ಮಲ್ಲೇಶ್ವರಂನಲ್ಲಿ ಬ್ರಾಹ್ಮಿನ್‌ ಕ್ರೌಡ್‌ ಜಾಸ್ತಿ; ಹೋಟೆಲ್‌ ಬಾಗಿಲು ಮುಚ್ಚಿದ ನಟಿ ಆಶಿತಾ

ನಟಿ ಆಶಿತಾ ಮಾರಿಯಾ ಕ್ರಾಸ್ತಾ ಹೋಟೆಲ್‌ ಬ್ಯುಸಿನೆಸ್‌ ಆರಂಭಿಸಿದ ಕಥೆಯನ್ನು ಹಂಚಿಕೊಂಡಿದ್ದಾರೆ. ಇಟಾಲಿಯನ್‌ನಿಂದ ಇಂಡಿನ್‌ಗೆ ಶಿಫ್ಟ್‌ ಆದ ಕತೆ....

Kannada actress Ashitha Maria Crasta talks about her Malleshwaram hotel vcs

ಮೈ ಗ್ರೀಟಿಂಗ್ಸ್‌, ತವರಿನ ಸಿರಿ, ರೋಡ್ ರೋಮಿಯೋ, ಗ್ರೀನ್ ಸಿಗ್ನಲ್ ಮತ್ತು ಬಾ ಬಾರೋ ರಸಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಆಶಿತಾ ಮಾರಿಯಾ ಕ್ರಾಸ್ತಾ ಮಲ್ಲೇಶ್ವರಂನಲ್ಲಿ ಹೋಟೆಲ್ ಆರಂಭಿಸಿದ ಕಥೆಯನ್ನು ಮೊದಲ ಸಲ ಹಂಚಿಕೊಂಡಿದ್ದಾರೆ. ನಿರ್ದೇಶಕ ಕಮ್ ನಟ ರಘುರಾಮ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಕಥೆಯನ್ನು ಹಂಚಿಕೊಂಡಿದ್ದಾರೆ.

'ನಾನು ಯಾವಾಗಲೂ ಬ್ಯುಸಿನೆಸ್‌ ವ್ಯಕ್ತಿ ಆಗಿದ್ದೆ. ನನ್ನ ತಾಯಿ ಗುಜರಾತಿ ಆದರೆ ಹುಟ್ಟಿ ಬೆಳೆದಿದ್ದು ಬಾಂಬೆಯಲ್ಲಿ. ಆನಂತರ ಕ್ಯಾಥೋಲಿಕ್ ಅವರನ್ನು ಮದುವೆಯಾದ್ದರು. ನನ್ನಲ್ಲಿ ಆ  ಗುಜರಾತಿ ರಕ್ತ ಹರಿಯುತ್ತಿದೆ ಅಂದ್ರೆ ಬ್ಯುಸಿನೆಸ್‌ ಮೈಂಡ್‌ ಇದೆ. ನನ್ನ ತಂದೆ ರೇಗಿಸುತ್ತಾರೆ ಎಲ್ಲೋ ಅವ್ರು ಕಡೆ ಹೋಗಿದ್ಯಾ ಅದಿಕ್ಕೆ ಬ್ಯುಸಿನೆಸ್ ಬ್ಯುಸಿನೆಸ್‌ ಅಂತ ಹೇಳುತ್ತಿರುವೆ ಎನ್ನುತ್ತಿದ್ದರು. ನಾನು ಎಂಬಿಎ ಓದಿದ್ದು ನನ್ನ ಬ್ಯುಸಿನೆಸ್‌ ಕೆಲಸಕ್ಕೆ ಸಪೋರ್ಟ್‌ ಆಗಬೇಕು ಎಂದು. entrepreneur ಆಗೋಕು ಇಷ್ಟವಿರಲಿಲ್ಲ ಏಕೆಂದರೆ ಬ್ಯುಸಿನೆಸ್‌ ವುಮೆನ್‌ಗೂ ಇದಕ್ಕೂ ವ್ಯತ್ಯಾಸವಿದೆ. ಡಿಗ್ರಿ ಮಾಡುವಾಗ ಕ್ಲಾಸ್‌ನ ಮೊದಲ ದಿನ ಟೀಚರ್‌ಗಳು ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳಲು ಹೇಳುತ್ತಾರೆ ಅಗ ಎಲ್ಲರೂ ಐಟಿ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿಕೊಳ್ಳುತ್ತಾರೆ ಆದರೆ ನಾನು ಇಡೀ ಕ್ಲಾಸ್‌ನಲ್ಲಿ ಒಬ್ಬಳೆ ಬ್ಯುಸಿನೆಸ್‌ ಓನರ್‌ ಆಗಬೇಕು ಎಂದು ಹೇಳಿದ್ದು. ಒಬ್ಬರ ಕೆಳಗೆ ಕೆಲಸ ಮಾಡುವುದು ನನಗೆ ತಲೆಗೆ ಬರಲಿಲ್ಲ. ಯಾರನ್ನೂ ಜಡ್ಜ್‌ ಮಾಡುತ್ತಿಲ್ಲ ಪ್ರತಿಯೊಬ್ಬರಿಗೂ ಒಂದೊಂದು ರೀತಿ ಲೈಫ್‌ ಇದೆ ಇದು ನಾನು ಆಯ್ಕೆ ಮಾಡಿಕೊಂಡಿದ್ದು' ಎಂದು ಆಶಿತಾ ಮಾತನಾಡಿದ್ದಾರೆ.

Kannada actress Ashitha Maria Crasta talks about her Malleshwaram hotel vcs

'9 -6 ಕೆಲಸ ಮಾಡುವುದಕ್ಕೆ ನನಗೆ ಇಷ್ಟವಿರಲಿಲ್ಲ ಬಾಲ್ಯದಿಂದಲೂ ಆರ್ಟಿಸ್ಟ್‌ ಆಗಿರುವ ಕಾರಣ ಡ್ಯಾನ್ಸ್‌ ಮಾಡಲಿಂಗ್ ಮತ್ತು ಸಿನಿಮಾ ಮಾಡುವುದು ಅಂದ್ರೆ ತುಂಬಾನೇ ಇಷ್ಟ.ಮನಸ್ಸಿನಲ್ಲಿ ನನಗೆ ಏನು ಅನಿಸುತ್ತದೆ ಅದನ್ನು ಮಾಡಿರುವುದು. ಜನರಿಗೆ ಊಟ ಹಾಕುವುದು ಒಳ್ಳೆಯ ಕೆಲಸ ಅಲ್ವಾ? ಒಳ್ಳೆಯ ರುಚಿ ಕಡಿಮೆ ಬೆಲೆ ಎಲ್ಲ ಇರಬೇಕು ಎಂದು ಹೋಟೆಲ್‌ ತೆರೆದೆ. ಜೀವನದಲ್ಲಿ ಅಪ್‌ ಮತ್ತು ಡೌನ್ ಇರುತ್ತದೆ, ವಿಧಿ ಪ್ರಯತ್ನ ಪಡಿ ಎಂದು ಹೇಳುತ್ತದೆ ಅದಿಕ್ಕೆ ಈ ಪ್ರಯೋಗ ಮಾಡಿದೆ. ಬ್ಯುಸಿನೆಸ್‌ ಕೈ ಹಿಡಿಯುವುದಿಲ್ಲ ಎಂದು ಸುಮಾರು ಜನರು ಹೇಳಿದ್ದರು ಆದರೆ ಅದು ನನ್ನ ಕೈ ಬಿಟ್ಟಿಲ್ಲ.' ಎಂದು ಆಶಿತಾ ಹೇಳಿದ್ದಾರೆ. 

'ಮಲ್ಲೇಶ್ವರಂನಲ್ಲಿ ನಾನು ಮೊದಲು ಹೋಟೆಲ್‌ ಆರಂಭಿಸಿದ್ದು. ಆಗ ಎಲ್ಲಿ ತಪ್ಪು ಲೆಕ್ಕಚಾರ ಅಯ್ತು ಅಂದ್ರೆ ಅವಾಗ ನಾನು ಇಟಾಲಿಯನ್ ಹೋಟೆಲ್ ಆರಂಭಿಸಿದೆ. ಆ ಊಟದ ಬಗ್ಗೆ ಜನರಿಗೆ ಅಷ್ಟು ಗೊತ್ತಿರಲಿಲ್ಲ. ಮಲ್ಲೇಶ್ವರಂನಲ್ಲಿ ಹೆಚ್ಚಿನ ಬ್ರಾಹ್ಮಿನ್ ಕ್ರೌಡ್‌ ಸಸ್ಯಹಾರಿಗಳು ಇದ್ದರು. ಬಹುತೇಕರಿಗೆ ಇಷ್ಟ ಅಯ್ತು ಆದರೂ ಕೆಲವರು ಬಿಟ್ಟರು. ಅದಕ್ಕೆ Shashi ಎಂದು ಹೆಸರಿಟ್ಟಿದ್ದೆ. ನಾವು ಅಂದುಕೊಂಡ ಮಟ್ಟಕ್ಕೆ ಹೆಸರು ಮಾಡಲಿಲ್ಲ' ಎಂದಿದ್ದಾರೆ.

ಸರ್ ಸರ್ ಅನ್ನಬೇಕು, ಮೆಸೇಜ್ ಮಾಡಬೇಕು: ನಿರ್ಮಾಪಕರ ಮೇಲೆ Me Too ಆರೋಪ ಮಾಡಿದ ನಟಿ ಆಶಿತಾ

'ನಾನು ಸಿನಿಮಾ, ಹೋಟೆಲ್‌ ಮತ್ತು ವಿದ್ಯಾಭ್ಯಾಸ ಎರಡು ಮ್ಯಾನೇಜ್ ಮಾಡಿದ್ದೀನಿ. ಮಲ್ಟಿ ಟಾಸ್ಕಿಂಗ್ ಮೊದಲಿನಿಂದಲೂ ಮಾಡಿರುವೆ. ಚಿಕ್ಕವಯಸ್ಸಿನಿಂದಲೂ ಓದುತ್ತಿದ್ದೆ ಡ್ಯಾನ್ಸ್‌ ಶೋ ಮಾಡುತ್ತಿದ್ದೆ. ಸ್ಕೂಲ್ ಮುಗಿಸಿಕೊಂಡು ಬಂದಾಗ ಶೋ ಕೊಡುತ್ತಿದ್ದೆ. 10ನೇ ತರಗತಿಯಲ್ಲಿ 83% ಬಂದಿತ್ತು. ಹೀಗಾಗಿ ಎರಡು ಮೂರು ಕೆಲಸಗಳನ್ನು ಒಟ್ಟಿಗೆ ಮ್ಯಾನೇಜ್ ಮಾಡುತ್ತಿದ್ದೆ. ಫೋಷಕರು ಹೆದರಿಕೊಳ್ಳುತ್ತಿದ್ದರು ಹೇಗೆ ಏನು ಎಂದು ಆದರೆ ಸಿನಿಮಾ ಮಾಡಿಕೊಂಡು ಬ್ಯುಸಿನೆಸ್‌ ಮ್ಯಾನೇಜ್ ಮಾಡುತ್ತಿದ್ದೆ. ಇಂಟ್ರೆಸ್ಟ್‌ ಇದ್ದರೆ ಏನ್ ಬೇಕಿದ್ದರೂ ಮಾಡಬಹುದು. ಆರ್‌ಟಿ ನಗರನಲ್ಲಿ ಓಪನ್ ಆದ್ಮೇಲೆ ಬುದ್ಧಿ ಕಲಿತೆ ಆನಂತರ ಇಂಡಿಯನ್ ಹೋಟೆಲ್ ಆರಂಭಿಸಿದೆ' ಎಂದು ಆಶಿಕಾ ಮಾತನಾಡಿದ್ದಾರೆ. 

Latest Videos
Follow Us:
Download App:
  • android
  • ios