ಶಿವರಾಜ್‌ಕುಮಾರ್ ನಟನೆಯ ‘ಶಿವಪ್ಪ’ ಸಿನಿಮಾದ ಹೆಸರು ಬದಲಾಗಲಿದೆ. ಹೊಸ ಹೆಸರನ್ನು ಶಿವಣ್ಣ ಹುಟ್ಟುಹಬ್ಬ, ಜು.12ರಂದು ಅನಾವರಣ ಮಾಡುವ ಪ್ಲಾನ್ ಇದೆ. ಅಂದು ಶಿವಣ್ಣ ಅವರ 60ನೇ ಹುಟ್ಟುಹಬ್ಬ.
ಶಿವಪ್ಪ ಎನ್ನುವ ಶೀರ್ಷಿಕೆ ಕತೆಗೆ ಅಷ್ಟುಸೂಕ್ತವಾಗಿಲ್ಲ. ಮಾಸ್ ಹೆಸರು ಬೇಕಾಗಿದೆ ಎಂಬ ಕಾರಣಕ್ಕೆ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದ್ದೆ ಎನ್ನಲಾಗಿದೆ. ಕೃಷ್ಣ ಸಾರ್ಥಕ್ ನಿರ್ಮಾಣದ, ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಇಲ್ಲಿ ಡಾಲಿ ಧನಂಜಯ್ ಹಾಗೂ ಶಿವಣ್ಣ ಮುಖಾಮುಖಿ ಆಗುತ್ತಿದ್ದಾರೆ.
ಶಿವರಾಜ್‌ಕುಮಾರ್ ಶೂಟಿಂಗ್‌ಗೆ ಆರಂಭಿಸುತ್ತಿರುವಂತೆಯೇ ಅವರ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಟೈಗರ್ ಮುಖದ ಫೋಟೋ ಅಭಿಮಾನಿಗಳಲ್ಲಿ ಸಾಕಷ್ಟುಕ್ರೇಜ್ ಹುಟ್ಟು ಹಾಕಿದೆ. ಜು.10ಕ್ಕೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ.
ಸಿನಿ ಕಾರ್ಮಿಕರ ನೆರವಿಗೆ ನಿಂತ ಡಾ.ಶಿವರಾಜ್‌ಕುಮಾರ್!
‘ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಎಂಬುದು ನಮ್ಮ ತಂಡದ ಆಸೆ. ಆ ನಿಟ್ಟಿನಲ್ಲಿ ಫಸ್ಟ್ ಲುಕ್, ಟೈಟಲ್ ಟೀಸರ್ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ಕೃಷ್ಣ ಸಾರ್ಥಕ್.
