ಏಳು ಭಾಷೆಯಲ್ಲಿ ಬರುತ್ತಿರುವ ಈ ಚಿತ್ರಕ್ಕೆ ಮೂರು ಕಡೆ ಇದೇ ರೀತಿ ಮುಹೂರ್ತ ಮಾಡಲಿದ್ದಾರೆ. ಕನ್ನಡ ಚಿತ್ರವೊಂದು ಬೇರೆ ಭಾಷೆಯಲ್ಲಿ ಮುಹೂರ್ತ ಮಾಡಿಕೊಳ್ಳುತ್ತಿರುವುದು ವಿಶೇಷ. ಕನ್ನಡದಂತೆ ತೆಲುಗು, ತಮಿಳಿನಲ್ಲೂ ಚಿತ್ರಕ್ಕೆ ಅದ್ದೂರಿ ಸಂಭ್ರಮ ನಡೆಯಲಿದೆ.

ಕಬ್ಜ ಚಿತ್ರದಲ್ಲಿ ಉಪ್ಪಿಗೆ ನಾನಾ ಪಾಟೇಕರ್ ವಿಲನ್!

ಯುವ ಛಾಯಾಗ್ರಹಕ ಎ ಜೆ ಶೆಟ್ಟಿಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ ಉಪೇಂದ್ರ ಅವರ ಡಾನ್‌ ಲುಕ್‌ಗೆ ಎಲ್ಲರು ಫಿದಾ ಆಗಿದ್ದಾರೆ. ಬ್ಯುಸಿನೆಸ್‌ ಮ್ಯಾನ್‌ ಲುಕ್ಕು, ಕೈಯಲ್ಲಿ ಪಿಸ್ತೂಲು, ಎಕೆ 47 ಹಿಡಿದ ಉಪೇಂದ್ರ ಅವರ ಫೋಟೋಗಳೇ ಚಿತ್ರದ ಬಗ್ಗೆ ಕುತೂಹಲ ಮೂಡುವುದಕ್ಕೆ ಕಾರಣವಾಗಿದೆ.

ಸದ್ಯಕ್ಕೆ ಕನ್ನಡದಲ್ಲಿ ಮುಹೂರ್ತ ಮಾಡಿಕೊಂಡಿರುವ ‘ಕಬ್ಜ’, ಎರಡು- ಮೂರು ದಿನಗಳ ಅಂತರದಲ್ಲಿ ಹೈದರಾಬಾದ್‌, ಚೆನ್ನೈನಲ್ಲೂ ಇದೇ ರೀತಿ ಮುಹೂರ್ತ ಮಾಡಿಕೊಳ್ಳಲಿದೆ. ‘ಪ್ಯಾನ್‌ ಇಂಡಿಯಾ ಸಿನಿಮಾ ಆದರೂ ಬೇರೆ ಭಾಷೆಯಲ್ಲಿ ಚಿತ್ರದ ಪ್ರಚಾರ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಆದರೆ, ಅಲ್ಲೇ ಚಿತ್ರಕ್ಕೆ ಮುಹೂರ್ತ ಮಾಡಿಲ್ಲ. ಆ ನಿಟ್ಟಿನಲ್ಲಿ ನೋಡುವುದಾದರೆ ಕಬ್ಜ ಚಿತ್ರದ್ದು ಹೊಸ ಸಾಹಸ.

ಆಯಾ ಭಾಷಿಕರ ನಡುವೆಯೇ ಸಿನಿಮಾ ಮುಹೂರ್ತ ಆಗಬೇಕು ಎಂಬುದು ನನ್ನ ಕನಸು’ ಎನ್ನುತ್ತಾರೆ ನಿರ್ದೇಶಕ ಆರ್‌ ಚಂದ್ರು. ಚಿತ್ರದ ತಾರಾಗಣವೂ ಬಹು ಭಾಷೆಯ ಕಲಾವಿದರನ್ನು ಒಳಗೊಂಡಿದೆ. ಈಗಾಗಲೇ ಬಹು ಮಂದಿ ಖಳ ನಟರ ಪೈಕಿ ಜಗಪತಿ ಬಾಬು ಅವರು ಅಂತಿಮವಾಗಿದ್ದು, ಉಳಿದಂತೆ ನಾನಾ ಪಾಟೇಕರ್‌, ಪ್ರಕಾಶ್‌ ರೈ, ಜಯಪ್ರಕಾಶ್‌ ರೆಡ್ಡಿ, ಪ್ರದೀಪ್‌ ರಾವತ್‌, ಮನೋಜ್‌ ಬಾಜ್‌ಪೇಯಿ, ಸಮುದ್ರ ಖಣಿ ಅವರ ಡೇಟ್ಸ್‌ ಹೊಂದಾಣಿಕೆ ವಿಚಾರದಲ್ಲಿ ಮಾತುಕತೆಗಳು ನಡೆಯುತ್ತಿವೆ.

ಸ್ಯಾಂಡಲ್‌ವುಡ್‌ 'ದೇವಕಿ' ಪ್ರಿಯಾಂಕಾ ಬ್ಯೂಟಿಫುಲ್‌ ಫೋಟೋ!

ಡಿಸೆಂಬರ್‌ನಲ್ಲಿ ಬಂದರೆ ಕಾಜಲ್‌, ಇಲ್ಲದಿದ್ದರೆ ಚಲ್‌ಚಲ್‌

ಈ ನಡುವೆ ಚಿತ್ರದ ನಾಯಕಿಯಾಗಿ ಕಾಜಲ್‌ ಅಗರ್‌ವಾಲ್‌ ಬರಲಿದ್ದಾರೆಂಬ ಸುದ್ದಿ ಇದ್ದು ಇದಕ್ಕೆ ನಿರ್ದೇಶಕ ಆರ್‌ ಚಂದ್ರು ಅವರು ಹೇಳುವುದೇ ಬೇರೆ. ‘ಅವರ ಸಂಭಾವನೆ ಓಕೆ ಆಗಿದೆ. ಕತೆ ಕೇಳಿ ಇಷ್ಟಪಟ್ಟಿದ್ದಾರೆ. ಆದರೆ ಡೇಟ್ಸ್‌ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಅವರು ಏಪ್ರಿಲ್‌ಗೆ ಡೇಟ್ಸ್‌ ಕೊಡಲು ಸಿದ್ಧರಿದ್ದಾರೆ. ಆದರೆ, ನಮಗೆ ಡಿಸೆಂಬರ್‌ನಿಂದಲೇ ಡೇಟ್ಸ್‌ ಬೇಕಿದೆ. ನಾನು ಅಂದುಕೊಂಡಂತೆ ಡಿಸೆಂಬರ್‌ನಿಂದಲೇ ಡೇಟ್ಸ್‌ ಕೊಟ್ಟರೆ ಕಾಜಲ್‌ ಅಗರ್‌ವಾಲ್‌ ಅವರೇ ಕಬ್ಜ ಚಿತ್ರದ ನಾಯಕಿ ಆಗಲಿದ್ದಾರೆ. ಇಲ್ಲದೆ ಹೋದರೆ ಬಹು ಭಾಷೆಗೆ ಗೊತ್ತಿರುವ ದಕ್ಷಿಣ ಭಾರತೀಯ ಚಿತ್ರರಂಗದ ನಟಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಿದ್ದೇನೆ’ ಎಂಬುದು ನಿರ್ದೇಶಕರು ಕೊಡುವ ಮಾಹಿತಿ. ಒಟ್ಟಿನಲ್ಲಿ ಅದ್ದೂರಿ ಮುಹೂರ್ತ ಮಾಡಿಕೊಂಡಿರುವ ‘ಕಬ್ಜ’ ಮೂಲಕ ಆ ದಿನಗಳ ಭೂಗತ ಲೋಕದ ಕತೆಗಳನ್ನು ತೆರೆ ಮೇಲೆ ತರಲು ಉಪೇಂದ್ರ ಹಾಗೂ ಚಂದ್ರು ಹೊರಟಿದ್ದಾರೆ.