Asianet Suvarna News Asianet Suvarna News

ಮೂರು ಸಿನಿಮಾ ರಿಲೀಸ್ ತಡವಾದರೂ ಹ್ಯಾಪಿ ಸ್ಪೇಸ್‌ನಲ್ಲಿರುವೆ: ವಿನಯ್ ರಾಜ್‌ಕುಮಾರ್

ಕೈಯಲ್ಲಿ ನಾಲ್ಕು ಸಿನಿಮಾ ಇದ್ದರೂ, ಕೊರೋನಾ ಕೊಟ್ಟ ಹೊಡೆತಕ್ಕೆ ರಿಲೀಸ್‌ಗೆ ತಡೆ. ನಟ ವಿನಯ್ ರಾಜ್‌ಕುಮಾರ್ ಏನು ಹೇಳುತ್ತಾರೆ ಕೇಳಿ.... 
 

Kannada actor Vinay Rajkumar talks about pandemic hit on his 4 films vcs
Author
Bangalore, First Published Oct 1, 2021, 1:23 PM IST
  • Facebook
  • Twitter
  • Whatsapp

ಡಾ.ರಾಜ್‌ಕುಮಾರ್ (Dr. Rajkumar) ಕುಟುಂಬ ಸಿನಿ ಜರ್ನಿ ಲೆಗೆಸಿ ಕಾಪಾಡುತ್ತಿರುವ ಮೊಮ್ಮಕ್ಕಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕೊರೋನಾ ಹೊಡೆತ ಅವರಿಗೂ ಬಿದ್ದಿದೆ. ಸಿನಿಮಾ ರಿಲೀಸ್ ಕೆಲಸಗಳನ್ನು ಆರಂಭಿಸಿರುವ ವಿನಯ್ ರಾಜ್‌ಕುಮಾರ್ (Vinay Rajkumar) ತಮ್ಮ ಕೈಯಲ್ಲಿರುವ ಪ್ರಾಜೆಕ್ಟ್‌ಗಳ ಬಗ್ಗೆ ಖಾಸಗಿ web site ಜೊತೆ ಮಾತನಾಡಿದ್ದಾರೆ. 

'ಕಳೆದ ಒಂದೂವರೆ ವರ್ಷ ತುಂಬಾ ಡಿಸಪಾಯಿಂಟಿಂಗ್ (Disappointing) ಅಗಿತ್ತು. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಸಿನಿಮಾ ಕೆಲಸಗಳಿಗೆ ತಡೆ ತಂದಿದೆ. ನನ್ನ ಚಿತ್ರ ಗ್ರಾಮಾಯಣ (Gramayana) ನಿರ್ಮಾಪಕರು ನಿಧನರಾದರು. ಈ ತಂಡ ಈಗ ಒಬ್ಬ ನಿರ್ಮಾಪಕರನ್ನು ಹುಡುಕುತ್ತಿದೆ.  ಲಾಕ್‌ಡೌನ್ ಸಡಲಿಕೆ ನಂತರ ನಾನು ಎರಡು ಸಿನಿಮಾಗಳ ಚಿತ್ರೀಕರಣ ಮಾಡುತ್ತಿರುವ ಪೆಪ್ಪಿ (Peppy) ಹಾಗೂ ಅಂದೊಂದಿತ್ತು ಕಾಲ (Andondittu Kala). ಇವು ಡಿಲೇ ಆಗುತ್ತಿವೆ  ಆದರೆ ಅದಕ್ಕಂತಲೇ ಸಮಯ ಬರುತ್ತದೆ ಎನ್ನಬಹುದು. ನಾನು ಗಾಬರಿ ಆಗುತ್ತಿಲ್ಲ. ಏಕೆಂದರೆ ಈ ಪ್ಯಾಂಡಮಿಕ್ (Pandemic) ಎಲ್ಲರ ಜೀವನವನ್ನು ಹೀಗೆ ಬದಲಾಯಿಸಿದೆ,' ಎಂದು ವಿನಯ್ ಹೇಳಿದ್ದಾರೆ. 

Kannada actor Vinay Rajkumar talks about pandemic hit on his 4 films vcs

'ಮೂರು ವರ್ಷಗಳಿಂದ ನನ್ನ ಸಿನಿಮಾ ರಿಲೀಸ್ ಆಗಿಲ್ಲ. ಆದರೂ ನಾನು ಮೆಂಟಲಿ ಹ್ಯಾಪಿ ಸ್ಪೇಸ್‌ನಲ್ಲಿದ್ದೀನಿ. ನನ್ನ ಮುಂದಿನ ಸಿನಿಮಾ ಟೆನ್‌ಗೆ  (Ten) ನಾನು ತುಂಬಾನೇ ವರ್ಕೌಟ್ ಮಾಡಿರುವೆ. ಬಾಕ್ಸರ್ (Boxer) ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿರುವೆ. ಗ್ರಾಮಾಯಣದಲ್ಲಿ ಹಳ್ಳಿ ಸೆಟ್‌. ಹಳ್ಳಿ ಹುಡುಗ, ಪೆಪ್ಪೆ ಚಿತ್ರ ಒಂದು ಕ್ರೈಂ ಥ್ರಿಲರ್ (Crimer Thriller) ಸಿನಿಮಾ ಆಗಿರುವ ಕಾರಣ ಮಾಸ್ ಲುಕ್‌ ಇದೆ,' ಎಂದು ವಿನಯ್ ಮಾತನಾಡಿದ್ದಾರೆ. 

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ದೊಡ್ಮನೆ ಕುಟುಂಬದ ವಿನಯ್ ರಾಜ್‌ಕುಮಾರ್

ಸದ್ಯ ತೀರ್ಥಹಳ್ಳಿಯಲ್ಲಿ (Thirthahalli) ಅಂದೊಂದಿತ್ತು ಕಾಲ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ತಮ್ಮ ನಿರ್ದೇಶಕರಿಗೆ ಟ್ರಿಬ್ಯೂಟ್ ಎಂದಿದ್ದಾರೆ.  ಈ ಚಿತ್ರ ಹಳೆಯ ನಿಷ್ಕಲ್ಮಶ ಸ್ನೇಹದ ಕಥೆಯನ್ನು ಹೇಳುತ್ತದೆ. ಮೊಬೈಲ್ ಇಲ್ಲದ ಕಾಲವನ್ನು ರೀಕಾಲ್ ಮಾಡುವ ಪ್ರಯತ್ನ ಇದರಲ್ಲಿ ಮಾಡಲಾಗಿದೆ. ಒಬ್ಬ ಮಧ್ಯಮ ವರ್ಗದ ಹುಡುಗನ ವಿವಿಧ ಮುಖಗಳನ್ನು ವಿನಯ್ ಪಾತ್ರಗಳ ಮೂಲಕ ಮಾಡುತ್ತಿದ್ದಾರೆ. ಇಬ್ಬರು ನಾಯಕಿರಯರು. ಅದರಲ್ಲಿ ಅದಿತಿ (Aditi Prabhudeva) ತೀರ್ಥಹಳ್ಳಿಯಲ್ಲಿ ಸಂಗೀತ ವಿದ್ಯಾರ್ಥಿನಿ. ಮೂರನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಮಾಡಿದ್ದಾರೆ. ಹಾಗೂ ಕೊನೆಯ ಹಂತವನ್ನು ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಸುರೇಶ್ ಹಾಗೂ ಲೋಕೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ಶುರುವಾದ ನೆಪೋಟಿಸಂ (Nepotism) ಬಗ್ಗೆಯೂ ವಿನಯ್ ಖಡಕ್ ಉತ್ತರ ನೀಡಿದ್ದರು.  'ಲೇ ನೆಪೋಟಿಸಂ ಬಗ್ಗೆ ಮಾತು ಅದೂ ನಮ್ಮಕನ್ನಡದಲ್ಲಿ ನೋ ವೇ. ತಮ್ಮ ಮನೆ ಮಕ್ಕಳನ್ನಷ್ಟೇ ಬೆಳಸುವುದಿಲ್ಲ. ನಮ್ಮ ಬ್ಯಾನರ್‌ನಲ್ಲಿ ಹೊರಗಿನ ಜನರಿಗೂ ಅವಕಾಶ ಕೊಟ್ಟು ಬೆಳಸುತ್ತಾರೆ. ಟ್ಯಾಲೆಂಟ್ ಬಗ್ಗೆ ಮಾತನಾಡುತ್ತೀರಾ? ನಿನಗೆ ಏನು ಟ್ಯಾಲೆಂಟ್ ಇದೆ? ಮೊದಲು ನೆಗೆಟಿವ್ ಆಗಿ ಥಿಂಗ್ ಮಾಡುವುದನ್ನು ನಿಲ್ಲಿಸಿ. ನಿಜವಾಗಲೂ ನೆಪೋಟಿಸಂ ಇದ್ದಿದ್ದ್ರೆ ಇಂಡಸ್ಟ್ರಿಯಲ್ಲಿ ಯಾರೂ ಹೊರಗಿನವರು ಇರೋಕೆ ಆಗ್ತಾನೆ ಇರ್ಲಿಲ್ಲ. ಡಾ. ರಾಜ್‌ಕುಮಾರ್ ಏನು ಅಂತ ಒಂದು ಕಾಲದಲ್ಲಿ ಹೊರಗಿನವರಾಗಿದ್ದ ಜಗ್ಗೇಶ್ ಸರ್ (Jaggesh) ಹತ್ರ ಕೇಳಿ. ಡಾ.ರಾಜ್‌ ಮಕ್ಕಳು ಹೇಗೆ ಅಂತ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಯಶ್ (Yash) ಸರ್‌ಗೂ ಕೇಳಿ. ಅವರೆಲ್ಲಾ ಉತ್ತರಿಸುತ್ತಾರೆ. ಫಾಲೋವರ್ಸ್ ಜಾಸ್ತಿ ಆಗಬೇಕು ಅಂತ ನಿಮ್ಮ ಪೋಸ್ಟ್‌ ವೈರಲ್ ಆಗಬೇಕು ಅಂತ ಇಂಥ ಕಚಡಾ ಕೆಲಸ ಮಾಡ್ತಿದ್ಯಾ. ಪಿಅರ್‌ಕೆ (PRK Productions) ಬ್ಯಾನರ್‌ ಬಗ್ಗೆ ಗೊತ್ತಾ? ವಜ್ರೇಶ್ವರಿ ಕಂಬೈನ್ಸ್‌ (Sri Vajreshwari Combines) ಬಗ್ಗೆ ಗೊತ್ತಾ. ಲಾ (Law), ಫ್ರೆಂಚ್ ಬಿರಿಯಾನಿ (French Biryani), ಮಾಯಾ ಬಜಾರ್ (Maya Bazar) ಬಗ್ಗೆ ಗೊತ್ತಾ? ಅದರಲ್ಲಿ ಯಾರು ಯಾರು ನಟಿಸಿದ್ದಾರೆ ಅಂತಾದ್ರೂ ಗೊತ್ತಾ? ಮೊದಲು ಚೆನ್ನಾಗಿ ತಿಳ್ಕೊಳಪ್ಪ,' ಎಂದು ಉತ್ತರ ನೀಡಿದ್ದರು.

Follow Us:
Download App:
  • android
  • ios