Asianet Suvarna News Asianet Suvarna News

ಎಲೆಕ್ಟ್ರಿಕ್ ಸ್ಕೂಟರ್ ನಮ್ಮ ತಲೆಯನ್ನೂ ಕೆಡಿಸುತ್ತೆ, ಇವಿ ಸಾಕಪ್ಪ ಸಾಕು ಎಂದ ನಟ ಶಂಕರ್!

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿರುವ ನಟ ಶಂಕರ್ ಅಶ್ವತ್ಥ್ ಇದೀಗ ಸಹವಾಸವೇ ಸಾಕಪ್ಪ ಸಾಕು ಅಂತಿದ್ದಾರೆ. ಅಷ್ಟಕ್ಕೂ ನಟ ಅಶ್ವತ್ಥ್‌ ಇವಿ ಸ್ಕೂಟರ್ ಕುರಿತು ಹೇಳಿದ್ದೇನು?

Kannada Actor shankar ashwath fed up with electric scooter due to annoying problems ckm
Author
First Published Sep 2, 2024, 10:56 PM IST | Last Updated Sep 2, 2024, 10:56 PM IST

ಬೆಂಗಳೂರು(ಸೆ.02) ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ದುಬಾರಿ. ಆದರೆ ಒಮ್ಮೆ ಹೂಡಿಕೆ ಮಾಡಿದರೆ ಬಳಿಕ ಸುಲಭ. ದುಬಾರಿ ಪೆಟ್ರೋಲ್ ಬೇಕಿಲ್ಲ. ಕಿಲೋಮೀಟರ್‌ಗೆ 30 ಪೈಸೆ, 50 ಪೈಸೆ ಖರ್ಚು. ಸ್ಕೂಟರ್ ನಿರ್ವಹಣೆ ವೆಚ್ಚ ಕಡಿಮೆ. ಪರಿಸರಕ್ಕೂ ಪೂರಕ, ವಾಯು ಮಾಲಿನ್ಯವಿಲ್ಲ, ಶಬ್ದದ ಕಿರಿಕಿ ಇಲ್ಲ. ಈ ಎಲ್ಲಾ ಲೆಕ್ಕಾಚಾರದೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ನಟ ಶಂಕರ್ ಅಶ್ವತ್ಥ್ ಇದೀಗ ಇವಿ ಸಹವಾಸೇ ಸಾಕು ಅಂತಿದ್ದಾರೆ.ಎಲೆಕ್ಟ್ರಿಕ್ ಸ್ಕೂಟರ್ ಗ್ರಹಚಾರ ಕೆಟ್ರೆ ಎಲೆಕ್ಟ್ರಿಕ್ ಶಾಕ್ ಹೊಡೆಯುತ್ತೆ ಎಂದು ಶಂಕರ್ ಹೇಳಿದ್ದಾರೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಕೆಟ್ಟರೆ  ಸಂಕಷ್ಟ ಒಂದೆರೆಡಲ್ಲ. ಸ್ಕೂಟರ್ ಕೆಡುವ ಜೊತೆಗೆ ನಮ್ಮ ತಲೆಯನ್ನೂ ಕೆಡಿಸುತ್ತೆ ಎಂದು ಶಂಕರ್ ಅಶ್ವತ್ಥ್ ಹೇಳಿದ್ದಾರೆ. ಈ ಕುರಿತ ಒಂದು ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗ ತಾನೆ ಬದ್ದ ಸುದ್ದಿ ಎಂದು ಈ ಘಟನೆಯನ್ನು ಶಂಕರ್ ವಿವರಿಸಿದ್ದಾರೆ. 

ಪಿಜಿ ಮಕ್ಕಳ ಸಮ್ಮುಖದಲ್ಲಿ ಶಂಕರ್ ಅಶ್ವತ್ಛ್ ಭರತನಾಟ್ಯ; ತಾಯಿಯ ಕಣ್ಣಲ್ಲಿ ಸಂತೋಷದ ಹೊನಲು

ಅಶ್ವತ್ ಬೆಂಗಳೂರಿಗೆ ಶೂಟಿಂಗ್ ಕಾರಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಮೈಸೂರಿನಲ್ಲಿರುವ ಶಂಕರ್ ಅಶ್ವತ್ಥ್ ಪತ್ನಿ ಕರೆ ಮಾಡಿ ಎಲೆಕ್ಟ್ರಿಕ್ ಸ್ಕೂಟರ್‌ನಿಂದ ಆಗಿರುವ ಅವಾಂತರ ಹೇಳಿದ್ದಾರೆ. ನಾವು ಒಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದೇವೆ. ಆದರೆ ಈ ಸ್ಕೂಟರ್ ಕೆಟ್ಟು ಒಂದು ವಾರ ಆಗಿದೆ. ಗಾಡಿ ಚೆನ್ನಾಗಿದೆ. ಓಡಾಡುತ್ತಿದ್ದರೆ ಚೆನ್ನಾಗಿರುತ್ತದೆ. ಆದರೆ ಒಂದು ವೇಳೆ ಕೆಟ್ಟು ಹೋಯಿತು ಅಂದರೆ, ಸ್ಕೂಟರ್ ಕೆಡುವುದರ ಜೊತೆಗೆ ನಮ್ಮ ತಲೆಯನ್ನು ಕೆಡಿಸುತ್ತದೆ ಎಂದು ಶಂಕರ್ ಹೇಳಿದ್ದಾರೆ.

 

 

ಕಾರಣ ಏನು ಅಂದರೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸರ್ವೀಸ್ ಕೇಂದ್ರಗಳು ಬಹಳ ಹೋಪ್ಲೆಸ್. ಸರ್ವೀಸ್ ಕೂಡ ಚೆನ್ನಾಗಿಲ್ಲ. ಒಂದು ಬಾರಿ ಸರ್ವೀಸ್‌ಗೆ ಕೊಟ್ಟರೆ 10 ರಿಂದ 15 ದಿನ ಕನಿಷ್ಠ ತೆಗೆದುಕೊಳ್ಳುತ್ತಾರೆ. ಸರ್ವೀಸ್ ಸೆಂಟರ್‌ಗಳು ಕಡಿಮೆ, ಹೀಗಾಗಿ ಸರ್ವೀಸ್‌ಗೆ ಹೆಚ್ಚಿನ ಸ್ಕೂಟರ್‌ಗಳು ಇರುತ್ತದೆ. ಇನ್ನು ಸರ್ವೀಸ್ ಏನೂ ಚೆನ್ನಾಗಿಲ್ಲ. ಈ ಮಧ್ಯದಲ್ಲಿ ಗಾಡಿ ಕೆಟ್ಟು ಹೋದರೆ ನಾವು ಗಾಡಿಯನ್ನು ತಳ್ಳಿಕೊಂಡು ಹತ್ತಿರದ ಸರ್ವೀಸ್ ಕೇಂದ್ರಕ್ಕೆ ಹೋಗುವಂತಿಲ್ಲ. ಈ ಸ್ಕೂಟರ್ ಟೋ ಮಾಡಲು ಅವರೇ ಒಂದು ವಾಹನ ಕಳುಹಿಸುತ್ತಾರೆ. ಆಟೋ, ಸಣ್ಣ ಟ್ರಕ್ ಅದರಲ್ಲೇ ಈ ಸ್ಕೂಟರ್‌ನ್ನು ಸರ್ವೀಸ್ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು.ಇದಕ್ಕೆ 2,500 ರೂಪಾಯಿ ಚಾರ್ಜ್ ಮಾಡುತ್ತಾರೆ.

ಇವೆಲ್ಲಾ ನೋಡಿದರೆ ಈ ಪೆಟ್ರೋಲ್ ಗಾಡಿಗಳು ಇದೆಯಲ್ಲ ಅವೇ ಎಷ್ಟೋ ವಾಸಿ. ಶೇವಿಂಗ್ ಸೆಟ್ ಐದು ಬ್ಲೇಡ್, 6 ಬ್ಲೇಡ್ ಎಂದು ಜಾಹೀರಾತು ಕೊಡುತ್ತಾರಲ್ಲ, ಅವೆಲ್ಲಾ ನೋಡಲು ಮಾತ್ರ ಚಂದ. ಆ ಸಮಯಕ್ಕೆ ಎರಡು, ಎರಡೂವರೆ ಲಕ್ಷ ರೂಪಾಯಿ ಸುರಿದು ನಾವು ಗಾಡಿ ತಗೋಂಡು, 25 ಪೈಸೆಗೆ, 50 ಪೈಸೆಗೆ ಒಂದು ಕಿಲೋಮೀಟರ್ ಓಡಿಸಬಹುದು ಎಂದು ಲೆಕ್ಕ ಹಾಕುತ್ತೇವೆ. ಆದರೆ ಹೋಗ್ತಾ ಹೋಗ್ತಾ ನಿಮ್ಮ ತಲೆ ಗ್ಯಾರೆಂಟಿ ಕೆಡುತ್ತೆ. ಇದೇ ಈ ಎಲೆಕ್ಟ್ರಿಕ್ ಸ್ಕೂಟರ್ ಎಂದು ಶಂಕರ್ ಅಶ್ವತ್ಥ್ ಹೇಳಿದ್ದಾರೆ.

ಸ್ವಾಮಿ!! ದುಡ್ದಿಲ್ಲ ಅಂದ್ರೆ ಜೀವನ ನಡೆಯಲ್ಲ; ನಾನು ಶ್ರೀಮಂತನಲ್ಲ ಎಂದ 'ರಾಮಚಾರಿ' ನಾರಾಯಣಾಚಾರ್!
 

Latest Videos
Follow Us:
Download App:
  • android
  • ios