ತಿರುಪತಿ ತಿಮ್ಮಪ್ಪನಿಗೆ ಹರಕೆ ಮುಡಿ ಕೊಟ್ಟ ಗೀತಾ ಶಿವರಾಜ್‌ಕುಮಾರ್!

2019 ರಲ್ಲಿ ಎದುರಾದ ಕಷ್ಟಗಳನ್ನು ಪರಿಹರಿಸಿ ನೆಮ್ಮದಿ ನೀಡಿದ ದೇವ ತಿರುಪತಿ ತಿಮ್ಮಪ್ಪನಿಗೆ ಶಿವರಾಜ್‌ಕುಮಾರ್ ಪತ್ನಿ ಗೀತಾ ಮುಡಿ ಕೊಟ್ಟಿದ್ದಾರೆ. 

Kannada actor Shivarajkumar wife Geetha  tonsure offering to Tirumala Tirupati

ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ದಂಪತಿ ಡಿಸೆಂಬರ್ 11 ರಂದು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿ ಹರಕೆಯನ್ನು ತೀರಿಸಿದ್ದಾರೆ. 

ಶಿವಣ್ಣ ಒಬ್ಬರೇ ಹ್ಯಾಟ್ರಿಕ್‌ ಹೀರೋ: ದರ್ಶನ್‌

ಪಾರ್ವತಮ್ಮ ರಾಜ್‌ ಕುಮಾರ್ ತೀರಿಕೊಂಡ ದಿನದಿಂದ ಕುಟುಂಬದ ಹಿರಿಯಕ್ಕ ಆಗಿ ಜವಾಬ್ದಾರಿ  ಹೊತ್ತು ತಾಯಿಯಂತೆ ಕುಟುಂಬ ನಡೆಸಿಕೊಂಡು ಬರುತ್ತಿದ್ದಾರೆ ಗೀತಾ ಶಿವರಾಜ್‌ಕುಮಾರ್‌.  ಈ ಹಿಂದೆ ತಿರುಪತಿಗೆ ಅನೇಕ ಬಾರಿ ತಿರುಪತಿಗೆ ಭೇಟಿ ನೀಡಿರುವ ಗೀತಾ ಇದೇ ಮೊದಲ ಬಾರಿ ತಿಮ್ಮಪ್ಪನಿಗೆ ಸಂಪೂರ್ಣ ಮುಡಿ ಕೊಟ್ಟಿದ್ದಾರೆ.

 

ಇದರ ಬಗ್ಗೆ ಶಿವರಾಜ್‌ಕುಮಾರ್ ಟ್ಟಿಟರ್‌ನಲ್ಲಿ '2019 ರಲ್ಲಿ ಎಲ್ಲಾ ಕಷ್ಟಗಳಲ್ಲಿ ಕೈ ಹಿಡಿದ ಆ ತಿರುಪತಿ ತಿಮ್ಮಪ್ಪನಿಗೆ ನಮ್ಮ ಅರ್ಪಣೆ ' ಎಂದು ಬರೆದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios