ಸೆ.10ರಂದು ರಮೇಶ್ ಅರವಿಂದ್ ಅವರ ಹುಟ್ಟುಹಬ್ಬವಿತ್ತು. ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟನ ಹೊಸ ಚಿತ್ರ ಶಿವಾಜಿ ಸುರತ್ಕಲ್ ಚಿತ್ರದ ಟೀಸರ್ ಸಹ ಅಂದೇ ರಿಲೀಸ್ ಆಗಿದೆ. ಇದಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಹೊಸ ತರದ ಚಿತ್ರದ ಟೀಸರ್‌ಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹುಟ್ಟಿಸುವ ಟೀಸರ್‌ ಸಿನಿಪ್ರೇಮಿಗಳ ಗಮನ ಸೆಳೆದಿದೆ. ಮಂಗಳವಾರ (ಸೆಪ್ಟೆಂಬರ್‌ 10) ರಮೇಶ್‌ ಅರವಿಂದ್‌ ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಹುಟ್ಟುಹಬ್ಬದ ಕೊಡುಗೆಯಾಗಿ ‘ಶಿವಾಜಿ ಸುರತ್ಕಲ್‌’ ಚಿತ್ರ ತಂಡ ಟೀಸರ್‌ ಲಾಂಚ್‌ ಮಾಡಿದೆ. ಇದು ರಮೇಶ್‌ ಅರವಿಂದ್‌ ಅವರ 101ನೇ ಚಿತ್ರ.

ಮೇಶ್‌ ಅರವಿಂದ್‌ ಇಲ್ಲಿ ಓರ್ವ ಪತ್ತೇದಾರಿ. ಹೆಸರು ಶಿವಾಜಿ ಸುರತ್ಕಲ್‌. ಆತನ ಪತ್ತೇದಾರಿಕೆಯೇ ವಿಶೇಷವಂತೆ. ಶೆರ್ಲಾಕ್‌ ಹೋಮ್ಸ್‌ನ ಪತ್ತೇದಾರಿಕೆಯ ವೇಗ ಈ ಪಾತ್ರದಲ್ಲೂ ಇದೆಯಂತೆ. ಸದ್ಯಕ್ಕೆ ಆ ಪಾತ್ರದ ವಿಶಿಷ್ಟ್ಯವನ್ನು ತೋರಿಸುವ ಒಂದು ಝಲಕ್‌ ಈ ಟೀಸರ್‌ನಲ್ಲಿದೆ. ಲಾಂಚ್‌ ಆದ ಕೆಲವೇ ಗಂಟೆಗಳಲ್ಲಿ ಸೋಷಲ್‌ ಮೀಡಿಯಾದಲ್ಲಿ ಇದು ವೈರಲ್‌ ಆಗಿದೆ.

ಶಿವಾಜಿ ಸುರತ್ಕಲ್ ಬಗ್ಗೆ ರಮೇಶ್ ಅರವಿಂದ್ ಹೇಳುವುದೇನು?

ಕತೆ ಮತ್ತು ಪಾತ್ರ ವಿಭಿನ್ನವಾಗಿರುವ ಶಿವಾಜಿ ಸರ್ಕಲ್ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹೊಸ ತೆರನಾದ ರಮೇಶ್‌ ಕಾಣಿಸಿಕೊಳ್ಳುವುದು ಗ್ಯಾರಂಟಿ, ಎಂದು ಅವರೇ ಹೇಳಿ ಕೊಂಡಿದ್ದಾರೆ. ಅದೆಂಥ ವಿಭನ್ನ ಪಾತ್ರ. ನೋಡಿ ಟೀಸರ್...