Asianet Suvarna News

ಸಂಚಾರಿ ವಿಜಯ್ ಭರವಸೆ ಇಟ್ಟಿದ್ದ ಸಿನಿಮಾಗಳು!

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಅವರ ಯಾವ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ? ಎಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು ಗೊತ್ತಾ?...

List of Kannada actor Sanchari Vijay films to be released vcs
Author
Bangalore, First Published Jun 16, 2021, 1:46 PM IST
  • Facebook
  • Twitter
  • Whatsapp

ಪ್ರತಿಭಾವಂತ ನಟ ಸಂಚಾರಿ ವಿಜಯ್ ಅಭಿನಯಿಸಿದ ಮೂರು ಚಿತ್ರಗಳು ಶೂಟಿಂಗ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದ್ದವು. ಅರವಿಂದ್ ಕುಪ್ಲಿಕರ್ ನಿರ್ದೇಶನದ ‘ಪುಕ್ಸಟ್ಟೆ ಲೈ-’, ಪ್ರವೀನ್ ಕೃಪಾಕರ್ ನಿರ್ದೇಶನದ ‘ತಲೆದಂಡ’ ಹಾಗೂ ನವೀನ್ ನಿರ್ದೇಶನದ ‘ಮೇಲೊಬ್ಬ ಮಾಯಾವಿ’ ಚಿತ್ರಗಳ ಮೇಲೆ ಸಂಚಾರಿ ವಿಜಯ್ ಭರವಸೆ ಇಟ್ಟಿದ್ದರು.

ವಿಜಯ್‌ಗೆ ಕನ್ನಡದಲ್ಲೇ ನಮನ ಸಲ್ಲಿಸಿದ ಯುಎಸ್ ಕಾನ್ಸುಲೇಟ್ ಜನರಲ್ 

‘ನಮ್ಮ ಚಿತ್ರದಲ್ಲಿ ಅವರದ್ದು ವಿಶೇಷವಾದ ಪಾತ್ರ. ಯಾರೇ ಸಿಕ್ಕರೂ ಅವರ ಬಳಿ ಪುಕ್ಸಟ್ಟೆ ಲೈ- ಚಿತ್ರದ ಬಗ್ಗೆ ಮಾತನಾಡುತ್ತಿದ್ದರು. ಚಿತ್ರದ ದೃಶ್ಯಗಳನ್ನು ತೋರಿಸುತ್ತಿದ್ದರು. ಢೂಪ್ಲಿಕೇಟ್ ಕೀ ಮಾರುವ ಪಾತ್ರಕ್ಕೆ ಜೀವ ತುಂಬಿದವರು ವಿಜಯ್. ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ವಿ. ಅಷ್ಟರಲ್ಲಿ ಸಂಚಾರಿ ವಿಜಯ್ ಅವರೇ ಇಲ್ಲವಾಗಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಅರವಿಂದ್ ಕುಪ್ಲಿಕರ್.

ಈಗಾಗಲೇ ‘ತಲೆದಂಡ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಮರ ಕಡಿಯಬಾರದು ಎಂದು ತಡೆಯಲು ಬರುವ ಅರೆ ಹುಚ್ಚನ ಪಾತ್ರವಂತೂ ಟೀಸರ್‌ನ ಹೈಲೈಟ್ ಆಗಿದೆ. ಜನಾರ್ದನ್ ನಿರ್ದೇಶನದ ‘ಫಿರಂಗಿಪುರ’ ಚಿತ್ರದ ಅವರ ಲುಕ್ ಭಾರಿ ಜನಪ್ರಿಯವಾಗಿತ್ತು. ಅದರ ಚಿತ್ರೀಕರಣ ಪೂರ್ತಿಯಾಗಿರಲಿಲ್ಲ.

7 ಜನರಿಗೆ ಬದುಕು ಕೊಟ್ಟು ಉಸಿರು ನಿಲ್ಲಿಸಿದ ಸಂಚಾರಿ ವಿಜಯ್! 

ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳ ಹೊರತಾಗಿ ಒಂದಿಷ್ಟು ಚಿತ್ರಗಳನ್ನು ಹೊಸದಾಗಿ ಒಪ್ಪಿಕೊಂಡಿದ್ದರು. ಆ ಪೈಕಿ ‘ಅವಸ್ಥಾಂತರ’ ಚಿತ್ರ ಕೂಡ ಒಂದು. ಈ ಚಿತ್ರಕ್ಕೆ ಶೂಟಿಂಗ್ ಆಗಬೇಕಿತ್ತು.

Follow Us:
Download App:
  • android
  • ios