Asianet Suvarna News Asianet Suvarna News

ನಟ ಶಶಿಕುಮಾರ್ ಮುಖ ಗುರುತೇ ಸಿಗದಷ್ಟು ಬದಲಾವಣೆ; ಆ ಆಕ್ಸಿಡೆಂಟ್ ನಂತರ ಏನಾಯ್ತು?

98ರಲ್ಲಿ ನಡೆದ ರಸ್ತ ಅಪಘಾತದಿಂದ ನಟ ಶಶಿಕುಮಾರ್ ಜೀವನವೇ ಬದಲಾಗಿತ್ತು. ಅಷ್ಟಕ್ಕೂ ಏನ್ ಅಯ್ತು?
 

Kannada actor Shashikumar face transformation photo after accident goes viral vcs
Author
First Published Aug 27, 2024, 4:24 PM IST | Last Updated Aug 27, 2024, 4:53 PM IST

95ರ ದಶಕದಲ್ಲಿ ಕನ್ನಡ ಚಿತ್ರರಂಗದವನ್ನು ರೂಲ್ ಮಾಡುತ್ತಿದ್ದ ಬಾಕ್ಸ್ ಆಫೀಸ್‌ ಸುಲ್ತಾನ್, ಸ್ಟಾರ್ ನಟ ಶಶಿಕುಮಾರ್. ಕಾಲ್‌ ಶೀಟ್‌ ಫ್ರೀ ಇಲ್ಲದಷ್ಟು ಬ್ಯುಸಿಯಾಗಿದ್ದ ನಟ ಇದ್ದಕ್ಕಿದ್ದಂತೆ ತೆರೆಯಿಂದ ಮರೆಯಾಗಿದ್ದು ಯಾಕೆ? ಗುರುತೇ ಸಿಗದಷ್ಟು ಬದಲಾವಣೆ ಆಗಿರುವುದು ಯಾಕೆ? ರಸ್ತೆ ಅಫಘಾತ ಹೇಗೆ ಆಯ್ತು? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೋಗೆ ಇಲ್ಲದೆ ಮಾಹಿತಿ.....

1998ರಲ್ಲಿ ನಟ ಶಶಿಕುಮಾರ್ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿನ ಶಿವಾನಂದ ವೃತ್ತದ ಕಡೆ ತಮ್ಮ ಕಾರಿನಲ್ಲಿ ಪ್ರಯಾಣ ಮಾಡುವಾಗ ಕಾರು ಆಕ್ಸಿಡೆಂಟ್ ಆಗಿದೆ. ಆಕ್ಸಿಡೆಂಡ್ ಪ್ರಮಾಣ ತೀವ್ರವಾಗಿದ್ದು ಮೂಗು ಮೂಳೆ ಮುರಿದಿತ್ತು, ಮುಖಕ್ಕೆ ಗಂಭೀರ ಗಾಯಗಳಾಗಿತ್ತು. ಶಶಿಕುಮಾರ್‌ ಮತ್ತೆ ಮೊದಲಿನಂತೆ ಆಗಬೇಕು ಎಂದು ದೊಡ್ಡ ಆಪರೇಷನ್ ಮಾಡಲಾಗಿತ್ತು. ಸುಮಾರು 8 ಗಂಟೆಗಳ ಆಪರೇಷನ್ ನಡೆಸಿದ ವೈದ್ಯರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟ ನೆನಪಿಸಿಕೊಳ್ಳುತ್ತಾರೆ. 

ಕುಡಿತದ ಚಟಕ್ಕೆ ಖ್ಯಾತ ಯೂಟ್ಯೂಬರ್ ಸಾವು; ಹಣ ಸಹಾಯ ಮಾಡಿದರೂ ಬದುಕಲಿಲ್ಲ!

 ಈ ಘಟನೆ ನಂತರ ಶಶಿ ಕುಮಾರ್ ಮುಖದಲ್ಲಿ ಸಾಕಷ್ಟು ಬದಲಾವಣೆಗಳು ಆಗಿತ್ತು. ದೊಡ್ಡ ಆಪರೇಷನ್ ಆಗಿದ್ದ ಕಾರಣ ಕೆಲವು ತಿಂಗಳು ಮನೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಆ ಸಮಯದಲ್ಲಿ ಕೆಲವು ಪತ್ರಿಕೆಗಳು ಶಶಿ ಕುಮಾರ್‌ ಇನ್ನು ಮುಂದೆ ಡ್ಯಾನ್ಸ್  ಮಾಡಲು ಸಾಧ್ಯವಿಲ್ಲ ಫೈಟ್‌ ಸೀನ್‌ಗಳು ಮಾಡಲು ಕಷ್ಟವಾಗುತ್ತದೆ ಎಂದು ವರದಿ ಮಾಡಿದ ಕಾರಣ ಅವಕಾಶಗಳು ಕಡಿಮೆ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ದುಡಿಯುತ್ತಿದ್ದ ಶಶಿಕುಮಾರ್ ಇದ್ದಕ್ಕಿದ್ದಂತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಇಬ್ಬರು ಮಕ್ಕಳ ಮತ್ತು ಪತ್ನಿ ಜೊತೆ ಬಾಡಿಗೆ ಮನೆಯಲ್ಲಿ ಬದುಕಿ ನಡೆದಿ ಸಾಕಷ್ಟು ಚಾಲೆಂಜ್‌ಗಳನ್ನು ಎದುರಿಸಿ ಈಗ ಮತ್ತೆ ನಟನೆ ಕಡೆ ಮುಖ ಮಾಡಿದ್ದಾರೆ.

ರೀಲ್ಸ್‌ ಮಾಡೋಕೆ ನಿಮ್ಮಪ್ಪನ ದುಡ್ಡು ವೇಸ್ಟ್ ಮಾಡ್ತಿದ್ಯಾ, ಬಟ್ಟೆ ಬಗ್ಗೆ ತೀರಾ ಕೊಳಕು ಕಾಮೆಂಟ್ ಮಾಡ್ತಾರೆ: ನಮ್ರತಾ ಗೌಡ ಬೇಸರ

Kannada actor Shashikumar face transformation photo after accident goes viral vcs

Latest Videos
Follow Us:
Download App:
  • android
  • ios