* ಅಪೊಲೋ ಆಸ್ಪತ್ರೆ ಬಳಿ ಮಾಜಿ ಶಾಸಕ ವೈ ಎಸ್ ವಿ ದತ್ತ ಹೇಳಿಕೆ* ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ವಿಜೇತ, ಪ್ರತಿಭಾವಂತ ಕಲಾವಿದ*  ನನ್ನ ಹಳ್ಳಿಯ ಹುಡುಗ, ನನ್ನ ಕಣ್ಣ ಮುಂದೆ ಬೆಳೆದ ಹುಡುಗ* ಅವರ ನಿಧನವನ್ನು ಅಧಿಕೃತವಾಗಿ ಘೋಷಣೆ ಮಾಡುವ ನೋವಿನ ಸಂದರ್ಭ 

ಬೆಂಗಳೂರು(ಜೂ. 14) ಅಪೊಲೋ ಆಸ್ಪತ್ರೆ ಬಳಿ ಮಾಜಿ ಶಾಸಕ ವೈ ಎಸ್ ವಿ ದತ್ತ ಮಾತನಾಡಿದ್ದಾರೆ. ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಪ್ರತಿಭಾವಂತ ಕಲಾವಿದ ಅವನು ಅಷ್ಟಿದ್ರು ನನ್ನ ಹಳ್ಳಿಯ ಹುಡುಗ. ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ರಾಷ್ಟ್ರ ಪ್ರಶಸ್ತಿ ಬಂದಾಗ ನಾವು ಪುಳಕಿತರಾಗಿದ್ದೆವು. ಅವರು ಈಗ ನಮ್ಮ ಜೊತೆಗಿಲ್ಲ ಎಂದಿದ್ದಾರೆ.

ಅಧಿಕೃತವಾಗಿ ಸಾವನ್ನು ಘೋಷಣೆ ಮಾಡಬೇಕಿದೆ. ಅಂಗಾಂಗ ದಾನ ಮಾಡಬೇಕಾಗಿದೆ. ಆರೋಗ್ಯವಾಗಿರುವ ಅಂಗಾಂಗ ದಾನ ಮಾಡಬೇಕು. ಇದನ್ನು ವೈದ್ಯರು ಪರೀಕ್ಷೆ ಮಾಡಬೇಕಾಗುತ್ತದೆ. ಇದು ಇವತ್ತು 11 ಗಂಟೆ ರಾತ್ರಿ ಆಗುತ್ತದೆ. ಅದು ಪೂರ್ಣ ಆದ ಮೇಲೆ ನಾಳೆ ಬೆಳಗ್ಗೆ ಪೋಸ್ಟ್ ಮಾರ್ಟಮ್ ಮಾಡಬೇಕು. ಎಲ್ಲಾ ಸಹೋದ್ಯೋಗಿಗಳು ಮಾತಾಡಿದ್ದಾರೆ.

ವಿಜಯ್ ಗೆ ಅಪಘಾತ ಹೇಗಾಯಿತು? 

ನಾಳೆ ಅಂತಿಮ ದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. 10 ರಿಂದ 12 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದರು. 

 ಅಪಘಾತದಿಂದ ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ನಟ ಸಂಚಾರಿ ವಿಜಯ್ ಪರಿಸ್ಥಿತಿ ಗಂಭೀರವಾಗಿದೆ ಎಂಬ ವಿಚಾರವನ್ನು ಡಿಸಿಎಂ ಅಶ್ವತ್ಥ ನಾರಾಯಣ ಸಹ ತಿಳಿಸಿದ್ದರು.