'ದೊರೆ'ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹೇಮಾ ಪಂಚಮುಖಿ ತಮ್ಮ ಎರಡನೇ ಚಿತ್ರವನ್ನು ರಜನಿಕಾಂತ್‌ ಎಂದು ತಿಳಿಯುತ್ತಿದ್ದಂತೆ ರಿಜೆಕ್ಟ್‌ ಮಾಡಿದ್ದಾರಂತೆ. ಖಾಸಗಿ ವೆಬ್ಸೈಟ್ಗೆ ನೀಡಿರುವ ಸಂದರ್ಶನದಲ್ಲಿ ಹೇಮಾ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ.....

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ 'ದೊರೆ' ಚಿತ್ರದಲ್ಲಿ ಮಿಂಚಿದ ಹೇಮಾ ಪಂಚಮುಖಿಗೆ ಕನ್ನಡ ಚಿತ್ರರಂಗದಿಂದ ಮಾತ್ರವಲ್ಲದೆ ಪರಭಾಷೆಯಿಂದಲ್ಲೂ ಅವಕಾಶಗಳು ಹರಿದು ಬಂದವರು. 

‘ಅಮೇರಿಕಾ ಅಮೇರಿಕಾ’ ಚಿತ್ರದ ಭೂಮಿಕಾ ಹೀಗಿದ್ದಾರೆ ನೋಡಿ!

'ದೊರೆ' ಚಿತ್ರ ಫ್ಲಾಪ್ ಆದರೂ ನಟಿಯಾಗಿ ಮಿಂಚಿದ ಹೇಮಾ ಅವರಿಗೆ ಟಾಲಿವುಡ್‌ನಿಂದ ಅವಕಾಶ ಹರಿದು ಬಂದವು. 'ದೊರೆ ಬಿಡುಗಡೆ ಬಳಿಕ ಕನ್ನಡ ಸಿನಿಮಾ ಇದ್ದರೆ ಮಾತ್ರ ಮಾಡುವುದು ಎಂದು ನಿರ್ಧರಿಸಿದೆ. ಅದಕ್ಕೆ ನಿರ್ದೇಶಕರು ರಜನಿಕಾಂತ್ ಅವರ ಜೊತೆ ಅಂದರು. ಸರಿ ಒಂದು ಸಲ ಕಥೆ ಹೇಳಿ ಅಂದೆ. ಅದಕ್ಕೆ ಅವರು ಕಥೆ ರಿವೀಲ್ ಮಾಡುವುದಕ್ಕೆ ಆಗಲ್ಲ ಎಂದರು. ನಾನು ಹಾಗಾದ್ರೆ ಬೇಡ ಬಿಡಿ ನಾನು ಮಾಡಲ್ಲ ಎಂದು ಬಿಟ್ಟೆ' ಎಂದು ಖಾಸಗಿ ವೆಬ್ಸೈಟ್‌ಗೆ ಮಾತನಾಡಿದ್ದಾರೆ.

ಎಂಥಾ ಪಾತ್ರಕ್ಕೂ ಸೈ ಅಂತಾರೆ 'ಸೀತಾ ವಲ್ಲಭ'ದ ಮಾಡರ್ನ್ ಅತ್ತೆ!

ಇನ್ನು ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ಸಿರಿವಂತ ಕುಟುಂಬದ ತಾಯಿಯಾಗಿ ಅಭಿನಯಿಸಿದ್ದಾರೆ. ಹೇಮಾ ಅವರ ಹಿಟ್‌ ಚಿತ್ರಗಳೆಂದರೆ 1995ರಲ್ಲಿ ತೆರೆ ಕಂಡ ಅಮೇರಿಕಾ ಅಮೇರಿಕಾ, ಬಂಗಾರ ಮನೆ ಹಾಗೂ 1999ರಲ್ಲಿ ಸಂಭ್ರಮ ಮತ್ತು ರವಿಮಾಮ.