ಆವತ್ತು ನಾಟಕದಲ್ಲಿ ನಟಿಸುವ ಮೊದಲೇ ನಟಿ ಕಲ್ಪನಾ ಅವರಿಗೆ ಮೂಡ್ ಆಫ್ ಆಗುತ್ತಂತೆ. ಆದ್ರೆ, ವೃತ್ತಿಧರ್ಮ, ಕಮಿಟ್‌ಮೆಂಟ್ ಅನ್ನೋ ಕಾರಣಕ್ಕೆ ಅವರು ಸ್ಟೇಜ್‌ಗೆ ಬಂದಿದ್ದರು ಅಷ್ಟೇ. ವೈಯಕ್ತಿಕ ಜೀವನದಲ್ಲಿ ನೊಂದುಬೆಂದು ಹೋಗಿದ್ದರು ನಟಿ ಕಲ್ಪನಾ. ಗಂಡನ ಜೊತೆ ಜಗಳ..

ಕನ್ನಡದ ನಟಿ ಕಲ್ಪನಾ (Kalpana) ಅವರ ಕೊನೆಯ ದಿನಗಳನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳಬಹುದು. ನಟಿ ಕಲ್ಪನಾ ಸಾಸುವ ಹಿಂದಿನ ದಿನ ಬೆಳಗಾವಿಯ ಸಂಕೇಶ್ವರದಲ್ಲಿ ಒಂದು ನಾಟಕ ಇತ್ತು. ಅದೇ ಕ್ಲಪನಾರ ಕೊನೆಯ ನಾಟಕವೂ ಆಗಿತ್ತು. ಆದರೆ, ಅದರ ಅರಿವು ಸ್ವತಃ ಕಲ್ಪನಾ ಸೇರಿದಂತೆ ಯಾರಿಗೂ ಇರಲಿಲ್ಲ. 'ಕುಮಾರ ರಾಮ' ಎಂಬ ನಾಟಕ ಅದಾಗಿತ್ತು. ಗುಡಿಗೇರಿ ಬಸವರಾಜು ಕುಮಾರ ರಾಮನಪಾತ್ರದಲ್ಲಿ ನಟನೆ ಮಾಡ್ತಾ ಇದ್ರು.

ಆದರೆ, ಆವತ್ತು ನಾಟಕದಲ್ಲಿ ನಟಿಸುವ ಮೊದಲೇ ನಟಿ ಕಲ್ಪನಾ ಅವರಿಗೆ ಮೂಡ್ ಆಫ್ ಆಗುತ್ತಂತೆ. ಅವರಿಗೆ ಅಂದು ನಟಿಸುವ ಮೂಡೇ ಇರಲಿಲ್ಲ. ಆದ್ರೆ, ವೃತ್ತಿಧರ್ಮ, ಕಮಿಟ್‌ಮೆಂಟ್ ಅನ್ನೋ ಕಾರಣಕ್ಕೆ ಅವರು ಸ್ಟೇಜ್‌ಗೆ ಬಂದಿದ್ದರು ಅಷ್ಟೇ. ವೈಯಕ್ತಿಕ ಜೀವನದಲ್ಲಿ ನೊಂದುಬೆಂದು ಹೋಗಿದ್ದರು ನಟಿ ಕಲ್ಪನಾ. ಗಂಡನ ಜೊತೆ ಜಗಳ, ಒಂದಿಷ್ಟು ಸಾಲ, ಸಿನಿಮಾ ಆಫರ್ ಇರಲಿಲ್ಲ. ಆರೋಗ್ಯದಲ್ಲೂ ಸಾಕಷ್ಟು ಸಮಸ್ಯೆ ಇತ್ತು. ಇನ್ನೂ ಏನೇನೋ ಕಾರಣಗಳಿದ್ದಿರಬಹುದು. ಒಟ್ಟಿನಲ್ಲಿ ಅಂದು ನಟಿ ಕಲ್ಪನಾ ಅವರು ತುಂಬಾ ಬೇಸರದಲ್ಲೇ ಸ್ಟೇಜ್‌ಗೆ ಬಂದಿದ್ದರು. 

ನಟಿ ಕಲ್ಪನಾ ಮೇಲಿದ್ದ ಎರಡು ಆರೋಪಗಳಲ್ಲಿ ಒಂದು ಸತ್ಯ; ಆ ನಟ ಹೇಳ್ಬಿಟ್ರು!

ಅಂದು ಆ ಕುಮಾರ ರಾಮ ನಾಟಕ ಶುರುವಾಯ್ತು. ಮೊದಲೇ ಬೇಸರದಲ್ಲಿದ್ದ ಕಲ್ಪನಾ ಅವರು ನಾಟಕದ ಮಧ್ಯೆ ಒಂದು ಡೈಲಾಗ್ ತಪ್ಪಾಗಿ ಹೇಳಿದರು. ಅನ್ಯಮನಸ್ಕರಾಗಿದ್ದ ಕಾರಣಕ್ಕೆ ಅದು ತಪ್ಪಾಗಿ ಬಂತೋ ಅಥವಾ ಉದ್ದೇಶಪೂರ್ವಕವಾಗಿಯೇ ಹೇಳಿದರೋ, ಒಟ್ಟಿನಲ್ಲಿ, ಕುಮಾರ ರಾಮ 'ನನಗೆ ಹಸಿವಾಗಿದೆ' ಅಂದಾಗ ನಟಿ ಕಲ್ಪನಾ ಅವರು 'ರೊಟ್ಟಿ ತಿನ್ನು' ಅಂತ ಡೈಲಾಗ್ ಹೇಳ್ಬೇಕಿತ್ತು..'. ಆದರೆ ಕ್ಲಪನಾ ಅವರು 'ಹುಲ್ಲು ತಿನ್ನು' ಅಂತ ಹೇಳಿಬಿಡ್ತಾರೆ. 

ಅಲ್ಲಿಂದ ಶುರುವಾಯ್ತು ನೋಡಿ ಜಗಳ-ರಾದ್ಧಾಂತ. ಗಂಡ, ಗುಡಿಗೇರಿ ಬಸವರಾಜು (Gudigeri Basavaraju) ಅವರು ಅಲ್ಲೇ ಸ್ಟೇಜ್‌ನಲ್ಲೇ ಕಲ್ಪನಾ ಕಪಾಳಕ್ಕೆ ಬಿಗಿದರು. ಅವರಿಬ್ಬರದೂ ಆಲ್ಲಿ ಅಕ್ಷರಶಃ ಬೀದಿ ಬದಿಯ ಜಗಳ-ಹೊಡೆದಾಟದಂತೆ ಕಾಳಗ ನಡೆಯಿತು. ಅದೇ ನೋವಿನಲ್ಲಿ ನಟಿ ಕಲ್ಪನಾ ನಾಟಕ ಬಿಟ್ಟು ಪ್ರವಾಸಿ ಮಂದಿರಕ್ಕೆ ಹೊರಟು ಹೋದರು. ಬಳಿಕ ನಡೆದಿದ್ದೇ ಘೋರ ದುರಂತ. ಅಂದು ಅವರ ಜೊತೆ ಇರುತ್ತಿದ್ದ ಮಹಿಳೆ ಕೂಡ ಇರಲಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ. ಅದೊಂದು ತಪ್ಪಾದ ಟೈಲಾಗ್ ಹೇಳಿದ್ದು ನಟಿ ಕಲ್ಪನಾ ಸಾವಿಗೆ ಕಾರಣ ಆಗೋಯ್ತು.

ಲೋಕದ ಕಣ್ಣಿಗೆ ಕೆಟ್ಟವರು, ಅದ್ರೆ ಈಗ ಮಾಡ್ತಿರೋದು ಒಳ್ಳೇ ಕೆಲಸ.. ಶಾಕಿಂಗ್ ಆದ್ರೂ ಸತ್ಯ!

ಆ ರಾತ್ರಿ ನಟಿ ಕಲ್ಪನಾ ಅವರು ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿಬಿಟ್ಟರು. ಅಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಏನೆಲ್ಲಾ ನೋಡಿ, ಕೊನೆಗೆ ಜೀವನವನ್ನೇ ಅಂತ್ಯ ಗೊಳಿಸಿಕೊಂಡುಬಿಟ್ಟರು. ಅಂದು ಕಲ್ಪನಾಗೆ ಯಾರಾದ್ರೂ ಸರಿಯಾಗಿ ಸಮಾಧಾನ ಮಾಡುವಂಥವರು ಜೊತೆಯಲ್ಲಿ ಇದ್ದಿದ್ದರೆ ಬಹುಶಃ ಅವರು ಪ್ರಾಣತ್ಯಾಗ ಮಾಡುತ್ತಿರಲಿವೋನೋ! ಗೊತ್ತಿಲ್ಲ, ಅದೇ ಬ್ರಹ್ಮ ಬರಹವೋ, ಅಥವಾ ದುಡಕಿನ ನಿರ್ಧಾರವೋ? ಸ್ವತಃ ನಟಿ ಕಲ್ಪನಾ ಮಾತ್ರ ಇದಕ್ಕೆ ಉತ್ತರ ಕೊಡಬಲ್ಲರು. ಆದ್ರೆ, ಅವರ ಬಳಿ ಹೋಗಿ ಈಗ ಕೇಳಿಕೊಂಡು ಬರುವವರು ಯಾರು?