ಬಹು ಬೇಡಿಕೆಯ ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಸಿನಿಪ್ರೇಕ್ಷಕರಲ್ಲಿನ ಈ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಮಿಲ್ಕಿ ಬ್ಯೂಟಿ ಹರ್ಷಿಕಾ ಪೂಣಚ್ಚ ಬಣ್ಣದ ಲೋಕದಲ್ಲಿ ಮತ್ತೆ ಫಿನಿಕ್ಸ್ ನಂತೆ ಪುಟಿದೇಳಲು ರೆಡಿ ಆಗಿದ್ದಾರೆ.

ಒಂದಷ್ಟು ಗ್ಯಾಪ್ ನಂತರ ಭರ್ಜರಿ ಅವಕಾಶಗಳೊಂದಿಗೆ ಹರ್ಷಿಕಾ ಅವರ ಎರಡನೇ ಇನ್ನಿಂಗ್ಸ್ ಶುರುವಾಗುತ್ತಿದೆ.ಅವರ ಅಭಿಮಾನಿಗಳೇ ಶಾಕ್ ಆಗುವ ಹಾಗೆ ಬೆಳ್ಳಿತೆರೆಯಲ್ಲಿ ಬಣ್ಣದ ಚಿಟ್ಟೆಯಾಗಿ ಹಾರಾಡುವುದು ಗ್ಯಾರಂಟಿಯಂತೆ. ಇಷ್ಟರಲ್ಲೇ ಇಂತಹದೊಂದು ಮ್ಯಾಜಿಕ್ ಮಾಡಲು ರೆಡಿ ಆಗಿದ್ದಾರಂತೆ ಹರ್ಷಿಕಾ. ಆ ಕುರಿತ ಅಧಿಕೃತ ಮಾಹಿತಿ ಅವರಿಂದಲೇ ರಿವೀಲ್ ಆಗಿದೆ.

'ಜೊತೆ ಜೊತೆಯಲಿ' 50 ಸಂಚಿಕೆ ಸಂಭ್ರಮ; ಅನುಗೂ, ಆರ್ಯವರ್ಧನ್‌ಗೂ ಆಗುತ್ತಾ ಲಗ್ನ?

ಹಾಗಾದ್ರೆ ಅವರೀಗ ಒಪ್ಪಿಕೊಂಡ ಸಿನಿಮಾಗಳು ಯಾವು, ಯಾವ ಸ್ಟಾರ್‌ಗೆ ಜೋಡಿಯಾಗುತ್ತಿದ್ದಾರೆ, ಆ ಸಿನಿಮಾಗಳ ಕತೆ ಏನು, ಅವು ಶುರುವಾಗುವುದು ಯಾವಾಗ ಎನ್ನುವ ಇಂಟರೆಸ್ಟಿಂಗ್ ಸುದ್ದಿಗೂ ಮುನ್ನ, ಇಷ್ಟು ದಿನ ಹರ್ಷಿಕಾ ಪೂಣಚ್ಚ ತೆರೆ ಮರೆಗೆ ಸರಿದಿದ್ದುಯಾಕೆ ? ಏನಾಯಿತು ಅವರ ಸಿನಿ ಬದುಕಲ್ಲಿ? ಈ ಪ್ರಶ್ನೆಗೆ ಅವರೇ ನೀಡಿದ ಉತ್ತರ ಇಲ್ಲಿದೆ. ‘

'ಕೆಲವೊಮ್ಮೆ ಇಂತಹ ಪವಾಡಗಳು ನಡೆದು ಹೋಗುತ್ತವೆ. ಗೊತ್ತೋ ಗೊತ್ತಿಲ್ಲದೆಯೋ ನಮಗೆ ನಾವೇ ಸೈಡ್‌ಗೆ ಸರಿದು ಬಿಡುತ್ತವೆ’ ಎನ್ನುವ ಕುತೂಹಲದ ಮಾತುಗಳ ಮೂಲಕವೇ ಶುರುವಾಗುತ್ತೆ ಒಂದೂವರೆ ವರ್ಷಗಳ ತೆರೆ ಮರೆಯ ಹಿಂದಿದ್ದ ಅವರ ನೋವಿನ ಕತೆ.

ಅದೊಂದು ನೋವಿನ ಕತೆ...:

‘ನಟನೆಯಲ್ಲಿ ಎಷ್ಟೇ ಬ್ಯುಸಿ ಆಗಿದ್ದ ದಿನಗಳಲ್ಲೂ ಕೂಡ ನಾನು ವಿದೇಶ ಪ್ರವಾಸ, ಸಾರ್ವಜನಿಕ ಕಾರ್ಯಕ್ರಮ, ಸಮಾಜ ಸೇವೆ ಅಂತೆಲ್ಲ ಸುತ್ತುವುದು ನಿಂತಿರಲಿಲ್ಲ. ಕೆಲಸದ ಒತ್ತಡದ ನಡುವೆಯೂ ನನ್ನದೇ ಸಮಯ ಫಿಕ್ಸ್ ಮಾಡಿಕೊಂಡು ದೇಶ ಸುತ್ತುವುದು, ಸಮಾಜ ಸೇವೆಗಾಗಿ ಊರೂರು ಅಲೆಯುವುದು ಇದ್ದೇ ಇತ್ತು. ಈ ನಡುವೆಯೇ ನನ್ನ ಬದುಕಿನಲ್ಲಿ ಒಂದು ಅಘಾತ ನಡೆದು ಹೋಯಿತು. ಅಪ್ಪ ತೀರಿಕೊಂಡರು. ಅವರಿಲ್ಲದ ದಿನಗಳು ನನ್ನನ್ನು ತೀವ್ರವಾಗಿ ಕಾಡಿದವು. ಎಲ್ಲಿಗೂ ಅಲೆದಾಡುವುದಕ್ಕೂ ಬಿಡಲಿಲ್ಲ. ಸಿನಿಮಾ ಚಟುವಟಿಕೆಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ನನ್ನ ಸಿನಿ ಕರಿಯರ್‌ಗೆ ಅದೇ ದೊಡ್ಡ ತಪ್ಪಾಗಿ ಹೋಯಿತು. ಇನ್ನು ನಾನು ಸಿನಿಮಾ ಮಾಡುತ್ತಿಲ್ಲ. ಸಿನಿಮಾದಿಂದಲೇ ದೂರವಾಗಿ ಬಿಟ್ಟೆ, ಖಾಸಗಿ ಬದುಕಿನಲ್ಲಿ ಬ್ಯುಸಿ ಆದೆ ಎನ್ನುವ ಮಾತುಗಳು ಕೆಲವರಿಂದ ಹರಿದಾಡಿದವು. ಚಿತ್ರೋದ್ಯಮ ಅದೇ ನಿಜ ಎಂಬಂತೆ ನಂಬಿತು.

ಸಿನಿಮಾ ಒಪ್ಪಿಕೊಳ್ಳುತ್ತಿರುವುದು ಸಂಖ್ಯೆಗೋಸ್ಕರ ಅಲ್ಲ: ರಚಿತಾ ರಾಮ್  

ಹೊಸ ಹೆಜ್ಜೆಯ ಜಾಡು..:

ಸಿನಿಮಾ ಬದುಕೇ ಹಾಗೆ. ಹರ್ಷಿಕಾ ಪೂಣಚ್ಚ ಮಾತ್ರವಲ್ಲ, ಒಂದೊಮ್ಮೆ ಬಹುಬೇಡಿಕೆಯ ನಟಿಯಾಗಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ ಸ್ಟಾರ್ ನಟಿಗೆ ಅವಕಾಶ ನಿಂತು ಹೋದರೆ, ಬದುಕೇ ನಿಂತು ಹೋದಂತಹ ಅನುಭವ ಆಗುವುದು ಸಹಜ. ಅದೇ ಅನುಭವ ಈಗ ಹರ್ಷಿಕಾ ಪೂಣಚ್ಚ ಅವರಿಗೂ ಆಗಿದೆ. ಹರ್ಷಿಕಾ ಅವರ ಸಿನಿ ಜರ್ನಿ ಬಲ್ಲವರಿಗೆ ಅವರ ನಟನೆ, ಸಿನಿಮಾ ಬದ್ದತೆ ಏನೆಂಬುದುವುದು ಗೊತ್ತೇ ಇದೆ.

ನಟನೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ ಕೊಡಗಿನ ಬೆಡಗಿ ಅವರು. 2008 ರಲ್ಲಿ ‘ ಪಿಯುಸಿ’ ಚಿತ್ರದೊಂದಿಗೆ ನಟಿಯಾಗಿ ಬೆಳ್ಳಿತೆರೆಗೆ ಎಂಟ್ರಿಯಾದವರು, ಹಿಂತಿರುಗಿ ನೋಡಿದ್ದೇ ಇಲ್ಲ. ಸ್ಟಾರ್ ನಟರ ಜತೆಗೆ ಮಾತ್ರವಲ್ಲದೆ, ಹೊಸಬರ ಸಿನಿಮಾಗಳಿಗೂ ನಾಯಕಿ ಮಿಂಚಿದವರು. ಅತ್ಯುತ್ತಮ ನಟಿ ಎನ್ನುವ ಪ್ರಶಸ್ತಿಗೂ ಪಾತ್ರವಾದವರು. ಆದರೆ ಖಾಸಗಿ ಬದುಕಿನ ಒಂದು ಅಘಾತ ಅವರ ಸಿನಿ ಕರಿಯರ್‌ಗೆ ಇಷ್ಟೇಲ್ಲ ಅಡ್ಡಿ ಆಗುತ್ತೆ ಎನ್ನುವುದನ್ನು ತಾವೂ ಕೂಡ ಕನಸಲ್ಲೂ ಎಣಿಸಿರಲಿಲ್ಲ ಎನ್ನುವ ನೋವಿನ ಮಾತುಗಳಲ್ಲೇ ಹೊಸ ಹೆಜ್ಜೆಯ ಜಾಡು ತೋರಿಸುತ್ತಾರೆ ಹರ್ಷಿಕಾ.

ನಾನೆಲ್ಲೂ ಹೋಗಿಲ್ಲ...: ‘ನಾನೆಲ್ಲೂ ಹೋಗಿಲ್ಲ, ನಟನೆಯಿಂದಲೂ ದೂರವಾಗಿಲ್ಲ. ಸಿನಿಮಾ ನನ್ನ ಉಸಿರು. ನಟನೆಯೇ ಬದುಕು ಎಂದು ಬೆಳ್ಳಿತೆರೆಗೆ ಕಾಲಿಟ್ಟವಳು ನಾನು. ಕಳೆದ ಒಂದು - ಒಂದೂವರೆ ವರ್ಷದಲ್ಲಿ ಏನಾಯಿತೋ ಆ ಬಗ್ಗೆ ನಾನು ಹೆಚ್ಚು ಯೋಚಿಸಲು ಹೋಗುವುದಿಲ್ಲ. ಮುಂದೇನು ಎನ್ನುವುದು ಮುಖ್ಯ. ಈಗಾಗಲೇ ಒಂದಷ್ಟು ಸಿನಿಮಾಗಳ ಮಾತುಕತೆಗಳು ಶುರುವಾಗಿವೆ. ೨೦೨೦ಕ್ಕೆ ತೆಲುಗು ಮತ್ತು ತಮಿಳಿನಲ್ಲೂ ಸಿನಿಮಾ ಮಾಡುವುದು ಗ್ಯಾರಂಟಿ ಆಗಿದೆ. ಅಷ್ಟಾಗಿಯೂ ಕನ್ನಡವೇ ನನ್ನ ಆದ್ಯತೆ.

good Newwz! ತಾಯಿಯಾಗುತ್ತಿದ್ದಾರೆ ಕರೀನಾ, ಕಿಯಾರಾ!

ಕತೆ ಕೇಳುವ ಪ್ರಕ್ರಿಯೆ ನಡೆದಿದೆ. ಹೊಸಬರು, ಹಳಬರು ಎನ್ನುವುದಕ್ಕಿಂತ ಒಳ್ಳೆಯ ಕತೆ ಮತ್ತು ಪಾತ್ರ ಸಿಕ್ಕರೆ ಸಿನಿಮಾ ಮಾಡಲು ನಿರ್ಧರಿಸಿದ್ದೇನೆ. ಎರಡ್ಮೂರು ಕತೆಗಳು ಮನಸ್ಸಿಗೆ ಹಿಡಿಸಿವೆ. ಅವು ಫೈನಲ್ ಆಗುವ ಹಂತಕ್ಕೆ ಬಂದಿವೆ. ಹಾಗೆಯೇ ತಮಿಳು ಸಿನಿಮಾವೊಂದಕ್ಕೂ ಮಾತುಕತೆ ನಡೆದಿದೆ. ೨ನೇ ಇನ್ನಿಂಗ್ಸ್ ಅದ್ಭುತವಾಗಿ ಶುರುವಾಗುವ ಬಗ್ಗೆ ನನ್ನಲ್ಲಿ ಅತೀವ ಭರವಸೆ ಇದೆ ’ ಎನ್ನುತ್ತಾ ಮುಖದಲ್ಲಿ ಮೋಹಕ ನಗೆ ಬೀರುತ್ತಾರೆ ಹರ್ಷಿಕಾ.