ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪ್ರತಿ ವರ್ಷವೂ ತಪ್ಪದೆ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡುತ್ತಾರೆ .ಆದರೆ ವೈಯಕ್ತಿಕ ಕಾರಣಗಳಿಂದ ಶಬರಿಮಲೆಗೆ ಹೋಗಲು ಆಗದ ಕಾರಣ ಮಾಲಾಧಾರಿಗಳ ಜೊತೆ ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಕಪ್‌ವೊಳಗೆ ಶಿವಣ್ಣ ಸ್ಪೂನ್ ಹಾಕುವ ವಿಡಿಯೋಗೆ ನೆಟ್ಟಿಗರು ಫಿದಾ!

ಅಷ್ಟೇ ಅಲ್ಲದೆ ಪೂಜಾ ಕಾರ್ಯಕ್ರಮದ ನಂತರ ಮಾಲಾಧಾರಿಗಳಿಗೆ ಕೈಯಾರೇ ಊಟ ಬಡಿಸಿದ್ದಾರೆ.  ಈ ಫೋಟೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಈ ವೇಳೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಿವರಾಮ್  ಹಾಗೂ ಇನ್ನಿತರರು  ಭಾಗಿಯಾಗಿದ್ದಾರೆ.

ತಿರುಪತಿ ತಿಮ್ಮಪ್ಪನಿಗೆ ಹರಕೆ ಮುಡಿ ಕೊಟ್ಟ ಗೀತಾ ಶಿವರಾಜ್‌ಕುಮಾರ್!

ಕೆಲದಿನಗಳ ಹಿಂದೆ ಶಿವರಾಜ್‌ಕುಮಾರ್ ಹಾಗೂ ಪತ್ನಿ ಗೀತಾ ತಿರುಮಲ ತಿರುಪತಿಗೆ ಭೇಟಿ ನೀಡಿದ್ದರು.   2019 ರಲ್ಲಿ ಎದುರಾದ ಸಂಕಷ್ಟದಲ್ಲಿ ಕೈ ಹಿಡಿದ ತಿಮ್ಮಪ್ಪನಿಗೆ ಗೀತಾ ಶಿವರಾಜ್‌ಕುಮಾರ್ ಹರಕೆ ಮುಡಿ ನೀಡಿದ್ದಾರೆ.