Asianet Suvarna News Asianet Suvarna News

ಸುದೀಪ್ ಬಳಿಕ 'ಬಿಗ್ ಬಾಸ್ ಕನ್ನಡ-12' ಹೋಸ್ಟ್ ಯಾರು? ಕೇಳಿ ಬಂದ ಹೆಸರು ಇದು ನೋಡ್ರೀ..!

ಬಿಗ್ ಬಾಸ್ ಹೊಸ ಹೋಸ್ಟ್ ಯಾರಾಗಬೇಕು ಅಂತ ನಡೆದಿರೋ ಚರ್ಚೆಯಲ್ಲಿ ನಾಲ್ಕು ಸ್ಟಾರ್ ನಟರ ಹೆಸರು ಮುಂಚೂಣಿಯಲ್ಲಿದೆ. ರಮೇಶ್ ಅರವಿಂದ್ ನಿರೂಪಣೆ ಮಾಡಿದವರು. ಸೋ ಅವರೇ ಬಿಗ್ ಬಾಸ್ ನಿರೂಪಣೆ ಮಾಡಿದ್ರೆ ಚೆಂದ ಅಂತ ಅನೇಕರು ಕಾಮೆಂಟ್ ಮಾಡ್ತಾ ಇದ್ದಾರೆ...

who will become next bigg boss kannada season 12 host question srb
Author
First Published Oct 17, 2024, 8:00 PM IST | Last Updated Oct 17, 2024, 8:00 PM IST

ಕಿಚ್ಚ ಸುದೀಪ್​ ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿರೋದು ಗೊತ್ತೇ ಇದೆ. ಇದೇ ನನ್ನ ಕೊನೆಯ ಸೀಸನ್ ಎಂದಿರೋ ಸುದೀಪ್, ಮುಂದಿನ ಬಾರಿ ಬೇರೆ ಹೋಸ್ಟ್​​ನ ನೋಡಿಕೊಳ್ಳಿ ಅಂತ ಬಿಗ್ ಬಾಸ್ ಆಯೋಜಕರಿಗೆ ಸೂಚನೆ ಕೊಟ್ಟಿದ್ದಾರೆ. ಹಾಗಾದ್ರೆ ಮುಂದಿನ ಸೀಸನ್ ಬಿಗ್ ಬಾಸ್ ಕನ್ನಡ ನಿರೂಪಣೆ ಮಾಡೋ ತಾರೆ ಯಾರು.. ಈ ಬಗ್ಗೆ ಫ್ಯಾನ್ಸ್ ನಡುವೆ ಬಿಸಿ ಬಿಸಿ ಚರ್ಚೆ ನಡೀತಾ ಇದೆ.

ಬಿಗ್​ ಬಾಸ್​​ನಲ್ಲಿ ಕಿಚ್ಚನ ಜಾಗ ತುಂಬೋದ್ಯಾರು..? ಫ್ಯಾನ್ಸ್ ಮಧ್ಯೆ ಶುರುವಾಯ್ತು ಬಿಸಿಬಿಸಿ ಚರ್ಚೆ!
ಯೆಸ್ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ. ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ -11 ನಡೀತಾ ಇದ್ದು, ಇದುವೇ ನನ್ನ ಕೊನೆಯ ಸೀಸನ್ ಎಂದಿದ್ದಾರೆ ಸುದೀಪ್. ಅಸಲಿಗೆ ಈ ಬಾರಿಯೇ ಬಿಗ್ ಬಾಸ್​ ನಿರೂಪಣೆಯಿಂದ ದೂರ ಉಳಿಯೋದಕ್ಕೆ ಸುದೀಪ್ ನಿರ್ಧಾರ ಮಾಡಿದ್ರು.  ಕೊನೆಗೆ ಬಿಗ್ ಬಾಸ್ ಆಯೋಜಕರ ಒತ್ತಾಯಕ್ಕೆ ಮಣಿದು ಬಿಗ್ ಬಾಸ್ ಹೋಸ್ಟ್ ಆಗಿ ಮುಂದುವರೆದಿದ್ದಾರೆ.

ತಟ್ಟೆ ಎಷ್ಟಗಲ ಇದ್ಯೋ ಅಷ್ಟೇ ಉಣ್ಣೋದು, ನನ್ನ ಯೋಗ್ಯತೆ ಎಷ್ಟೋ ಅಷ್ಟೇ ದುಡ್ಯೋದು..; ಕಿಚ್ಚ ಸುದೀಪ್

ಆದ್ರೆ ಇದುವೇ ಕೊನೆ ಸೀಸನ್ ಅಂತ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರೋ ಸುದೀಪ್ , ಮುಂದಿನ ಸೀಸನ್​ಗೆ ಹೊಸ ಹೋಸ್ಟ್ ನೋಡಿಕೊಳ್ಳಿ ಅಂತ ನೇರವಾಗೇ ಹೇಳಿದ್ದಾರೆ.   ಇದರ ಬಗ್ಗೆ ಮುಂದೆ ನೋಡೋಣ ಅಂತ ಬಿಗ್ ಬಾಸ್ ಟೀಂ ಸೈಲೆಂಟ್ ಆಗಿದೆ. ಆದ್ರೆ ನಮ್ಮ ಸ್ಟಾರ್​ಗಳ ಫ್ಯಾನ್ಸ್ ಮಾತ್ರ ಬಿಗ್ ಬಾಸ್ ನ ಹೊಸ ಹೋಸ್ಟ್ ಯಾರಾಗಬೇಕು ಅಂತ ಚರ್ಚೆ ಶುರು ಮಾಡಿದ್ದಾರೆ.

ರಮೇಶ್, ಗಣೇಶ್, ಉಪ್ಪಿ, ರಿಷಬ್ ಅವರಲ್ಲಿ ಯಾರು ಬೆಸ್ಟ್...? ದರ್ಶನ್ ಬಂದ್ರೆ ಹೇಗಿರುತ್ತೆ? ಯಾರಾಗ್ತಾರೆ ಬಿಗ್ ಬಾಸ್ ಸೀಸನ್-12 ಹೋಸ್ಟ್..?
ಹೌದು ಬಿಗ್ ಬಾಸ್ ಹೊಸ ಹೋಸ್ಟ್ ಯಾರಾಗಬೇಕು ಅಂತ ನಡೆದಿರೋ ಚರ್ಚೆಯಲ್ಲಿ ನಾಲ್ಕು ಸ್ಟಾರ್ ನಟರ ಹೆಸರು ಮುಂಚೂಣಿಯಲ್ಲಿದೆ. ರಮೇಶ್ ಅರವಿಂದ್ ಈ ಹಿಂದೆ ವೀಕೆಂಡ್ ವಿತ್ ರಮೇಶ್ ಸೇರಿದಂತೆ ಹಲವು ಕಿರುತೆರೆ ಶೋಗಳ ನಿರೂಪಣೆ ಮಾಡಿದವರು. ಸೋ ಅವರೇ ಬಿಗ್ ಬಾಸ್ ನಿರೂಪಣೆ ಮಾಡಿದ್ರೆ ಚೆಂದ ಅಂತ ಅನೇಕರು ಕಾಮೆಂಟ್ ಮಾಡ್ತಾ ಇದ್ದಾರೆ.

ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಫ್ಯಾನ್ಸ್, ಬಿಗ್ ಬಾಸ್​​ ನಿರೂಪಣೆಗೆ ಗಣಪ ಬಂದ್ರೆ ಚೆನ್ನ ಅಂತಿದಾರೆ. ಗಣೇಶ್ ಮೊದಲಿಂದಲೂ ಟಿವಿ ನಿರೂಪಕ ಆಗಿದ್ದವರು. ಗೋಲ್ಡನ್ ಗ್ಯಾಂಗ್ ಸೇರಿದಂತೆ ಅನೇಕ ಶೋ ಹೋಸ್ಟ್ ಮಾಡಿದ ಅನುಭವವೂ ಅವರಿಗಿದೆ. ಸೋ ಗಣಪ ಈ ಜಾಗಕ್ಕೆ ಬರಬೇಕು ಅನ್ನೋದು ಅವರ ಅಭಿಮಾನಿಗಳ ಆಸೆ.

ನನಗೆ ಯಾವ ನಟರ ಜೊತೆಗೂ ದುಷ್ಮನಿ ಇಲ್ಲ ಅಂದ್ರು ಪವನ್ ಕಲ್ಯಾಣ್; ಇಲ್ಲ ಅಂದ್ಮೇಲೆ ಹೇಳಿದ್ಯಾಕೆ..?

ಇನ್ನೂ ಬಿಗ್ ಬಾಸ್ ಹೋಸ್ಟ್​​ಗೆ ರಿಯಲ್ ಸ್ಟಾರ್ ಉಪ್ಪಿ ಬಂದ್ರೆ ಆಟದ ಮಜಾನೇ ಬೇರೆ ಅನ್ನೋದು ಅವರ ಅಭಿಮಾನಿಗಳ ಅಭಿಪ್ರಾಯ. ಉಪ್ಪಿ ಇದ್ದಲ್ಲಿ ಟ್ವಿಸ್ಟು, ಟರ್ನು, ಗಿಮಿಕ್ಕುಗಳೆಲ್ಲಾ ಹೇರಳವಾಗಿರ್ತಾವೆ. ಸೋ ಉಪ್ಪಿ ಈ ಶೋಗೆ ಬಂದ್ರೆ ಮಜಾನೇ ಬೇರೆ ಅಂತಿದಾರೆ ಅವ್ರ ಫ್ಯಾನ್ಸ್.

ಸದ್ಯ ಕಾಂತಾರ ಮೂಲಕ ಗ್ಲೋಬಲ್ ಫೇಮ್ ಗಳಿಸಿರೋ ರಿಷಬ್ ಶೆಟ್ಟರು ಬಿಗ್ ಬಾಸ್ ಹೋಸ್ಟ್ ಆಗಲಿ ಅನ್ನೋದು ಅವರ ಅಭಿಮಾನಿಗಳ ಆಸೆ. ಯಾಕಂದ್ರೆ ರಿಷಬ್ ಇದ್ದಲ್ಲಿ ಭರಪೂರ  ಹಾಸ್ಯ ನಗು ಇದ್ದೇ ಇರುತ್ತೆ. ಶೆಟ್ರು ಬಿಗ್ ಬಾಸ್ ಹೋಸ್ಟ್ ಮಾಡಿದ್ರೆ ಸಖತ್ ಮಜಾ ಇರುತ್ತೆ ಅಂತಿದ್ದಾರೆ ಅವ್ರ ಅಭಿಮಾನಿಗಳು.

ಇನ್ನೂ ಡಾಲಿ ಧನಂಜಯ್ ಫ್ಯಾನ್ಸ್ ಕೂಡ ಬಿಗ್ ಬಾಸ್​​ಗೆ ಡಾಲಿ ಬರಲಿ ಅಂತಿದ್ದಾರೆ. ಇನ್ನು, ನಟ ದರ್ಶನ್ ಫ್ಯಾನ್ಸ್ ಕೂಡ ಈ ಬಗ್ಗೆ ಹೋಪ್ ಇಟ್ಟುಕೊಂಡಿದ್ದಾರೆ. ಮುಂದಿನ ಸೀಸನ್ ವೇಳೆಗೆ ತಮ್ಮ ಮೆಚ್ಚಿನ 'ಬಾಸ್' ದರ್ಶನ್ ಜೈಲಿಂದ ಆಚೆ ಬರ್ತಾರೆ. ಅವರೇ ಬಿಗ್ ಬಾಸ್ ನಿರೂಪಕರಾಗಲಿ ಅಂತಿದ್ದಾರೆ 'ಡಿ ಬಾಸ್' ಫ್ಯಾನ್ಸ್.

ಸಲ್ಲು ಸೆಕ್ಯುರಿಟಿಗೆ ಅದೆಷ್ಟು ಸಿಬ್ಬಂದಿ, ಏನೆಲ್ಲಾ ಸೇಫ್ಟಿ ಇರುತ್ತೆ? ಎಷ್ಟು ಕೋಟಿ ಹಣ ವೆಚ್ಚವಾಗ್ತಿದೆ..!?

ಒಟ್ಟಾರೆ ಬಿಗ್ ಬಾಸ್ ಹೋಸ್ಟ್ ಯಾರಾಗಬೇಕು.. ಕಿಚ್ಚನ ಸ್ಥಾನ ತುಂಬೋರು ಯಾರು ಅಂತ ಸ್ಟಾರ್ಸ್ ಅಭಿಮಾನಿಗಳ ನಡುವೆ ದೊಡ್ಡ ಚರ್ಚೆ ನಡೀತಾ ಇದೆ. ತನ್ನ ಹೋಸ್ಟ್ ಆಗಲಿಕ್ಕೆ ಯಾರು ಬೆಸ್ಟ್ ಅನ್ನೋದನ್ನ ಸಾಕ್ಷಾತ್ ಬಿಗ್ ಬಾಸೇ ತೀರ್ಮಾನಿಸಬೇಕಿದೆ. ಅದನ್ನು ತಿಳಿಯಲು ಇನ್ನೂ ಸ್ವಲ್ಪ ಕಾಲ ಕಾಯಬೇಕಿದೆ! ಯಾಕೆ ಅಂದ್ರೆ, ಸದ್ಯ ಕಿಚ್ಚ ಸುದೀಪ್ ಸಾರಥ್ಯದಲ್ಲಿ 'ಬಿಗ್ ಬಾಸ್ ಸೀಸನ್-11' ನಡೆಯುತ್ತಿದೆ..! 

Latest Videos
Follow Us:
Download App:
  • android
  • ios