ತಮಿಳು ಚಿತ್ರರಂಗಕ್ಕೆ ಹಾರಿದ ನಟಿ ಆಶಿಕಾ ರಂಗನಾಥ್?

ಮತ್ತೊಬ್ಬ ಕನ್ನಡdದ ಜನಪ್ರಿಯ ನಟಿ ಆಶಿಕಾ ತಮಿಳು ಚಿತ್ರರಂಗಕ್ಕೆ ಹಾರಿದ್ದಾರೆ. ಎಲ್ಲರೂ ರಶ್ಮಿಕಾ ಆಗಲ್ಲ ಎಂದು ಕಾಲೆಳೆದ ನೆಟ್ಟಿಗರು. 

Kannada actress Ashika Ranganath signs new tamil film project vcs

2016ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಆಶಿಕಾ ರಂಗನಾಥ್ ವೃತ್ತಿ ಜೀವನದಲ್ಲಿ ಬ್ರೇಕ್ ಕೊಟ್ಟಂತ ಸಿನಿಮಾ Rambo 2. ಶರಣ್‌ಗೆ ಜೋಡಿಯಾಗಿ ಕಾಣಿಸಿಕೊಂಡ ಆಶಿಕಾ 'ಚುಟು ಚುಟು' ಹಾಡಿನ ಮೂಲಕ ಪಡ್ಡೆ ಹುಡುಗರ ಮನಸ್ಸಿಗೆ ಹತ್ತಿರವಾದರು. ಇದೀಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗುತ್ತಿದೆ. 

ಸುಮಾರ 11 ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಆಶಿಕಾ ತಮಿಳು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ. 'ಈ ರೀತಿಯ ವಿಭಿನ್ನ ಕತೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಕ್ರೀಡೆ ಪ್ರಧಾನವಾದ ಕತೆಯಳ್ಳ ಸಿನಿಮಾ ಇದಾಗಿದ್ದು ಇಂತಹ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರುವುದು' ಎಂದು ಆಶಿಕಾ ಖಾಸಗಿ ವೆಬ್‌ಸೈಟ್‌ನೊಂದಿಗೆ ಮಾತನಾಡಿದ್ದಾರೆ. 

150 ಮಿಲಿಯನ್ ವೀಕ್ಷಣೆ ಪಡೆದ Rambo-2 ಚುಟುಚುಟು ಹಾಡು!

'ಭಾಷೆ ತುಂಬಾ ಕಷ್ಟವಾಗುತ್ತಿದೆ ಆದರೆ ಚಿತ್ರತಂಡ ಸಾಕಷ್ಟು ಸಹಾಯ ಮಾಡುತ್ತಿದೆ. ಚಿತ್ರಕತೆ ಸಂಭಾಷಣೆಗಳನ್ನು ಮೊದಲೇ ಕನ್ನಡ ಮತ್ತು ಇಂಗ್ಲಿಷ್‌ಗೆ ಟ್ರಾನ್ಸಲೇಟ್ ಮಾಡಿಕೊಡುತ್ತಾರೆ ಅದನ್ನ ನೋಡಿಕೊಂಡು ಮಾರನೇ ದಿನವೇ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುವೆ. ನಾಯಕ ನಟ ಬಿಟ್ಟರೆ ಇಡೀ ಚಿತ್ರೀಕರಣ ಸೆಟ್‌ನಲ್ಲಿ ಯಾರಿಗೂ ಕನ್ನಡ ಬರುವುದಿಲ್ಲ. ಸೆಟ್‌ನಲ್ಲಿ ನಟ ಹಾಗೂ ನಾನು ಕನ್ನಡದಲ್ಲಿಯೇ ಮಾತನಾಡುತ್ತಿರುತ್ತೇವೆ. ' ಎಂದು ಆಶಿಕಾ ಹೇಳಿದ್ದಾರೆ.

Latest Videos
Follow Us:
Download App:
  • android
  • ios