Asianet Suvarna News Asianet Suvarna News

ಏರ್‌ಲಿಫ್ಟ್‌; ಲಂಡನ್‌ನಿಂದ ಭಾರತಕ್ಕೆ ನಟಿ ಜಯಮಾಲಾ ಪುತ್ರಿ ವಾಪಸ್!

ಕೊರೋನಾ ವೈರಸ್‌ನಿಂದ ಲಂಡನ್‌ನಲ್ಲಿ ಸಿಲುಕಿಕೊಂಡಿದ್ದ  ನಟಿ ಜಯಮಾಲಾ ಪುತ್ರಿ ಸೌಂದರ್ಯ ಭಾರತಕ್ಕೆ ವಾಪಸ್‌ ಆಗಿದ್ದಾರೆ.

kannada actress Jayamala daughter Soundarya returns India through Vade Bharatam airlift
Author
Bangalore, First Published May 11, 2020, 5:05 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗ ಹೆಸರಾಂತ ನಟಿ ಹಾಗೂ ಮಾಜಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಅವರ ಪುತ್ರಿ  ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಭಾರತಕ್ಕೆ ಬರಲಾಗದೆ ಲಂಡನ್‌ನಲ್ಲಿ ಸಿಲುಕಿಕೊಂಡಿದ್ದರು ಆದರೀಗ ಏರ್‌ಲಿಫ್ಟ್‌ ಮೂಲಕ ತಾಯ್ನಾಡಿಗೆ ವಾಪಸ್ ಬಂದಿದ್ದಾರೆ.

ವಿದೇಶದಲ್ಲಿ ಸೌಂದರ್ಯ ವಿದ್ಯಾಭ್ಯಾಸ :

ನಟಿ ಸೌಂದರ್ಯ ಜಯಮಾಲಾ ಲಂಡನ್ ಪ್ರತಿಷ್ಟಿತ  ಕಾಲೇಜ್‌ ಸ್ವಾನ್ಸೀ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಪ್ರಾಣಿಶಾಸ್ತ್ರದಲ್ಲಿ ವ್ಯಾಸಂಗ  ಮಾಡುತ್ತಿದ್ದಾರೆ, ಇನ್ನೂ ಫೈನಲ್‌ ಸೆಮ್‌ ಹಾಗೂ ಗ್ರ್ಯಾಜುಯೇಶನ್‌ ಮುಗಿಸಬೇಕಿದ್ದು ಕೋವಿಡ್‌-19ನಿಂದ  ಸ್ಥಗಿತವಾಗಿದೆ.

ಜಯಮಾಲಾ ಪುತ್ರಿ, ನಾರಾಯಣಸ್ವಾಮಿ ಪುತ್ರ ವಿದೇಶದಲ್ಲಿ ಪರದಾಟ!

ಲಾಕ್‌ಡೌನ್‌ನಿಂದಾಗಿ ಆನ್‌ಲೈನ್‌ನಲ್ಲಿ ಶಿಕ್ಷಣ ಹಾಗೂ ಕೆಲವೊಂದು ಅಸೈನ್ಮೆಂಟ್‌ ಸಬ್ಮಿಟ್‌ ಮಾಡುವುದು ಉಳಿದಿದ್ದ ಕಾರಣ ಭಾರತಕ್ಕೆ ಬರಬೇಕು ಎಂದು ನಿರ್ಧರಿಸಿದ್ದರು. ಆದರೆ ಸೌಂದರ್ಯ ಅವರ ಶಿಕ್ಷಕರು ಕೊರೋನಾ ವೈರಸ್‌ನಿಂದಾ ಮೃತಪಟ್ಟಿದ್ದಾರೆಂದು ಹೆದರಿ ಬರಬೇಕು ಎನ್ನುತ್ತಿದ್ದಾರೆ ಎಂದು ಹರಿದಾಡುತ್ತಿದ್ದ ಮಾತುಗಳಿಗೆ 'ಅಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ. 

ಮಗಳನ್ನು ಭಾರತಕ್ಕೆ ಕರೆತರಿಸಲು ಜಯಮಾಲಾ ಮನವಿ:

ವಿದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದ ಕಾರಣ ಜಯಮಾಲಾ ತಮ್ಮ ಮಗಳನ್ನು ಭಾರತಕ್ಕೆ ಕರೆ ತರಲು ವ್ಯವಸ್ಥೆ ಮಾಡಿ ಎಂದು ಕೋರಿದ್ದರು. 'ನನ್ನ ಮಗಳು ಲಂಡನ್‌ನಲ್ಲಿ ಇದ್ದಾಳೆ. ಆದರೆ ಅಲ್ಲಿ ವಿಮಾನಗಳಿಲ್ಲ.  ನನ್ನ ಮಗಳ ರೀತಿ ಅಲ್ಲಿ ಅನೇಕರು ಅರ್ಧದಲ್ಲಿಯೇ ಸಿಲುಕಿಕೊಂಡಿದ್ದಾರೆ. ದಯವಿಟ್ಟು ಅವರಿಗೆ ಸೂಕ್ತ ವ್ಯವಸ್ಥೆ ಮಾಡಿ' ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. 

ಯಾರಿಗೂ ಕಾಣಿಸದಂತೆ ಎಲಿಗೋದ್ರು ನಟಿ ಜಯಮಾಲಾ ಪುತ್ರಿ?

ಸೌಂದರ್ಯಗೆ ಈಗ ಕ್ವಾರಂಟೈನ್: 

ಇಂದು ಬೆಳಗ್ಗೆ ಸುಮಾರು 3 ಗಂಟೆಗೆ ಏರ್‌ ಇಂಡಿಯಾ ವಿಮಾನ  240 ಕನ್ನಡಿಗರನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ತಂದಿದೆ .  ಇವರಲ್ಲಿ ಸೌಂದರ್ಯ ಕೂಡ ಒಬ್ಬರಾಗಿದ್ದು  ಈಗ ಕ್ವಾರಂಟೈನ್‌ ಮಾಡಲಾಗುತ್ತದೆ. 

ವಿದೇಶದಿಂದ ಬಂದವರು 14 ದಿನಗಳ ಕ್ವಾರಂಟೈನ್‌ ಮಾಡಲಾಗುತ್ತದೆ ಆನಂತರ ಮತ್ತೆ 14 ದಿನ ಹೋಮ್ ಕ್ವಾರಂಟೈನ್ ಆಗಬೇಕಿದೆ. ವಿಮಾನ ನಿಲ್ದಾಣದಿಂದ ಸೀದಾ  ಅವರನ್ನು ಕ್ವಾರಂಟೈನ್‌ ಮಾಡುವ ಹೋಟೆಲ್‌ಗೆ ಕರೆದುಕೊಂಡು ಹೋಗಲಾಗಿದ್ದು ಈ  ಅವಧಿಯ ವೆಚ್ಚವನ್ನು ಅವರೇ ಭರಿಸಬೇಕು.

Follow Us:
Download App:
  • android
  • ios