Asianet Suvarna News Asianet Suvarna News

ಹಣ ಗಂಟುಕಟ್ಟಿ ಇಟ್ಟುಕೊಳ್ಳುವ ಬುದ್ಧಿ ಇಲ್ಲ, ಅಪ್ಪಾಜಿನೇ ಗೀತಾಗೆ ಕೆಲಸ ಹೇಳಿದ್ದು: ಶಿವರಾಜ್‌ಕುಮಾರ್

 ಸೆಟ್‌ನಲ್ಲಿರುವ ಪ್ರತಿಯೊಬ್ಬರು ನಮ್ಮವರೇ ಎನ್ನುವ ಶಿವಣ್ಣ ಅವರ ಕುಟುಂಬದ ಬಗ್ಗೆ ಮಾತನಾಡಿದ ಅನುಶ್ರೀ....

Geetha Shivarajkumar Vedha exclusive interview in Anushree anchor youtube channel vcs
Author
First Published Dec 24, 2022, 11:57 AM IST

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೇದ ಸಿನಿಮಾದ ಸಂದರ್ಶನ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆ ಪತ್ನಿ ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಭಾಗಿಯಾಗಿ ಸಿನಿಮಾ ಮತ್ತು ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಶಿವಣ್ಣ ಚಿತ್ರೀಕರಣ ಮಾಡುವಾಗ ಗೀತಾ ಅವರು ಸೆಟ್‌ಗೆ ಭೇಟಿ ನೀಡಿದಾಗ ಅಲ್ಲಿದ್ದ ಪ್ರತಿಯೊಬ್ಬರಿಗೂ ಸಹಿ ತಿಂಡಿಗಳನ್ನು ತಂದು ಕೊಡುತ್ತಿದ್ದರಂತೆ. ಒಬ್ಬರಿಗೆ ಸಿಕ್ಕಿ ಮತ್ತೊಬ್ಬರಿಗೆ ಸಿಕ್ಕಿಲ್ಲ ಅಂದ್ರೆ ಬೇಸರ ಆಗಬಾರದು ಎಂದು ಇಡೀ ಸೆಟ್‌ನಲ್ಲಿರುವವರಿಗೆ ತರುತ್ತಿದ್ದಂತೆ. ಈ ವಿಚಾರದ ಬಗ್ಗೆ ಅನುಶ್ರೀ ಚರ್ಚೆ ಮಾಡಿದ್ದಾರೆ. ಈ ದೊಡ್ಡ ಗುಣ ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾಗ ಶಿವಣ್ಣ ಉತ್ತರ ಕೊಟ್ಟಿದ್ದಾರೆ.  

'ಮನೆ ಪ್ರೊಡಕ್ಷನ್‌ ಅಂತ ಬಂದಾಗ ಅಮ್ಮನೂ ಹಾಗೆ ಇದ್ದರು. ಏನೇ ಮಾಡಿದ್ದರು ಶಿಸ್ತಿನಿಂದ ಮಾಡುತ್ತಿದ್ದರು. ದೊಡ್ಡ ಕಲಾವಿದರಿಗೆ ಮಾತ್ರ ಗೌರವವಲ್ಲ ಪ್ರತಿಯೊಬ್ಬ ಸಹ ಕಲಾವಿದರಿಗೂ ಅಮ್ಮ ಮಾಡುತ್ತಿದ್ದ ರೀತಿಯಲ್ಲಿ ನಡೆಯುತ್ತಿರುವುದು. envelopeನಲ್ಲಿ ಅವರ ಹೆಸರು ಬರೆದು ಕೊಡುವುದು. ನಮ್ಮಲ್ಲಿ ಧಾರಾಳತನ ಯಾಕೆ ಬಂತ್ತು ಅಂದ್ರೆ 36 ವರ್ಷ ನಾವು ಸಂಸಾರ ಮಾಡಿದ್ದೀವಿ ಈ ಜರ್ನಿಯಲ್ಲಿ ನಾನು ಹೇಗೆ, ಹೇಗೆ ಮಾಡಲು ಇಷ್ಟ ಪಡುತ್ತೀನಿ ಎಂದು ಗೊತ್ತು. ಜೊತೆಗಿರುವಾಗ ಅವರಿಗೂ ಅದೇ ಬುದ್ಧಿ ಬರುತ್ತದೆ...ಮನಸ್ಸಾರೆ ನಾವು ಕೊಡಬೇಕು ಅಯ್ಯೋ ಇಷ್ಟೊಂದು ಖರ್ಚು ಆಗುತ್ತೆ ಎಂದು ಲೆಕ್ಕ ಮಾಡಬಾರದು. ನಾವು ಮಾಡಿದ್ದಾಗ ಪ್ರತಿಯೊಬ್ಬರು ಮನಸ್ಸಿನಿಂದ ಒಪ್ಪಿಕೊಳ್ಳಬೇಕು' ಎಂದು ಮಾತನಾಡಿದ್ದಾರೆ.

Geetha Shivarajkumar Vedha exclusive interview in Anushree anchor youtube channel vcs

'ನಾನು ಗೀತಾ ಜೀವನವನ್ನು ಎಂಜಾಯ್ ಮಾಡುತ್ತೀವಿ. ಹಣ ಮಾಡಬೇಕು ಗಂಟು ಕಟ್ಟಿಕೊಂಡು ಇಟ್ಟಿಕೊಳ್ಳಬೇಕು ಆ ಬುದ್ಧಿ ನಮಗೆ ಇಲ್ಲ. ದುಡ್ಡಿದ್ದರೆ  ಹೋಗಬೇಕು ಅಷ್ಟೆ. ಜೀವನದಲ್ಲಿ ನಮಗೆ ಲೆಕ್ಕಾಚಾರನೇ ಇಲ್ಲ. ಒಂದು ಸಮಯದಲ್ಲಿ ಅಪ್ಪಾಜಿ ಮನೆಗೆ ಬಂದು ಗೀತಾಗೆ ಕಂದಾ ನಿನ್ನ ಗಂಡ ಕೆಲಸಗಳನ್ನು ನೋಡಿಕೋ ಎಂದು ಹೇಳಿದ್ದರು ಆಗ ಗೀತಾ ಶುರು ಮಾಡಿದ್ದು. ಇದು ನಮಗೆ ಗೊತ್ತಾಗಲ್ಲ ಅಮ್ಮ ಏನು ಮಾಡಿದ್ದರು ಅದನ್ನು ಪಾಲಿಸುತ್ತಿರುವುದು. ಪೂರ್ಣಿಮಾ ಹೆಸರಿನಲ್ಲಿ ಯೂನಿಟ್‌ ಇತ್ತು  ಶ್ರೀಮುತ್ತು ಅಂತ ಮಾಡಿದ್ದಾಗ ಅಪ್ಪಾಜಿ ಖುಷಿ ಪಟ್ಟರು ಆಮೇಲೆ ಎಡಿಟಿಂಗ್ ರೂಮ್ ಓಪನ್ ಮಾಡಿದೆವು. ನಮ್ಮ ಜೀವನ ಶಾಶ್ವತವಲ್ಲ ನಾಳೆ ನಾವು ಹೋಗಬೇಕಿದ್ದರೆ ಎಲ್ಲೋ ಒಬ್ಬರಿಗೆ ಒಳ್ಳೆಯದು ಮಾಡಿದ್ದೀನಿ ಅಂತ ಮನಸ್ಸಿನಲ್ಲಿ ಇರಬೇಕು. ಏನಯ್ಯ ಅವನು ಹೀಗೆ ಮಾಡ್ಬಿಟ್ಟಾ ಅಂತ ಮಾತು ಬರಬಾರದು. ನಮ್ಮ ಬಳಿ ಏನಿದೆ ಅದರಲ್ಲಿ ನಾವು ಖುಷಿಯಾಗಿ ಇರಬೇಕು. ಇದು ದೊಡ್ಡ ಮಾತಲ್ಲ ನನ್ನ ಜೀವನದಲ್ಲಿ ಆಗಿರುವ ಅನುಭವಗಳಿದು. ನಾನು ರಾಜ್‌ಕುಮಾರ್ ಅವರ ಮಗ ಆಗಿರಬಹುದು ಜನರು ಆ ಪ್ರೀತಿ ಕೊಟ್ಟಿದ್ದಾರೆ ಏನೇ ಇದ್ದರೂ ನನ್ನ ತಂದೆ ನಡೆಸಿಕೊಂಡು ಬಂದ ಕೆಲಸಗಳನ್ನು ನಾನು ಪಾಲಿಸಬೇಕು ಮುಂದುವರೆಸಿಕೊಂಡು ಹೋಗಬೇಕು.' ಎಂದು ಹೇಳಿದ್ದಾರೆ.

Vedha ಶಿವರಾಜ್‌ಕುಮಾರ್ ಜೊತೆ ಆ ಇಬ್ಬರು ಹೆಣ್ಣು ಮಕ್ಕಳಿಗೆ ಹೆಸರು ಬಂದಿದ್ದು ನನಗೆ ಖುಷಿ ಇದೆ: ಗೀತಾ

'ಶಿವರಾಜ್‌ಕುಮಾರ್ ಅವರ 100ನೇ ಸಿನಿಮಾವನ್ನು ನಾವು ನಿರ್ಮಾಣ ಮಾಡಬೇಕಿತ್ತು ಆದರೆ ಅ ಸಮಯದಲ್ಲಿ ಪ್ರೇಮ್ ಅವರು ದಿ ವಿಲನ್ ಸಿನಿಮಾ ಮಾಡಲು ಮುಂದಾದ್ದರು. ಬೇರೆ ಯಾವ ನಂಬರ್‌ ನಮಗೆ ಇಷ್ಟವಾಗಲಿಲ್ಲ ಕೊನೆಗೆ 125ನೇ ಸಿನಿಮಾ ನಮ್ಮ ಕೈ ಸೇರಿತ್ತು' ಎಂದಿದ್ದಾರೆ ಗೀತಾ ಶಿವರಾಜ್‌ಕುಮಾರ್.

 

Follow Us:
Download App:
  • android
  • ios