ಬೆಂಗಳೂರು[ಅ. 16]  ಕೆಜಿಎಫ್ ಚಿತ್ರದಲ್ಲಿ ರಾಣಿಯಾಗಿ ಮೆರೆದು ಮಿಂಚಿದ್ದ ಶ್ರೀನಿಧಿ ಶೆಟ್ಟಿ ಇದೀಗ ಪಕ್ಕದ ರಾಜ್ಯಕ್ಕೆ ಹೊರಟು ನಿಂತಿದ್ದಾರೆ.  ಕಾಲಿವುಡ್ ಗೆ ಕೆಜಿಎಫ್ ಕ್ವೀನ್ ರೀನಾ  ಶ್ರೀನಿಧಿ ಶೆಟ್ಟಿ ಹಾರಲಿದ್ದಾರೆ.

ಚಿಯಾನ್ ವಿಕ್ರಮ ಅಭಿನಯದ ವಿಕ್ರಮ್-58 ಚಿತ್ರವನ್ನು ಶೆಟ್ಟಿ ಒಪ್ಪಿಕೊಂಡಿದ್ದಾರೆ. ಚಿಯಾನ್ ವಿಕ್ರಮ್ ಜತೆ ಚಿತ್ರ ಮಾಡೋ ಖುಷಿ ನಟಿ ಶ್ರೀನಿಧಿ ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ. ಮುಂದಿನ ವಾರದಿಂದ ಚಿತ್ರೀಕರಣದಲ್ಲಿ ಭಾಗಿ ಆಗೋ ಸಾಧ್ಯತೆ ಇದೆ. ಕೆಜಿಎಫ್ ಹಾಗೂ ವಿಕ್ರಮ್ -58 ಎರಡೂ ಚಿತ್ರಡೇಟ್ಸ್ ಬ್ಯಾಲನ್ಸ್ ಮಾಡಿ ಶ್ರೀನಿಧಿ ಅಭಿನಯ ಮಾಡಲಿದ್ದಾರೆ.

ಕೆಜಿಎಫ್‌ 2 ನಂತರವೇ ಬೇರೆ ಸಿನಿಮಾಗೆ ಒಪ್ಪಿಗೆ: ಶ್ರೀನಿಧಿ ಶೆಟ್ಟಿ

ಈ ಹಿಂದೆ ಚಿತ್ರದ ನಾಯಕಿ ಪಾತ್ರವನ್ನು ಪ್ರಿಯಾ ಭವನಾ ಶಂಕರ್ ಮಾಡಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿತ್ತು. ಚಿತ್ರಕ್ಕೆ ಎ. ಆರ್ .ರೆಹಮಾನ್ ಸಂಗೀತ, ಶಿವಕುಮಾರ್ ವಿಜಯನ್ ಕ್ಯಾಮರಾ ಕೈಚಳ ಇರಲಿದೆ.

ಕನ್ನಡದ ಬ್ಲಾಕ್‌ಬಸ್ಟರ್‌ ಚಿತ್ರ ‘ಕೆಜಿಎಫ್‌’ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು ಈ ಶ್ರೀನಿಧಿ ಶೆಟ್ಟಿ. ಮೂಲತಃ ಕನ್ನಡದವರಾದರೂ, ಮಾಡೆಲಿಂಗ್‌ ಮೂಲಕ ಮುಂಬೈ ನಿವಾಸಿ ಆದವರು. ಆದರೆ ಕೆಜಿಎಫ್‌ ಚಿತ್ರದ ಮೂಲಕ ಸಿಕ್ಕ ಬಹು ದೊಡ್ಡ ಜನಪ್ರಿಯತೆಯಿಂದ ಈಗವರು ಖಾಯಂ ಬೆಂಗಳೂರು ನಿವಾಸಿ. ಅದು ‘ಕೆಜಿಎಫ್‌’ ಆಪ್ಟರ್‌ ಎಫೆಕ್ಟ್ !

‘ಕೆಜಿಎಫ್‌ ರಿಲೀಸ್‌ ಆದ ನಂತರ ದಿನಗಳಿಂದಲೇ ನನ್ನ ಲೈಫ್‌ಸ್ಟೈಲ್‌ ಸಾಕಷ್ಟು ಬದಲಾಯಿತು. ನಿರೀಕ್ಷೆಗೂ ಮೀರಿದ ಜನಪ್ರಿಯತೆ ಸಿಕ್ಕಿತು. ಎಲ್ಲಿಗೆ ಹೋದರೂ ಜನ ಮಾತನಾಡಿಸುವಷ್ಟರ ಮಟ್ಟಿಗೆ ನಟಿಯಾಗಿ ಗುರುತಿಸಿಕೊಂಡೆ. ಅಭಿಮಾನಿಗಳ ಬಳಗ ಹುಟ್ಟಿಕೊಂಡಿತು. ಅದೆಲ್ಲಕ್ಕಿಂತ ಮುಖ್ಯವಾಗಿ ಅಲ್ಲಿಂದ ಇಲ್ಲಿಯವರೆಗೆ ಅದೆಷ್ಟುಕಾರ್ಯಕ್ರಮಗಳಿಗೆ ಹೋಗಿ ಬಂದಿದ್ದೇನೋ ಗೊತ್ತಿಲ್ಲ. ಈಗಲೂ ಬಿಡುವಿದ್ದಾಗ ಅದೇ ಕೆಲಸ. ಕರ್ನಾಟಕವೆಲ್ಲ ತಿರುಗಾಡಿ ಬಿಟ್ಟಿದ್ದೇನೆ ಎಂದು ಹೇಳಿದ್ದರು.

‘ಕೆಜಿಎಫ್‌’ ರಿಲೀಸ್‌ ಆದ ನಂತರ ದಿನಗಳಲ್ಲಿ ಶ್ರೀನಿಧಿ ಶೆಟ್ಟಿ ಸುತ್ತ ಹಲವು ಗಾಸಿಪ್‌ ಹರಿದಾಡಿದವು. ಅವರು ವಾಪಸ್‌ ಬಾಲಿವುಡ್‌ಗೆ ಹಾರುವುದು ಗ್ಯಾರಂಟಿಯಂತೆ, ಟಾಲಿವುಡ್‌, ಕಾಲಿವುಡ್‌ನಿಂದಲೂ ಅವರಿಗೆ ಕರೆ ಬಂದಿವೆಯಂತೆ ಎನ್ನುವ ಸುದ್ದಿಗಳದ್ದೇ ಅಬ್ಬರ ಇತ್ತು. ಕೆಜಿಎಫ್ 2 ಮುಗಿಸಿಯೇ ಬೇರೆ ಚಿತ್ರಕ್ಕೆ ಸಹಿ ಮಾಡುತ್ತಾರೆ ಎಂಬ ಮಾತುಗಳು ಇದ್ದವು.