ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಾಹುಬಲಿ ಸಿನಿಮಾ ನಿರ್ದೇಶಕ ರಾಜಮೌಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವಾರ್ಥಿ ಎಂದು ನಿಂದಿಸಿದ್ದಾರೆ.

ಕೊರೋನಾದಿಂದ ಜನ ತತ್ತರಿಸುತ್ತಿರುವ ಸದಂರ್ಭದಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು ತಮ್ಮಿಂದಾಗುವ ಸಹಾಯ ಮಾಡಿ ಮಾನವೀಯೆ ಮೆರೆದಿದ್ದಾರೆ. ಇದೇ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ರಾಜಮೌಳಿ ವಿರುದ್ದ ಗರಂ ಆಗಿದ್ದಾರೆ.

ನಟ ಹುಚ್ಚ ವೆಂಕಟ್‌ಗೆ ಸಾರ್ವಜನಿಕರಿಂದ ಗೂಸಾ

ಬಾಹುಬಲಿ ನಿರ್ದೇಶಕನನ್ನ ಸ್ವಾರ್ಥಿ ಎಂದು ನಿಂದಿಸಿದ ರಾಜೇಂದ್ರ ಸಿಂಗ್ ಬಾಬು ಕರೋನಾ ಸಂಕಷ್ಟದಲ್ಲಿ ಕರ್ನಾಟಕಕ್ಕೆ  ರಾಜಮೌಳಿ ಏನು ಮಾಡಲಿಲ್ಲ ಎದು ಕಿಡಿ ಕಾರಿದ್ದಾರೆ.

ಆಂಧ್ರಪ್ರದೇಶ ಸಿಎಂ ವೈ ಎಸ್ ಜಗನ್ ಕುರಿತು ಪೋಸ್ಟ್ ಹಾಕಿದ್ದ ರಾಜಮೌಳಿ ವಿರುದ್ದ ಸಿಟ್ಟಾದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸಿನಿಮಾ ಬಿಡುಗಡೆ ಸಮಯದಲ್ಲಿ ಮಾತ್ರ ಮೌಳಿಗೆ ರಾಯಚೂರು , ಕರ್ನಾಟಕ ನೆನಪಾಗುತ್ತೆ. ಆಗ ಬಂದು ತೆಲುಗು ಮಿಶ್ರಿತ ಕನ್ನಡದಲ್ಲಿ ಭಾಷಣ ಮಾಡ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ರಾಜ ನನ್ನ ರಾಜ ಹಾಗೂ ಮಯೂರ ಸಿನಿಮಾ ಕಥೆ ಕದ್ದು ಸಿನಿಮಾ ಮಾಡಿದ್ದಾರೆ. ನಮ್ಮ ಕಾಂದಂಬರಿ ಆಧಾರಿತ ಸಿನಿಮಾ ಮಾಡಿ ಪ್ರಚಾರ ಗಿಟ್ಟಿಸುತ್ತಾರೆ. ಕರ್ನಾಟಕದಲ್ಲಿ ನೆಡೆದ ಸಿನಿಮಾ ಸೆಮಿನಾರ್ ನಲ್ಲಿ ಭಾಗಿ ಆಗಿ ಎಂದಿದಕ್ಕೆ ರಿಪ್ಲೇ ಮಾಡಲಿಲ್ಲ. ನಮ್ಮ ವಿನಂತಿಯನ್ನು ನಿರ್ದೇಶಕರಾದ ಮಣಿರತ್ನಂ, ಸಾಂಜಯಲೀಲಾ ಬನ್ಸಾಲಿ, ಪ್ರಕಾಶ್ ಮೆಹ್ರಾ ಸ್ವೀಕರಿಸಿದ್ರು ಎಂದು ನೆನಪಿಸಿದ್ದಾರೆ. 

ಚಲನಚಿತ್ರ ಭ್ರಾತೃತ್ವ ಮತ್ತು ನಾಟಕ ಮಾಲೀಕರನ್ನು ಹೊಡೆದ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಉದ್ಯಮಕ್ಕೆ ಭರವಸೆ ನೀಡಿದ ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಗರು ಅವರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳು. ಚಿತ್ರಮಂದಿರಗಳಲ್ಲಿ ಕನಿಷ್ಠ ಸ್ಥಿರ ವಿದ್ಯುತ್ ಶುಲ್ಕವನ್ನು ಮನ್ನಾ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಎಂದು ರಾಜಮೌಳಿ ಪೋಸ್ಟ್ ಮಾಡಿದ್ದರು.