'ಬ್ರಹ್ಮಚಾರಿ' ಚಿತ್ರದಲ್ಲಿ ನಟಿ ಅದಿತಿ ಪ್ರಭುದೇವ್‌ಗೆ ಜೋಡಿಯಾಗಿ ಕಾಣಿಸಿಕೊಂಡ ನಂತರ ಎಲ್ಲಿಯೂ ಕಾಣಿಸಿಕೊಳ್ಳದ ನೀನಾಸಂ ಸತೀಶ್‌ ದಿನೇ ದಿನೇ ವಿವಿಧ ಕಾರಣಗಳಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ಸಿಂಪಲ್‌ ಮತ್ತು ಹಂಬಲ್‌ ಅನ್ನೋ ಪದಕ್ಕೆ ಸೂಕ್ತವಾಗಿರೋ ನಾಯಕ ಅಂದ್ರೆ ಸತೀಶ್‌. ವಿಭಿನ್ನ ಪಾತ್ರಗಳ ಮೂಲಕ ತಮ್ಮ ಅಭಿನಯ ಛಾಪು ಮೂಡಿಸಿರುವ ಸತಿಶ್‌ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಲು ನಿರ್ಧರಿಸಿದ್ದಾರೆ. ಅದು ಗೋದ್ರಾ ಚಿತ್ರದ ಮೂಲಕ...

ಹುಟ್ಟು ದರಿದ್ರವಾಗಿದ್ರೂ ಸಾವು ಚರಿತ್ರೆಯಾಗ್ಬೇಕು': ಇದು ನೀನಾಸಂ ಸತೀಶ್‌ 'ಗೋದ್ರಾ' ಕಥೆ!

ಇತ್ತೀಚಿಗೆ ಸತೀಶ್‌ ಇನ್‌ಸ್ಟಾಗ್ರಾಂನಲ್ಲಿ ಬಾಡಿ ಬ್ಯುಲ್ಡ್ ಮಾಡಿರುವ ಫೋಟೋ ಶೇರ್‌ ಮಾಡಿಕೊಂಡಿದ್ದು. ನ್ಯೂ ಲುಕ್‌ಗೆ ಫಿದಾ ಆದ ನೆಟ್ಟಿಗರು ಫಿಟ್ನೆಸ್‌ ಸಲಹೆ ಕೇಳುತ್ತಿದ್ದಾರೆ. ಅಷ್ಟಕ್ಕೂ ಸತೀಶ್‌ ಏನ್‌ ಮಾಡಿದ್ರು ಈ ಫಿಟ್‌ ಬಾಡಿಗೆ? 

ಅಯೋಗ್ಯ ಚಿತ್ರದ ಸಾಹಸ ನಿರ್ದೇಶಕ ಶ್ಯಾಮ್‌ ತಯಾರಿಯಲ್ಲಿ ವರ್ಕೌಟ್‌ ಮಾಡುತ್ತಿದ್ದಾರೆ. ದಿನಕ್ಕೆ ಎರಡು ಬಾರಿ ಜಿಮ್‌ನಲ್ಲಿ ಕಾಲ ಕಳೆಯುವ ಸತೀಶ್‌ ಕನಿಷ್ಠ ಅಂದರೂ 5 ಕಿಲೋ ಮೀಟರ್‌ ಓಡುತ್ತಾರಂತೆ! ಜೊತೆಗೆ ಕಟ್ಟುನಿಟ್ಟಾಗಿ ಆಹಾರ ಸೇವಿಸುತ್ತಿದ್ದಾರಂತೆ. ನೋಡಬೇಕು ಈ ಚಿತ್ರ ಹೇಗಿರುತ್ತೆ ಅಂತ. 

 

 
 
 
 
 
 
 
 
 
 
 
 
 

ಆರಂಭ🏃🏃 🤺🤺

A post shared by Sathish Ninasam (@sathish_ninasam_official) on Mar 14, 2020 at 6:36am PDT