ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿದ ಹರ್ಷಿಕಾ ಪೂಣಚ್ಚ; ಪಾಸಿಟಿವ್ ಎಂದು ಕಣ್ಣೀರಿಟ್ಟ ನಟಿ!

ಪ್ರೆಗ್ನೆನ್ಸಿ ಎಷ್ಟು ಎಂಜಾಯ್ ಮಾಡುತ್ತಿದ್ದಾರೆ ಹರ್ಷಿಕಾ? ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾದ ನಟಿ.....

Kannada actress Harshika Poonacha shares pregnancy journey and family love vcs

ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊಣ್ಣನ್ನ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಷ್ಟು ದಿನ ಊರಿನಲ್ಲಿ ರೆಸ್ಟ್ ಮಾಡುತ್ತಿದ್ದ ನಟಿ ಈಗ ಬೆಂಗಳೂರಿಗೆ ಬಂದು ತಮ್ಮ ಹಗ್ಗ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪ್ರೆಗ್ನೆಂಟ್‌ ಆದ್ಮೇಲೆ ಹೊರ ಬರಲು ಯೋಚನೆ ಮಾಡುವ ಜನರ ನಡುವೆ ವೃತ್ತಿ ಜೀವನಕ್ಕೂ ಪ್ರಾಮುಖ್ಯತೆ ನೀಡಿ ಬಂದಿರುವುದನ್ನು ನೋಡಿ ಅನೇಕರು ಖುಷಿ ಪಟ್ಟಿದ್ದಾರೆ. 

ಪ್ರೆಗ್ನೆನ್ಸಿ ಅನೌನ್ಸ್‌ನಿಂದ ಸಿಕ್ಕ ಪ್ರೀತಿ:

ಕೊಡವ ಸಂಪ್ರದಾಯದಲ್ಲಿ ಫೋಟೋಶೂಟ್ ಮಾಡಿಸಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಈ ಸೆಲೆಬ್ರಿಟಿ ಜೋಡಿಗಳಿಗೆ ಸಿಕ್ಕಾಪಟ್ಟೆ ಪ್ರೀತಿ ಸಿಗುತ್ತಿದೆ. ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರೀತಿ ಸಿಕ್ಕಿದೆ ತುಂಬಾ ಖುಷಿಯಾತ್ತಿದೆ. ನಾನು ಪ್ರೆಗ್ನೆನ್ಸಿ ಟೆಸ್ಟ್‌ ಮನೆಯಲ್ಲಿ ಮಾಡಿದಾಗ ಪಾಸಿಟಿವ್ ಬಂತು ಆಗ ನನ್ನ ಕಣ್ಣನಲ್ಲಿ ನೀರು ತುಂಬಿಕೊಂಡಿತ್ತು, ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ತಕ್ಷಣ ಪ್ರಯಾಣ ಮಾಡುತ್ತಿದ್ದ ಭುವನ್‌ಗೆ ವಿಡಿಯೋ ಕಾಲ್ ಮಾಡಿ ತಿಳಿಸಿದೆ. ವಿಡಿಯೋ ಕಾಲ್‌ನಲ್ಲಿ ನನ್ನನ್ನು ನೋಡಿ ಯಾಕೆ ನೀವು ಅಳುತ್ತಿರುವೆ ಎಂದು ಕೇಳಿದ್ದರು ಅತ ಪಾಸಿಟಿವ್‌ ಟೆಸ್ಟ್‌ ತೋರಿಸಿದಾಗ ಖುಷಿ ಪಟ್ಟರು. ಇದು ಏನೇ ಇದ್ದರೂ ದೇವರ ಆಶೀರ್ವಾದ. ಹಂತ ಹಂತವಾಗಿ ನಮ್ಮ ಜೀವನ ನಡೆಯುತ್ತಿದೆ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಹರ್ಷಿಕಾ ಮಾತನಾಡಿದ್ದಾರೆ. 

ಪ್ರೆಗ್ನೆಂಟ್ ಎಂದು ತಿಳಿದಾಗ ವಿಡಿಯೋ ಕಾಲ್ ಮಾಡಿ ಕಣ್ಣೀರಿಟ್ಟೆ, ನಮ್ಮಲ್ಲಿ ಸೀಮಂತ ಇಲ್ಲ: ಹರ್ಷಿಕಾ ಪೂಣಚ್ಚ

ಆರೋಗ್ಯ ಮುಖ್ಯ:

ಹೊರಗಡೆ ಊಟ ನನಗೆ ಆಗಿ ಬರೋಲ್ಲ ಏನೇ ತಿಂದರೂ ಹೊಟ್ಟೆ ಹಾಳಾಗುತ್ತದೆ ಹೀಗಾಗಿ ಮನೆ ಊಟ ಮಾಡುತ್ತಿರುವೆ. ಭುವನ್, ಅಮ್ಮ ಮತ್ತು ನಾನು ಮಾಡಿರುವ ಅಡುಗೆಯನ್ನು ನಾನು ತಿನ್ನುತ್ತಿರುವೆ. ಊರಿನಲ್ಲಿ ಸಮಯ ಕಳೆಯುವುದಕ್ಕೆ ತುಂಬಾನೇ ಇಷ್ಟವಾಗುತ್ತದೆ ಆದರೆ ಅಲ್ಲಿ ಮಳೆ ಜೋರಾಗಿ ಬರುತ್ತಿದೆ ಅಲ್ಲದೆ ನೆಲ ಜಾರುವ ಮಟ್ಟಕ್ಕೆ ಇರುವ ಕಾರಣ ಆ ಕಡೆ ಪ್ರಯಾಣ ಮಾಡುತ್ತಿಲ್ಲ. ಆ ಪ್ರಶಾಂತವಾದ ಜಾಗದಲ್ಲಿ ಸಮಯ ಕಳೆಯುವುದಕ್ಕೆ ತುಂಬಾ ಇಷ್ಟ ಆದರೆ ತುಂಬಾ ಮಳೆ ಇದೆ ಎಂದು ಹರ್ಷಿಕಾ ಹೇಳಿದ್ದಾರೆ.

ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ; ಅಕ್ಟೋಬರ್‌ಗೆ ಕಾಯುತ್ತಿರುವ ಎಂದ ಪತಿ ಭುವನ್!

ಕುಟುಂಬದ ಪ್ರೀತಿ:

ತಂದೆ ಪ್ರೀತಿಯನ್ನು ನನಗೆ ಭುವನ್ ಮೂಲಕ ಸಿಗುತ್ತಿದೆ. ನಿನಗೆ ಏನೇ ತಿನ್ನಲು ಆಸೆ ಆದರೆ ಹೊರಗಿನಿಂದ ತರಿಸಬೇಡ ನಾನೇ ಮನೆಯಲ್ಲಿ ಮಾಡಿಕೊಡುತ್ತೀನಿ ಅಂತಾರೆ ಭುವನ್. ನನ್ನ ತಂದೆ ಜೊತೆ ಭುವನ್‌ನ ಕಂಪೇರ್ ಮಾಡುವುದಿಲ್ಲ ಆದರೆ ತಂದೆ ಜಾಗದಲ್ಲಿ ನಿಂತು ಪ್ರತಿಯೊಂದನ್ನು ಮಾಡುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಇದು ಮೊದಲ ಮಗು ಹೀಗಾಗಿ ಪ್ರತಿಯೊಬ್ಬರು ಖುಷಿಯಾಗಿದ್ದಾರೆ. ಅಕ್ಟೋಬರ್‌ ತಿಂಗಳಿನಲ್ಲಿ ಮಗಳು ಅಥವಾ ಮಗ ಬರ್ತಾನೆ. ನನ್ನ ವೈದ್ಯರು ಇಲ್ಲಿ ಇರುವ ಕಾರಣ ಮದರ್‌ಹುಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದಿದ್ದಾರೆ ಹರ್ಷಿಕಾ. 

 

Latest Videos
Follow Us:
Download App:
  • android
  • ios