ಸ್ಯಾಂಡಲ್‌ವುಡ್ ಸ್ಮೈಲಿಂಗ್ ಡಾಲ್ ಐರಾಳಿಗೆ ಭೀಮ್ ಸೇನ್ ಜೋಶಿ ಹಾಡು ಹಾಡುತ್ತಾ, ಜೋಗುಳ ಹಾಡಿದ ರಾಧಿಕಾ ತಂದೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾಕಿಂಗ್ ದಂಪತಿಯ ಮುದ್ದು ಮಗಳು ಐರಾ ಯಶ್ ಸೋಶಿಯಲ್ ಮೀಡಿಯಾ ಸ್ಟಾರ್ ಆಗುವುದರಲ್ಲಿ ಅನುಮಾನವೇ ಇಲ್ಲ. ಆಕೆಯ ಒಂದು ಫೋಟೋಗೆ ಲಕ್ಷಗಟ್ಟಲೇ ಅಭಿಮಾನಿಗಳು ಲೈಕ್ ಹಾಗೂ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಗಳ ವಿಚಾರಕ್ಕೆ ಮೊದಲ ಬಾರಿ ಕಣ್ಣೀರಿಟ್ಟ ಯಶ್!

ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾತ-ಮೊಮ್ಮಗಳ ಭಾಂದವ್ಯದ ಬಗ್ಗೆ ಫೋಸ್ಟ್ ಮಾಡಿದ್ದಾರೆ. ಅದರಲ್ಲಿ ‘ಐರಾ ಒಂದು ತಿಂಗಳ ಮಗುವಿದ್ದಾಗ ಸೆರೆ ಹಿಡಿದ ವಿಡಿಯೋವಿದು. ನನಗಿದು ಬಹಳ ಮಹತ್ವದ್ದು. ನಾನು ಮಗುವಿದ್ದಾಗ ಅಪ್ಪ ಭೀಮ್ ಸೇನ್ ಜೋಶಿ ಭಜನೆ ಹೇಳಿ ಮಲಗಿಸುತ್ತಿದ್ದರು. ಇದೀಗ ಐರಾಳಿಗೂ ಕರುಣಿಸೋ ರಂಗಾ, ಏಕೆ ಮೂಖನಾದಿಯೋ ಅಥವಾ ಸದಾ ನಿನ್ನ ಹೃದಯದಲ್ಲಿ... ಹಾಡುಗಳನ್ನು ಹಾಡುತ್ತಾ ಮಲಗಿಸುತ್ತಾರೆ..’ ಎಂದು ಭಾವುಕರಾಗಿದ್ದಾರೆ. ಮಗಳ ನೆಪದಲ್ಲಿ ತಮ್ಮ ಬಾಲ್ಯವನ್ನು ಮೆಲಕು ಹಾಕಿದ್ದಾರೆ.

View post on Instagram

ಈ ವಿಡಿಯೋ ನೋಡಿ ಕೆಲವು ಚಿತ್ರರಂಗದ ಗಣ್ಯರೂ ಪ್ರತಿಕ್ರಿಯೆ ತೋರಿದ್ದಾರೆ. ಅದರಲ್ಲೂ ನಿರ್ದೇಶಕ ಕೆ.ಎಂ ಚೈತನ್ಯಾ ‘ಈ ಮಗುವಿಗೆ ಪುರಂದರ ದಾಸರ ದ್ವನಿಯಲ್ಲಿ ಭೀಮ್ ಸೀನ್ ಹಾಡು ಕೇಳುವ ಭಾಗ್ಯ ಮನೆಯಲ್ಲೇ ಇದೆ...’ ಎಂದಿದ್ದಾರೆ.

ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಐರಾಳಿಗೆ ಮುದ್ದು ಗೊಂಬೆಯಂತೆ ಅಲಂಕರಿಸಿ, ಅಭಿಮಾನಿಗಳಿಗೊಸ್ಕರ ರಾಧಿಕಾ ಹಾಗೂ ಯಶ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ.