ಎರಡನೇ ಚಾಪ್ಟರ್ ಮುಂದೆ ಮೊದಲನೇದು ಏನೇನೂ ಅಲ್ಲ

‘ಕೆಜಿಎಫ್ 2’ ತೆರೆಗೆ ಬಂದ್ರೆ, ಅದರ ಚಾಪ್ಟರ್-1 ತುಂಬಾ ಚಿಕ್ಕದು ಅನ್ನಿಸುತ್ತೆ. ಅದು ಜನರ ನಂಬಿಕೆ, ಮತ್ತು ನಿರೀಕ್ಷೆ. ಅದಕ್ಕೆ ತಕ್ಕಂತೆ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಏನು ಮಾಡಬೇಕು ಮಾಡ್ತಿದ್ದಾರೆ. ನಟರಾಗಿ ನಾವೇನು ಮಾಡಬೇಕೋ ಮಾಡ್ತಿದ್ದೀವಿ.

ತಮಿಳಿಗೆ ಹಾರಿದ ಕೆಜಿಎಫ್ ಸುಂದರಿ, ಯಾರ ಜತೆ ಡ್ಯುಯೆಟ್ ಹಾಡಲಿದ್ದಾರೆ?

ಪ್ಯಾನ್ ಇಂಡಿಯಾ ರಿಲೀಸ್ ಟ್ರೆಂಡ್ ಸೆಟರ್

‘ಕೆಜಿಎಫ್’ ಎನ್ನುವುದು ಬರೀ ಚಿತ್ರವಲ್ಲ ಅದು ಕನ್ನಡ ಮತ್ತು ಕನ್ನಡಿಗರ ಹೆಮ್ಮೆ ಅಂತ ರಿಲೀಸ್‌ಗೂ ಮುನ್ನ ಹೇಳಿದ್ದೆ. ಎಲ್ಲಾ ಗಡಿಗಳನ್ನು ಮೀರಿ ಭಾರತೀಯ ಚಿತ್ರರಂಗದಲ್ಲೇ ಕೆಜಿಎಫ್ ದಾಖಲೆ ಬರೆಯಿತು. ನಾವು ಡಿಫೆನ್ಸಿವ್ ಆಟವಾಡುತ್ತಿದ್ದರೆ, ಗಡಿ ಬ್ರೇಕ್ ಮಾಡುವುದಿರಲಿ, ನಮ್ಮನ್ನೇ ನಾವು ರಕ್ಷಿಸಿಕೊಳ್ಳುವುದಕ್ಕೂ ಕಷ್ಟ. ನನಗೆ ನುಗ್ಗಿ ಹೊಡೆಯುವುದರಲ್ಲೇ ಹೆಚ್ಚು ವಿಶ್ವಾಸ. ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಸಿನಿಮಾ ಓಡುವುದು ಕಷ್ಟ ಎನ್ನುವ ಮಾತನ್ನು ಅದು ಮೊದಲು ಬ್ರೇಕ್ ಮಾಡಿತು. ಆನಂತರ ಮಾರುಕಟ್ಟೆ ವಿಸ್ತಾರಕ್ಕೆ ನಾಂದಿ ಹಾಡಿತು. ಇವತ್ತು ಒಂದಲ್ಲ ಅನೇಕ ಸಿನಿಮಾಗಳಿಗೆ ಅದು ಮಾದರಿ ಆಗಿದೆ. ಕನ್ನಡ ಚಿತ್ರರಂಗದಲ್ಲೂ ಪ್ಯಾನ್ ಇಂಡಿಯಾ ರಿಲೀಸ್ ಟ್ರೆಂಡ್ ಆಗಿದೆ.

ಪರಭಾಷೆಯಲ್ಲೂ ಹೊರರಾಜ್ಯದಲ್ಲೂ ಅಭಿಮಾನದ ಹೊಳೆ

ಈಗ ಫ್ಯಾನ್ಸ್ ಸಂಖ್ಯೆ ಹೆಚ್ಚಾಗಿದೆ. ಚೆನ್ನೈ, ಹೈದರಾಬಾದ್‌ಗೆ ಹೋದ್ರು ಜನರು ಗುರುತಿಸಿ, ಸೆಲ್ಫಿ ತೆಗೆಸಿಕೊಳ್ಳಲು ಬರುತ್ತಾರೆ. ಕರ್ನಾಟಕದ ಹಾಗೆ ತಮಿಳುನಾಡಿನಲ್ಲೂ ಅಭಿಮಾನಿ ಸಂಘವಿದೆ. ಇತ್ತೀಚೆಗಷ್ಟೇ ಒಂದಷ್ಟು ಕಾಲೇಜು ಸ್ಟೂಡೆಂಟ್ಸ್ ಹಾಗೂ ಯೂತ್ಸ್ ಜತೆಗೆ ಒಂದಷ್ಟು ಹಿರಿಯರು ಚೆನ್ನೈನಿಂದ ಮನೆಗೆ ಬಂದು ಭೇಟಿ ಮಾಡಿದ್ದರು. ಇದೆಲ್ಲ ‘ಕೆಜಿಎಫ್’ ಬಂದಾದ ನಂತರದ ಬೆಳವಣಿಗೆ. ‘ಕೆಜಿಎಫ್’ನಂತಹ ಒಂದು ಸಿನಿಮಾದಿಂದ ಪರ ಭಾಷೆಯಲ್ಲೂ ಅಭಿಮಾನಿಗಳು ಹುಟ್ಟಿಕೊಳ್ಳುವುದಿಕ್ಕೆ ಕಾರಣ ಆಯಿತು.

ಐರಾಗೆ ಅಜ್ಜ ಹಾಡಿದ ಜೋಗುಳ: ಮೂಕರಾದರು ಫ್ಯಾನ್ಸ್

ಹೊಸ ಸಿನಿಮಾ ಒಪ್ಪಿಕೊಂಡಿಲ್ಲ, ಕೆಜಿಎಫ್ ಕಡೆ ನಮ್ಮ ನಡೆ

ಹೊಸ ಸಿನಿಮಾಗಳ ಕುರಿತು ಆಗಾಗ ಬರುತ್ತಿರುವ ಸುದ್ದಿ ನೋಡುತ್ತಿದ್ದೇನೆ. ಪೂರಿ ಜಗನ್ನಾಥ್ ಸಿನಿಮಾದ ಸುದ್ದಿಯೂ ಗೊತ್ತು. ನನ್ನ ಗಮನವೀಗ ‘ಕೆಜಿಎಫ್ 2’ ಮಾತ್ರ. ಯಾರ ಸಿನಿಮಾಕ್ಕೂ ನಾನಿನ್ನು ಅಧಿಕೃತವಾಗಿ ಕಮಿಟ್ ಆಗಿಲ್ಲ. ಒಂದಷ್ಟು ಹೊಸ ಸಿನಿಮಾಗಳ ಮಾತುಕತೆ ನಡೆದಿರುವುದು ನಿಜ, ಆದರೆ ಯಾವುದು ಫೈನಲ್ ಆಗಿಲ್ಲ. ‘ಕೆಜಿಎಫ್’ ಚಾಪ್ಟರ್ 1’ ಕ್ಕಿಂತ ಚೆನ್ನಾಗಿ ಬರಬೇಕೆನ್ನುವ ನಿರೀಕ್ಷೆ. ಅದಕ್ಕಾಗಿಯೇ ಪೂರ್ಣ ಪ್ರಮಾಣದಲ್ಲೇ ನಾನು ತೊಡಗಿಸಿಕೊಂಡಿದ್ದೇನೆ. ಸಮಯ ಬಂದಾಗ ಹೊಸ ಸಿನಿಮಾದ ಸುದ್ದಿಯನ್ನು ನಾನೇ ರಿವೀಲ್ ಮಾಡುವೆ.

ಸಪೋರ್ಟ್ ಮಾಡೋದು ದೊಡ್ಡಸ್ತಿಕೆ ಅಲ್ಲ

ಚಿತ್ರರಂಗದಲ್ಲೀಗ ಹೊಸಬರ ಪರ್ವ ಶುರುವಾಗಿದೆ. ಅವರೆಲ್ಲ ತಮ್ಮ ಸಿನಿಮಾಗಳ ಪ್ರಚಾರಕ್ಕೆ ನಮ್ಮಂತಹ ಕಲಾವಿದರ ಬೆಂಬಲ ಕೇಳುವುದು ಸಹಜ. ನಾವು ಅವರಿಗೆ ಬೆಂಬಲವಾಗಿ ನಿಲ್ಲುವುದು ಕರ್ತವ್ಯ, ದೊಡ್ಡಸ್ತಿಕೆ ಅಲ್ಲ. ನಾನು ಹೊಸಬನಾಗಿ ಬಂದಾಗ ಅಂಬರೀಶಣ್ಣ ಸೇರಿ ಅನೇಕರು ಬೆಂಬಲ ಕೊಟ್ಟರು. ಹೊಸಬರಿಗೆ ಇದೆಲ್ಲ ಬೆಂಬಲ ಬೇಕು. ಯಾರೇ ಬಂದು ಬೆಂಬಲ ಕೇಳಿದರೂ ಅವರ ಸಿನಿಮಾಗಳ ಗುಣಮಟ್ಟ ಏನು ಅಂತ ನೋಡುತ್ತೇನೆ. ಆಮೇಲೆ ಬೆಂಬಲಕ್ಕೆ ನಿಲ್ಲುತ್ತೇನೆ.

ಮಗಳ ವಿಚಾರಕ್ಕೆ ಮೊದಲ ಬಾರಿ ಕಣ್ಣೀರಿಟ್ಟ ಯಶ್! .