ಹಾಲಿವುಡ್‌ ಫೇಮಸ್ ಕನ್ನಡ ಸಿನಿಮಾ ಟರ್ಮಿನೇಟರ್ ಡಾರ್ಕ್  ಫೇಟ್ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಡಬ್ ಆಗುತ್ತಿದೆ. ಡಬ್ಬಿಂಗ್ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.  

ಟರ್ಮಿನೇಟರ್ ಡಾರ್ಕ್ ಫೇಟ್ ಚಿತ್ರದ ಟ್ರೈಲರ್ ಕನ್ನಡದಲ್ಲಿ ಲಾಂಚ್ ಮಾಡಿದ್ದಾರೆ. ನವೆಂಬರ್ 1 ರಂದು ಟರ್ಮಿನೇಟರ್ ಡಾರ್ಕ್ ಫೇಟ್ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡ ಸೇರಿದಂತೆ ಆರು ಭಾರತೀಯ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

 

ಅರ್ನಾಲ್ಡ್ ದೊಡ್ಡ ಆಕ್ಷನ್ ಹೀರೋಗಳಲ್ಲಿ ಒಬ್ಬರು. ನಾನು ಅವರ ಅಭಿಮಾನಿ ಕೂಡ ಹೌದು.  ಟರ್ಮಿನೇಟರ್ ಫ್ರ್ಯಾಂಚೈಸ್ ನನ್ನಲ್ಲಿರುವ ಅಭಿಮಾನಿಯನ್ನು  ರೋಮಾಂಚನಗೊಳಿಸಿದೆ.  ಫಾಕ್ಸ್‌ ಸ್ಟೂಡಿಯಸ್‌ಗಾಗಿ ಕನ್ನಡ ಟ್ರೈಲರ್ ಅನ್ನು ಬಿಡುಗಡೆ ಮಾಡಲು ನನಗ ಸಂತೋಷವಾಗಿದೆ. ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.