Asianet Suvarna News Asianet Suvarna News

10 ವರ್ಷದ ಹಿಂದೆ ಚಿತ್ರೀಕರಣ ಮಾಡಿದ್ದ ಸ್ಥಳದಲ್ಲಿ ನಿಂತು ಪೋಸ್‌ ಕೊಟ್ಟ ಸತೀಶ್!

ನಟ ನೀನಾಸಂ ಸತೀಶ್ ವೃತ್ತಿ ಜೀವನದಲ್ಲಿ ಬ್ರೇಕ್‌ ಕೊಟ್ಟಂತ ಸಿನಿಮಾ ಚಿತ್ರೀಕರಣ ಮಾಡಿದ್ದ ಸ್ಥಳದಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. 

Kannada actor Sathish Ninasam recalls 10 years back shooting with a picture vcs
Author
Bangalore, First Published May 25, 2021, 10:26 AM IST

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ನೀನಾಸಂ ಸತೀಶ್‌ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಆ್ಯಕ್ಟಿವ್. ಸಿನಿಮಾ ಹೊರತು ಪಡಿಸಿ, ಬೇರೇನೂ ವಿಷಯವನ್ನು ಸಾಮಾನ್ಯವಾಗಿ ಹಂಚಿಕೊಳ್ಳುವುದಿಲ್ಲ, ಆದರೆ ಹಂಚಿಕೊಳ್ಳುವ ಪ್ರತಿ ವಿಚಾರದ ಹಿಂದೆಯೂ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇರುತ್ತದೆ.

ಇದ್ದಕ್ಕಿದ್ದಂತೆ ಬ್ಲ್ಯಾಕ್ ಕಾರು ಮುಂದೆ ಬ್ಲ್ಯಾಕ್ ಟೀ-ಶರ್ಟ್ ಧಿರಿಸಿ ನಿಂತಿರುವ ಫೋಟೋ ಹಂಚಿಕೊಂಡರು. ಕಾಮೆಂಟ್ ಮೂಲಕ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಂತೆ, ಅದೇ ರೀತಿಯ ಮತ್ತೊಂದು ಫೋಟೋ ಅಪ್ಲೋಡ್ ಮಾಡಿದ 10 ವರ್ಷದ ಹಿಂದೆ ಚಿತ್ರೀಕರಣ ನಡೆದ ಸಿನಿಮಾದ ಬಗ್ಗೆ ಬರೆದು ಕೊಂಡಿದ್ದಾರೆ. 

ದೊಡ್ಡಮ್ಮ ತೀರ್ಕೊಂಡ್ರು ಅವರ ಮುಖ ನೋಡೋಕೆ ಆಗಿಲ್ಲ; ಕೊರೋನಾ ಬಗ್ಗೆ ಸತೀಶ್ ಮಾತು! 

'10  ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಒಂದು ಸೀನ್ ಶೂಟ್ ಮಾಡಿದ್ವಿ. ಆ ಚಿತ್ರವನ್ನ ಹೆಗಲ ಮೇಲೆ ಹೊತ್ತು ನೀವು ಸಂಭ್ರಮಿಸಿದ ನೆನಪು ಇನ್ನೂ ಹಸಿರಾಗಿದೆ.ನೆನಪಿದೆಯೇ?' ಎಂದು ಕೇಳಿದ್ದಾರೆ. 'ಇದು ಲೂಸಿಯಾ ಸಿನಿಮಾ ಚಿತ್ರೀಕರಣ ಮಾಡಿದ ಸ್ಥಳ. ಇಲ್ಲಿ ಕಾರು ಪಂಚರ್ ಆದ ಸೀನ್  ಮಾಡಿದ್ರಿ, ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ಸದ್ಯ ಹರಿಪ್ರಿಯಾ ಜೊತೆ 'ಪೆಟ್ರೋಮ್ಯಾಕ್ಸ್' ಸಿನಿಮಾ ಚಿತ್ರೀಕರಣ ಮುಗಿಸಿರುವ ಸತೀಶ್ ಕೈಯಲ್ಲಿ 'ಮ್ಯಾಟ್ನಿ', 'ಗೋದ್ರಾ' ಮತ್ತು 'ದಸರಾ' ಸಿನಿಮಾಗಳಿವೆ.

 

Follow Us:
Download App:
  • android
  • ios