ಶಿವಣ್ಣನಿಗೆ 'ಚರಂಡಿ ಕ್ಲೀನರ್' ಆಗೋ ಆಸೆ, ಸೆಂಚುರಿ ಸ್ಟಾರ್ ಹೇಳಿದ ಕಾರಣ ನೋಡಿ
ಸಲಗ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ ಶಿವರಾಜ್‌ಕುಮಾರ್. ಈ ಪಾತ್ರ ಮಾಡಬೇಕು ಅನಿಸಿದ್ದು ಯಾಕೆ ಗೊತ್ತಾ?
ಅಕ್ಟೋಬರ್ 14ರಂದು ರಾಜ್ಯಾದ್ಯಂತ ಸಲಗ(Salaga) ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಪ್ರಯುಕ್ತ 10ರಂದು ಬೆಂಗಳೂರಿನ (Bengaluru) ಖಾಸಗಿ ಹೋಟೆಲ್‌ನಲ್ಲಿ ಪ್ರೀ-ರಿಲೀಸ್ ಈವೆಂಟ್ ಹಮ್ಮಿಕೊಂಡಿದ್ದರು. ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar), ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar), ರಿಯಲ್ ಸ್ಟಾರ್ ಉಪೇಂದ್ರ (Upendra), ಡಾಲಿ ಧನಂಜಯ್ (Dolly Dhananjay), ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವೇದಿಕೆಯ ಮೇಲೆ ಚಿತ್ರತಂಡಕ್ಕೆ ಶುಭ ಹಾರೈಸಲು ಆಗಮಿಸಿದ ಶಿವಣ್ಣ ತಮ್ಮ ಮುಂದಿನ ಪ್ಲಾನ್, ತಾವು ನಟಿಸಬೇಕು ಎಂದು ಆಸೆ ಪಟ್ಟಿರುವ ಪಾತ್ರ ಯಾವುದು ಎಂದು ಹಂಚಿಕೊಂಡಿದ್ದಾರೆ. 'ಇಂಡಸ್ಟ್ರಿಯಲ್ಲಿ 36 ವರ್ಷ ಅಂದಾಕ್ಷಣ ಎಲ್ಲರೂ ಸೀನಿಯರ್ ಅಂತ ಹೇಳಿ ನೀವು ಲೀಡರ್ (Leader) ನೀವೇ ಹೋಗಿ ಅಂತಾರೆ ಅದೆಲ್ಲಾ ಸುಳ್ಳು. ನಮ್ಮ ತಂದೆ ಹೇಳಿಕೊಟ್ಟಿರುವುದು ಒಂದೇ ಪ್ರೊಡ್ಯೂಸರ್ ಆಕ್ಟರ್ ಆಗಿರಬೇಕು, ಒಬ್ಬ ಆಕ್ಟರ್ ನಿರ್ದೇಶಕನಾಗಿರಬೇಕು. ಡೈರೆಕ್ಟರ್ (Director) ಹೇಳುವುದಕ್ಕೆ ತಲೆ ಬಾಗಬೇಕು ಯಾವತ್ತು ಅಹಂನಿಂದ ಮಾತನಾಡಬಾರದು. ವಿಜಿ (Duniya Vijay) ನನಗೆ ಹಳೆ ಸ್ನೇಹಿತ. ಚಿಕ್ಕ ಪಾತ್ರ ಬೇಡ ಅಂದ್ರು ಇಲ್ಲ ನಾನು ನಿಮ್ ಜೊತೆ ಇರ್ಬೇಕು ಅಂತ ಹೇಳುತ್ತಾರೆ. ಶ್ರೀಕಾಂತ್ (Producer Srikanth) ನನಗೆ 25ವರ್ಷದಿಂದ ಸ್ನೇಹಿತ. ಚರಣ್ ರಾಜ್ (Charan Raj) ಮಾಡಿರುವ ಸಂಗೀತ ಸೂಪರ್ ಆಗಿದೆ. ಅವರದ್ದು ಬೇರೆ ಟ್ಯೂನ್ ಇರುತ್ತೆ ಅದು ಚೆನ್ನಾಗಿರುತ್ತದೆ' ಎಂದು ಮಾತನಾಡಿದ್ದಾರೆ.
ದಸರಾ ಹಬ್ಬಕ್ಕೆ ಥಿಯೇಟರ್‌ನಲ್ಲಿ 'ಸಲಗ' ಹಾಗೂ 'ಕೋಟಿಗೊಬ್ಬ 3' ಧಮಾಕ!'ಯಾರೇ ಬಂದ್ರು ನಾನು ಅವರ ಜೊತೆ ಸಿನಿಮಾ ಮಾಡ್ತೀನಿ ವಿಜಿ ಮಾಡಿದ್ರೆ ಮಾಡಲ್ವಾ? ಎಲ್ಲರೂ ಕೇಳುತ್ತಾರೆ ಎಷ್ಟು ಸಿನಿಮಾ ಮಾಡ್ತೀದ್ದೀರಾ ಅಂತ ನಾನು ಹೇಳ್ತಿನಿ 25 ಸಿನಿಮಾ ಅಂತ. ಸಿನಿಮಾ ಹೆಂಗ್ ಹೋಗುತ್ತೆ ಬಿಡುತ್ತೆ ಆಮೇಲೆ ಸಿನಿಮಾ ಮಾಡ್ಬೇಕು ಅಷ್ಟೆ. ಎಷ್ಟೊಂದು ಜನ ಆಸೆ ಕಟ್ಕೊಂಡು ಬರ್ತಾರೆ ಒಂದು ಆಸೆ ಕ್ಲಿಕ್ ಆಗಬೋದು ಅಲ್ವಾ? ವಿಜಿ ಜೊತೆ ಯಾವ ಜಾನರ್ ಸಿನಿಮಾ ಮಾಡಬೇಕು ಎಂದು ಪ್ಲಾನ್ ಮಾಡಿಲ್ಲ ಆದರೆ ಒಂದೊಳ್ಳೆ ವಿಭಿನ್ನವಾದ ಪಾತ್ರ ಮಾಡಬೇಕು. ಒಂದು ಲೋಕಲ್ ಕ್ಯಾರೆಕ್ಟರ್ ಆಗಿರಬೇಕು. ತೊಟ್ಟಿ ಕ್ಲೀನ್ (Garbage Cleaner) ಮಾಡುವವನು ಅಂದ್ರೆ ಈ ಕಚಡಗಳನ್ನು ಕ್ಲೀನ್ ಮಾಡುವವನು, ಡ್ರೈನೇಜ್ ಬ್ಲಾಕ್ (Drainage block) ಆದಾಗ ಕ್ಲೀನ್ ಮಾಡುವವನ ಪಾತ್ರ ಮಾಡಬೇಕು ನಾನು ಯಾಕೆಂದರೆ ಸೊಸೈಟಿಯಲ್ಲಿ ಕ್ಲೀನ್ ಮಾಡಬೇಕಿರುವುದು ಜಾಸ್ತಿ ಇದೆ. ಅದಕ್ಕೆ ರಿಲವೆಂಟ್ ಆಗಿ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ' ಎಂದು ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.