Asianet Suvarna News Asianet Suvarna News

ಮೊದಲ ಹಂತದ ಚಿತ್ರೀಕರಣ ಮುಗಿಸಿದ ಶಿವಣ್ಣನ 'ನೀ ಸಿಗೋವರೆಗೂ'

-ಶಿವಣ್ಣ ಅಭಿನಯದ 124ನೇ ಚಿತ್ರ
-ಕನ್ನಡದಲ್ಲಿ ಮೊದಲ ಬಾರಿಗೆ ಮೆಹ್ರಿನ್‌ ಕೌರ್‌ ನಟನೆ
-ಆರ್ಮಿ ಅಧಿಕಾರಿಯಾಗಿ ಶಿವರಾಜ್‌ಕುಮಾರ್

Kannada actor Shivarajkumar completes Nee Sigoovaregu film first schedule shooting vcs
Author
Bangalore, First Published Oct 16, 2021, 4:36 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ನ (Sandalwood) ಚಿತ್ರರಂಗದ ಚಿರ ಯುವಕ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (ShivarajKuma) ಅಭಿನಯದ 124ನೇ ಚಿತ್ರ  'ನೀ ಸಿಗೋವರೆಗೂ' (Nee Sigoovaregu) ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಲೂ ತಯಾರಿ ಆರಂಭಿಸಿದೆ. ಚಿತ್ರದಲ್ಲಿ ಶಿವಣ್ಣ ಡಬಲ್ ಶೆಡ್‌ನಲ್ಲಿ ಅಭಿನಸಿಯಿದ್ದು, ಒಂದು ಪಾತ್ರದಲ್ಲಿ ಆರ್ಮಿ ಅಧಿಕಾರಿಯಾಗಿ (Army Officer) ಕಾಣಿಸಿಕೊಂಡಿದ್ದಾರೆ. 

ಭಾವನಾತ್ಮಕ ಪ್ರೇಮ ಕಥಾ (Love Story) ಹಂದವಿರುವ ಈ ಚಿತ್ರವನ್ನು ರಾಮ್‌ ಧೂಲಿಪುಡಿ (Ram Dhulipudi) ನಿರ್ದೇಶಿಸುತ್ತಿದ್ದು,  ಬೆಂಗಳೂರು (Bengaluru), ಚಿಕ್ಕಮಗಳೂರು (Chikkamagaluru), ಯುಎಸ್ (USA), ಸೇರಿದಂತೆ ಜಮ್ಮು-ಕಾಶ್ಮೀರ (Jammu Kashmir) ಮುಂತಾದ ಕಡೆಗಳಲ್ಲಿ ಚಿತ್ರೀಕರಣ (Shooting) ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

Kannada actor Shivarajkumar completes Nee Sigoovaregu film first schedule shooting vcs

'ನೀ ಸಿಗೋವರೆಗೂ' ಚಿತ್ರವು ಕನ್ನಡ (Kannada) ಮತ್ತು ತೆಲುಗು (Telagu) ಭಾಷೆಗಳಲ್ಲಿ ತಯಾರಾಗುತ್ತಿದ್ದು, ಬಾಲ ಶ್ರೀರಾಮ್, ಸ್ಟುಡಿಯೋಸ್ ಲಾಂಛನದಲ್ಲಿ ನರಾಲ ಶ್ರೀನಿವಾಸ್ ರೆಡ್ಡಿ, ಶ್ರೀಕಾಂತ್ ಧುಲಿಪುಡಿ ಹಾಗೂ ಸ್ವಾತಿ ವನಪಲ್ಲಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 

ಶಿವಣ್ಣನಿಗೆ ಮೊದಲ ಬಾರಿಗೆ ಜೋಡಿಯಾಗಿ ಪಂಜಾಬಿ ನಟಿ ಮೆಹ್ರಿನ್‌ ಕೌರ್‌ ಪೀರ್‌ಜಾದಾ (Mehreen Kaur Pirzada) ನಾಯಕಿಯಾಗಿ ನಟಿಸುತ್ತಿದ್ದಾರೆ. ಸಾಧು ಕೋಕಿಲ (Sadhu Kokila), ಟಾಲಿವುಡ್ ಗಾಯಕಿ ಮಂಗ್ಲಿ  (Singer Mandli), ನಾಜರ್, ಸಂಪತ್ ಕುಮಾರ್ ಸೇರಿದಂತೆ ಮುಂತಾದವರ ತಾರಾಬಳಗವೇ ಚಿತ್ರಕ್ಕಿದೆ. 'ಟಗರು' (Tagaru)  ಖ್ಯಾತಿಯ ಚರಣ್ ರಾಜ್ ಸಂಗೀತ ಸಂಯೋಜನೆ (Music Composition), ದೀಪು ಸಂಕಲನ, ಮಹೇಂದ್ರ ಸಿಂಹ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

ತಬ್ಬಿಕೊಂಡು ಮುದ್ದಾಡಿದ ಅಭಿಮಾನಿಗೆ ಶಿವಣ್ಣ ಕೊಟ್ಟ ಪ್ರೀತಿಯ ಪಂಚ್!

'ನೀ ಸಿಗುವವರೆಗೂ' ಸಿನಿಮಾಕ್ಕೆ ಕಿಚ್ಚ ಸುದೀಪ್‌ (Kichcha Sudeep) ಈ ಹಿಂದೆ ಕ್ಲಾಪ್‌ ಮಾಡಿ ಶುಭ ಹಾರೈಸಿದರಲ್ಲದೇ,  'ಶಿವಣ್ಣ ಅವರಿಗೆ ಇಂಥ ಕಥೆ ಬರೆಯುವವರು ಇರುವವರೆಗೂ ಅವರಿಗೆ ವಯಸ್ಸಾಗಲ್ಲ. ಚಿತ್ರರಂಗಕ್ಕೆ ಕಾಲಿಟ್ಟ ಹೊಸತರಲ್ಲಿ ಶಿವಣ್ಣ ನಮ್ಮ ಚಿತ್ರಕ್ಕೆ ಕ್ಲಾಪ್‌ ಮಾಡಲು ಬಂದರೆ ರೋಮಾಂಚನವಾಗುತ್ತಿತ್ತು. ಈಗ ಅವರ ಚಿತ್ರಕ್ಕೆ ನಾನು ಕ್ಲಾಪ್‌ ಮಾಡಿದ್ದು ಖುಷಿ ಅನಿಸುತ್ತಿದೆ ಎಂದು ಹೇಳಿದ್ದರು. 

ನಾಯಕಿ ಮೆಹ್ರಿನ್‌,  'ಆರೋಹಿ' ಎನ್ನುವ ಚಾಲೆಂಜಿಂಗ್‌ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು  ಇವರ ಮೊದಲ ಕನ್ನಡ ಸಿನಿಮಾ. ಶಿವಣ್ಣನ ಜೊತೆ ನಟಿಸುವುದಕ್ಕೆ ನರ್ವಸ್‌ ಇಲ್ಲ. ಎಕ್ಸೈಟ್‌ಮೆಂಟ್‌ ಇದೆ. ಅವರು ದೊಡ್ಡ ಸ್ಟಾರ್‌ ಆದರೂ ಇಷ್ಟು ಸಿಂಪಲ್ಲಾಗಿ ಇರ್ತಾರೆ. ನಾನು ಅವರ 'ಟಗರು' ಚಿತ್ರ ಮತ್ತು ಸುದೀಪ್‌ ಸರ್‌ ಮಾಡಿರುವ 'ಈಗ' (Eega) ನೋಡಿದ್ದೇನೆ. ಹಾಗೂ ನನ್ನ ಫ್ರೆಂಡ್ಸ್‌ ಜೊತೆಗೆ ಆಗಾಗ ಬೆಂಗಳೂರಿಗೆ ಬರುತ್ತಾ ಇರ್ತೀನಿ ಎಂದು ತಿಳಿಸಿದ್ದಾರೆ.

ಶಿವಣ್ಣನಿಗೆ 'ಚರಂಡಿ ಕ್ಲೀನರ್' ಆಗೋ ಆಸೆ, ಸೆಂಚುರಿ ಸ್ಟಾರ್ ಹೇಳಿದ ಕಾರಣ ನೋಡಿ

ಇನ್ನು ಶಿವಣ್ಣನ ಬಹು ನಿರೀಕ್ಷಿತ ಚಿತ್ರ 'ಭಜರಂಗಿ 2' (Bhajarangi 2) ಇದೇ ಅಕ್ಟೋಬರ್ 29 ರಂದು ತೆರೆ ಕಾಣುತ್ತಿದ್ದು, ಎ ಹರ್ಷ (A.Harsha) ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಜಯಣ್ಣ, ಭೋಗೇಂದ್ರ ನಿರ್ಮಾಣದ ಈ ಚಿತ್ರದಲ್ಲಿ ಜಾಕಿ ಭಾವನಾ, ಭಜರಂಗಿ ಲೋಕಿ, ಶ್ರುತಿ ಸೇರಿದಂತೆ ವಿಶೇಷವಾದ ತಾರಾಗಣವಿದೆ. ಅದ್ದೂರಿ ಮೇಕಿಂಗ್‌ ಜೊತೆಗೆ ಶಿವಣ್ಣ ಲುಕ್‌ಗಳು ಭಿನ್ನವಾಗಿವೆ. ಚಿತ್ರದಲ್ಲಿ ನಟಿ ಶ್ರುತಿ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಅವರ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟರ್ ರಿಲೀಸ್ ಮಾಡಿತ್ತು. 'ಭಜರಂಗಿ 2' ಚಿತ್ರ 2013 ರಲ್ಲಿ ತೆರೆಕಂಡ  'ಭಜರಂಗಿ' (Bhajarangi) ಮಂದುವರೆದ ಭಾಗವಾಗಿದೆ.

Follow Us:
Download App:
  • android
  • ios