Asianet Suvarna News Asianet Suvarna News

ಅಪ್ಪು ಸಂಜೆ ಫ್ಯಾಮಿಲಿ ಜೊತೆ ಡ್ರೈವ್‌ ಹೋಗುತ್ತಿದ್ದ; ಫ್ಯಾಮಿಲಿಗಳ ಬಗ್ಗೆ ಮಾತನಾಡಿದ ಶಿವಣ್ಣ

ಫ್ಯಾಮಿಲಿ ಪ್ರಮುಖ್ಯತೆ ಏನು, ಎಷ್ಟು ಸಮಯ ಕಳೆಯಬೇಕು ಎಂದು ಅನುಶ್ರೀ ಯುಟ್ಯೂಬ್ ಚಾನೆಲ್‌ನಲ್ಲಿ ಶಿವಣ್ಣ ದಂಪತಿ ಮಾತನಾಡಿದ್ದಾರೆ. 

Kannada actor Shivarajkumar talks about importance of family vcs
Author
First Published Dec 24, 2022, 1:48 PM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 125ನೇ ಸಿನಿಮಾ ವೇದ ಬಿಡುಗಡೆಯಗಿದೆ. ಪತ್ನಿ ಗೀತಾ ನಿರ್ಮಾಣ ಮಾಡಿರುವ ಮೊದಲ ಸಿನಿಮಾ ಇದಾಗಿದ್ದು ಇಬ್ಬರೂ ಪ್ರಚಾರದಲ್ಲಿ ಬ್ಯುಸಿಯಗಿದ್ದಾರೆ. ನಿರೂಪಕಿ ಅನುಶ್ರೀ ಕೇಳಿರುವ ಫನ್ನಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ನಡುವೆ ಪ್ಯಾಮಿಲಿ ಪ್ರಾಮುಖ್ಯತೆ ಏನು? ಎಷ್ಟು ಬ್ಯುಸಿ ಇದ್ದರೂ ಫ್ಯಾಮಿಲಿಗೆ ಸಮಯ ಕೊಡಬೇಕು ಎಂದಿದ್ದಾರೆ.

'ಅಪ್ಪುಗೆ ಬ್ಯುಸಿನೆಸ್ ಮಾಡುವ ತಲೆ ತುಂಬಾ ಚೆನ್ನಾಗಿದೆ ಅದು ತಪ್ಪು ಎಂದು ನಾನು ಹೇಳುವುದಿಲ್ಲ ಅದರೆ ಅದೊಂದು ಟ್ಯಾಲೆಂಟ್. ನನಗೆ ಹೇಳುತ್ತಾನೆ ಶಿವಣ್ಣ ಇದು ತಗೋ ಶಿವಣ್ಣ ನಾನು ಅತ್ತಿಗೆ ಅವರಿಗೆ ಹೇಳುತ್ತೀನಿ ಅಂತ ಯಾವಾಗಲೂ ಹೇಳುತ್ತಾನೆ. ಅತ್ತಿಗೆ ಜೊತೆ ಯಾವಾಗಲೂ ಫೈಟ್, ನೀವು ತೆಗೆದುಕೊಳ್ಳಿ ಅತ್ತಿಗೆ ಬಿಡಬೇಡಿ ಶಿವಣ್ಣ ಅವರಿಗೆ ಗೊತ್ತಾಗುವುದಿಲ್ಲ ಎಂದು ಪುನೀತ್ ಹೇಳುತ್ತಿರುತ್ತಾರೆ ಅವನ ಡಿಫರೆಂಟ್ ಥಿಂಕಿಂಗ್' ಎಂದು ಶಿವಣ್ಣ ಮಾತನಾಡಿದ್ದಾರೆ. 

Kannada actor Shivarajkumar talks about importance of family vcs

'ಆಗಲೇ ಬೇಕಿಂಗ್ ಬಗ್ಗೆ ಅಪ್ಪು ನನ್ನ ಜೊತೆ ಮಾತನಾಡಿದ್ದರು. ಅತ್ತಿಗೆ ನಿಮಗೆ ಎಷ್ಟೊಂದು ಟ್ಯಾಲೆಂಟ್ ಇದೆ ಕಮರ್ಷಿಯಲ್ ಹೋಗಿ ಅತ್ತಿಗೆ ಎನ್ನುತ್ತಿದ್ದರು. ಅದರ ಬಗ್ಗೆ ನನಗೆ ಆಸಕ್ತಿ ಇರಲಿಲ್ಲ ಈಗ ಅಪ್ಪು ಇಲ್ಲದ ಸಮಯದಲ್ಲಿ ನಾನು ಇದನ್ನು ಮಾಡುತ್ತಿರುವೆ. ಶಕ್ತಿಧಾಮ ಮಕ್ಕಳಿಗೋಸ್ಕರ ಈ ಕೆಲಸ ಮಾಡುತ್ತಿರುವುದು ಆದರೆ ಅಪ್ಪು ತುಂಬಾ ಸಲಹೆ ಕೊಡುತ್ತಿದ್ದರು' ಎಂದು ಗೀತಾ ಹೇಳಿದ್ದಾರೆ.

'ಅಪ್ಪು ಕುಟುಂಬದವರು ಕೂಡ ಹಾಗೆನೇ ಫ್ಯಾಮಿಲಿ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ರಜೆ ಬಂದ್ರೆ ಪ್ರಯಾಣ ಮಾಡುತ್ತಿದ್ದರು. ಅಪ್ಪು ಮತ್ತು ನನಗೆ ಯೂನಿಕ್‌ ಹೊಲಿಕೆ ಯಾಕಿದೆ ಅಂದ್ರೆ ಮುಖದಲ್ಲಿ ಒಮ್ಮೆ ನಾನು ಅಪ್ಪು ತರ ಕಾಣಿಸುತ್ತದೆ, ಅಪ್ಪು ಮತ್ತು ನನ್ನ ಬಾಲ್ಯದ ಫೋಟೋದಲ್ಲಿ ನಾವು ಒಂದೇ ರೀತಿ ಕಾಣಿಸುತ್ತೀವಿ ಸೇಮ್ ಕ್ಯಾರೆಕ್ಟರ್ ಅವರಿಗೆ ಬಂದಿರುವುದು. ಇಲ್ಲ ಅನ್ನೋ ನೋವು ಮಕ್ಕಳಿಗೆ ಇದ್ದೇ ಇರುತ್ತದೆ ಆದರೆ ಮಕ್ಕಳಿಗೆ ಎಷ್ಟು ಸಮಯ ಕೊಡಬೇಕು ಅಷ್ಟೇ ಸಮಯವನ್ನು ಅಪ್ಪು ಕೊಡುತ್ತಿದ್ದರು. ಅಪ್ಪು ಬಗ್ಗೆ ಬಹಳ ಹೆಮ್ಮೆ ಮತ್ತು ಗೌರವವಿದೆ.' ಶಿವಣ್ಣ ಹೇಳಿದ್ದಾರೆ

ಹಣ ಗಂಟುಕಟ್ಟಿ ಇಟ್ಟುಕೊಳ್ಳುವ ಬುದ್ಧಿ ಇಲ್ಲ, ಅಪ್ಪಾಜಿನೇ ಗೀತಾಗೆ ಕೆಲಸ ಹೇಳಿದ್ದು: ಶಿವರಾಜ್‌ಕುಮಾರ್

'ಫ್ರೀ ಇರುವ ದಿನಗಳಲ್ಲಿ ಮನೆಯಲ್ಲಿರುವ ದಿನಗಳಲ್ಲಿ ಸಂಜೆ ಡ್ರೈವ್ ಹೋಗುತ್ತಿದ್ದರು. ನಾವು ಅವಾಗಿಂದ ಮಾಡುತ್ತಿದ್ವಿ ಅದನ್ನು ಅಪ್ಪು ಅವರು ಕೂಡ ಪಾಲಿಸುತ್ತಾರೆ. ಅಪ್ಪು ಅಶ್ವಿನಿ ಮತ್ತು ಮಕ್ಕಳು ಹೊರ ಹೋಗುತ್ತಾರೆ' ಎಂದಿದ್ದಾರೆ ಶಿವಣ್ಣ. 

'ಜೀವನದಲ್ಲಿ ಮರೆಯಲಾಗ ಕ್ಷಣ ಪದೇ ಪದೇ ನೆನಪು ಮಾಡಿಕೊಳ್ಳುವುದು ಅಂದ್ರೆ ಕಠ್ಮಂಡುವಿನಲ್ಲಿ ಒಂದು ಚಿತ್ವಾರ್ಥ ಹೆಸರಿನ ಊರಿದೆ. ಅದು ಊರೇ ಅಲ್ಲ. ಆ ಊರಿನಲ್ಲಿ ಲೈಟ್‌ ಇಲ್ಲ ...ಸೇಮ್ ಜೈಲ್ ರೀತಿ ಊಟಕ್ಕೆ ಬೆಲ್ ಹೊಡೆಯುತ್ತಾರೆ. ಯಾವ ನನ್ನ ಮಗ ಅಲ್ಲಿ ಹೋಗುತ್ತಾರೆ ಜೈಲು ರೀತಿ ಇದು ಮರೆಯಲಾಗದ ಅನುಭವ. ಅದಾದ ಮೇಲೆ ಪ್ರತಿ ವರ್ಷವೂ ನಾವು ಪ್ರವಾಸ ಮಾಡುತ್ತೀವಿ.'  ಶಿವಣ್ಣ ಮಾತನಾಡಿದ್ದಾರೆ.

Follow Us:
Download App:
  • android
  • ios