ಬೆಂಗಳೂರು(ಮೇ 12)  ಕನ್ನಡದ ಹಿರಿಯ ನಟಿ ಹಾಗೂ ವಿಧಾನ ಪರಿಷತ್‌ ಸದಸ್ಯೆ ಜಯಮಾಲ ಪುತ್ರಿ  ನಟಿ  ಸೌಂದರ್ಯ ಮೇ 11  ಭಾರತಕ್ಕೆ ಮರಳಿದ್ದರು.  ಲಂಡನ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕನ್ನಡಿಗರನ್ನು ಬೆಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಕರೆತರಲಾಗಿತ್ತು.

ಜಯಮಾಲ ಪುತ್ರಿ ಸೌಂದರ್ಯ ಅನೇಕ ವರ್ಷಗಳಿಂದ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಲಾಕ್‌ಡೌನ್ ಘೋಷಣೆಯಾದಾಗ ಲಂಡನ್‌ನಿಂದ ಭಾರತಕ್ಕೆ ಬರಲು ಪ್ರಯತ್ನಪಟ್ಟರು. ಆದರೆ, ವಿಮಾನಗಳನ್ನು ಬಂದ್ ಮಾಡಿದ್ದ ಕಾರಣ ಅವರಿಗೆ ಭಾರತಕ್ಕೆ ಬರಲು ಸಾಧ್ಯ ಆಗಿರಲಿಲ್ಲ.

ಸ್ವಾತಂತ್ರ್ಯಾನಂತರದಲ್ಲಿಯೇ ಅತಿದೊಡ್ಡ ಏರ್ ಲಿಫ್ಟ್

 ಲಂಡನ್ನಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ? ಸೌಂದರ್ಯ ಸ್ವತಃ ಹೇಗೆ ತಮ್ಮ ಬಗ್ಗೆ ಜಾಗರೂಕತೆವಹಿಸಿ ಕೌರೆಂಟೈನ್ ಆದರು ಎಂಬ ಬಗ್ಗೆ ಮಾತನಾಡಿದ್ದಾರೆ.  ನಟಿ ಸೌಂದರ್ಯ ಜಯಮಾಲ ಭಾರತ ಸರ್ಕಾರಕ್ಕೂ ರಾಜ್ಯ ಸರ್ಕಾರಕ್ಕೂ ಧನ್ಯವಾದ ತಿಳಿಸಿದ್ದಾರೆ.  ಖಾಸಗಿ ಹೋಟೆಲ್ ನಲ್ಲಿ ಕ್ವಾರೆಂಟೈನ್ ಆಗಿರುವ ನಟಿಯ ಪುತ್ರಿ ಸೌಂದರ್ಯ ಜಯಮಾಲ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ನಟಿ ಸೌಂದರ್ಯ ಜಯಮಾಲಾ ಲಂಡನ್ ಪ್ರತಿಷ್ಟಿತ  ಕಾಲೇಜ್‌ ಸ್ವಾನ್ಸೀ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಪ್ರಾಣಿಶಾಸ್ತ್ರದಲ್ಲಿ ವ್ಯಾಸಂಗ  ಮಾಡುತ್ತಿದ್ದರು. ಇನ್ನೂ ಫೈನಲ್‌ ಸೆಮ್‌ ಹಾಗೂ ಗ್ರ್ಯಾಜುಯೇಶನ್‌ ಮುಗಿಸಬೇಕಿದ್ದು ಕೋವಿಡ್‌-19ನಿಂದ ಅದೆಲ್ಲ ಸ್ಥಗಿತವಾಗಿದೆ. ಮಗಳನ್ನು ತಾಯ್ನಾಡಿಗೆ ವಾಪಸ್ ಕರೆದು ತರುವಂತೆ ಜಯಮಾಲಾ ಸಹ ಮನವಿ ಮಾಡಿಕೊಂಡಿದ್ದರು.