ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿತಾ ಚಂದ್ರಶೇಖರ್
ಸ್ಯಾಂಡಲ್‌ವುಡ್ ಸ್ವೀಟ್ ಕಪಲ್ ಸಿಹಿಕಹಿ ಚಂದ್ರು - ಗೀತಾ ಪುತ್ರಿ ಹಿತಾ ಚಂದ್ರಶೇಖರ್, ಕಿರಣ್ ಶ್ರೀನಿವಾಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸ್ಯಾಂಡಲ್‌ವುಡ್ ಹಿರಿಯ ನಟ, ಕಾಮಿಡಿಯನ್ ಸಿಹಿಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಇಂದು ಕಿರಣ್ ಶ್ರೀನಿವಾಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹಿತಾ- ಕಿರಣ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ನಟಿ ಕೃಷಿ ತಾಪಂಡ, ಅನುಪಮಾ ಗೌಡ, ಆರ್ ಜೆ ಸಿರಿ, ಸೇರಿದಂತೆ ಸಾಕಷ್ಟು ಕಲಾವಿದರು ಸಾಕ್ಷಿಯಾದರು.
ಅಯ್ಯಯ್ಯೋ... ಬಟ್ಟೆ ಸಿಗದೇ ಪೇಪರ್‌ನಲ್ಲಿ ಮಾನ ಮುಚ್ಚಿಕೊಂಡ ನಟಿ!
1/4 ಕೆಜಿ ಪ್ರೀತಿ, ದುನಿಯಾ -2, 'ಒಂಥರಾ ಬಣ್ಣಗಳು' 'ತುರ್ತು ನಿರ್ಗಮನ' ಸಿನಿಮಾಗಳಲ್ಲಿ ಹಿತಾ ಅಭಿನಯಿಸಿದ್ದಾರೆ. 'ಹಾಗೇ ಸುಮ್ಮನೆ', 'ಪ್ರೀತಿಯಿಂದ ರಮೇಶ್', 'ನಿರುತ್ತರ' ಸಿನಿಮಾಗಳಲ್ಲಿ ಶ್ರೀನಿವಾಸ್ ಅಭಿನಯಿಸಿದ್ದಾರೆ. 'ಒಂಥರಾ ಬಣ್ಣಗಳು' ಶೂಟಿಂಗ್ ಟೈಮಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿದೆ.