ಸಲ್ಮಾನ್‌ ಖಾನ್‌, ಸುದೀಪ್‌ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ದಬಾಂಗ್‌ 3’ ಟ್ರೇಲರ್‌ ಲಾಂಚ್‌ ಆಗಿದೆ. ಟ್ರೇಲರ್‌ನಲ್ಲಿ ಕೆಲವೇ ಶಾಟ್‌ಗಳಲ್ಲಿ ಕಾಣಿಸಿಕೊಂಡರೂ ಸುದೀಪ್‌ ತಾವು ಅಭಿನಯ ಚಕ್ರವರ್ತಿ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ. ಸ್ಟೈಲಿಷ್‌ ವಿಲನ್‌ ಆಗಿ ಅವರು ಕಾಣಿಸಿಕೊಂಡಿದ್ದಾರೆ.

ಹಿಂದಿ ಹಾಗೂ ಕನ್ನಡದ ಜತೆಗೆ ಇದು ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಚಿತ್ರ.ಆ ಕಾರಣಕ್ಕಾಗಿಯೇ ಅದರ ಎಲ್ಲಾ ಅವತರಣಿಕೆಯ ಟ್ರೇಲರ್‌ಗಳನ್ನು ಚಿತ್ರ ತಂಡ ಬುಧವಾರ (ಅ.23)ಲಾಂಚ್‌ ಮಾಡಿದೆ.

ಕನ್ನಡಕ್ಕೆ ಸಲ್ಮಾನ್ ಖಾನ್, ಯಾರ ನಿರ್ದೇಶನದಲ್ಲಿ ಅಭಿನಯ?

ಚಿತ್ರತಂಡ ಅಧಿಕೃತವಾಗಿ ಟ್ರೇಲರ್‌ ಲಾಂಚ್‌ ಕಾರ್ಯಕ್ರಮವನ್ನು ಮುಂಬೈನಲ್ಲಿ ಏರ್ಪಡಿಸಿತ್ತು. ಸಲ್ಮಾನ್‌ ಖಾನ್‌, ಸೋನಾಕ್ಷಿ ಸಿನ್ಹಾ ಸೇರಿ ಚಿತ್ರತಂಡದ ಎಲ್ಲಾ ಅಷ್ಟುಸದಸ್ಯರು ಅಲ್ಲಿ ಹಾಜರಾಗಿದ್ದರು.

ಲೈವ್‌ ಟೆಲಿಕಾಸ್ಟ್‌ ಮೂಲಕ ಕನ್ನಡ ಅವತರಣಿಕೆಯ ಟ್ರೇಲರ್‌ ಲಾಂಚ್‌ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಕನ್ನಡ ಟ್ರೇಲರ್‌ ಲಾಂಚ್‌ ಸಂದರ್ಭದಲ್ಲಿ ಕನ್ನಡದಲ್ಲೇ ನಮಸ್ಕಾರ.. ಎನ್ನುತ್ತಲೇ ಮಾತು ಆರಂಭಿಸಿದ ಸಲ್ಮಾನ್‌ ಖಾನ್‌, ಕನ್ನಡಿಗರಿಗೆ ಈ ಸಿನಿಮಾ ಇಷ್ಟವಾಗುತ್ತೆ. ನೋಡಿ ಹಾರೈಸಿ ಎಂದರು. ಸುದೀಪ್‌ ಅಭಿನಯದ ಕಾರಣಕ್ಕೆ ‘ದಬಾಂಗ್‌ 3’ ಸಾಕಷ್ಟುಕುತೂಹಲ ಹುಟ್ಟಿಸಿದೆ.

ಹಾಲಿವುಡ್ 'ಟರ್ಮಿನೇಟರ್ ಡಾರ್ಕ್ ಫೇಟ್' ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್