೆಂಡ್‌ ಹೇಗಿದ್ದಾರೆ ನೋಡಿ..
 

Kannada actress karunya ram revels her boyfriend on Instagram
Author
Bangalore, First Published Feb 14, 2020, 11:34 AM IST

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಕಾರುಣ್ಯ ರಾಮ್‌ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲೂ 'ಕಿರಗೂರಿನ ಗಯ್ಯಾಳಿಗಳು' ಚಿತ್ರ ನೋಡಿದರಂತೂ ನೀವು ಫಿದಾ ಆಗೋದು ಗ್ಯಾರಂಟಿ.

ಇಂದು ಪ್ರೇಮಿಗಳ ದಿನ. ಎಲ್ಲಾ ತಾರೆಯರೂ ತಮ್ಮ ಆಪ್ತರೊಂದಿಗೆ ಫೋಟೋ ಅಪ್ಲೋಡ್‌ ಮಾಡಿ ವಿಶ್‌ ಮಾಡಿರುತ್ತಾರೆ. ಆದರೆ ಕಾರುಣ್ಯ ಸಿಕ್ಕಾಪಟ್ಟೆ ಡಿಫರೆಂಟ್‌...

ಸ್ಯಾಂಡಲ್‌ವುಡ್‌ ಕ್ಯೂಟಿ ಕಾರುಣ್ಯ ರಾಮ್‌ ಫೋನ್‌ನಲ್ಲಿ ಇದ್ನೆಲ್ಲ ಇಟ್ಕೊಂಡಿದ್ದಾರಾ?

ಕಾರುಣ್ಯ ರಾಮ್‌ ತಮ್ಮ ಬಾಯ್‌ ಫ್ರೆಂಡ್‌ ಫೋಟೋವನ್ನು ಸೀರೀಸ್‌ ಮೂಲಕ ರಿವೀಲ್ ಮಾಡಿದ್ದಾರೆ.  'ಇವರೇ ನನ್ನ ಬಾಯ್‌ಫ್ರೆಂಡ್. ಹೆಸರು ಏಕದಂತ. ಗುಟ್ಟಾಗಿ ನನ್ನೊಟ್ಟಿಗೆ ಫೋಸ್‌ ಕೊಡುವಂತೆ ಕೇಳುತ್ತಿದ್ದಾನೆ. ಕೆಲವು ದಿನಗಳ ಹಿಂದೆ ಕಾಡಿನಲ್ಲಿ ಸಿಕ್ಕ ಇವನಿಗೆ ತರಬೇತಿ ನೀಡಲಾಗುತ್ತಿದೆ,' ಎಂದು ಬರೆದುಕೊಂಡಿದ್ದಾರೆ.

ಹೌದು! ಕಾರುಣ್ಯ ಬಾಯ್‌ಫ್ರೆಂಡ್‌ ಏಕದಂತ ಎಂಬ ಆನೆ. 'ಎಷ್ಟು ತುಂಟನೆಂದರೆ, ಚೇಷ್ಟೆ ಮಾಡುವಾಗ ಒಂದು ದಂತವನ್ನೇ ಮುರಿದುಕೊಂಡಿದ್ದಾನೆ. ಅದಕ್ಕೆ ನಾನು ಇನ್ನೊಂದು ಹಿಡಿದಿರುವುದು. ನಾವಿಬ್ಬರೂ ಬ್ಲ್ಯಾಕ್ ಆ್ಯಂಡ್ ವೈಟ್‌ ಕಪಲ್‌ ಆಫ್‌ ಸ್ಯಾಂಡಲ್‌ವುಡ್‌,' ಎಂದು ಮತ್ತೊಂದು ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ಕ್ಯೂಟಿ ಕಾರುಣ್ಯ ರಾಮ್ ಹಾಟ್ ಫೋಟೋಗಳಿವು!

ಬಿಗ್‌ಬಾಸ್ ಕನ್ನಡ ಸೀಸನ್ 4ರಲ್ಲಿ ಸ್ಪರ್ಧಿಯಾಗಿದ್ದ ಈ ಕಾರುಣ್ಯ ರಾಮ್, ಕನ್ನಡ ನಾಡಿಗೆ ಚಿರಪರಿಚಿತರಾಗಿದ್ದೇ ಅವಾಗ..

 

Follow Us:
Download App:
  • android
  • ios