ಯಾಕೆಂದರೆ ಇದು ಚಿತ್ರತಂಡದಿಂದ ನಾಯಕಿಗೆ ಕೊಟ್ಟಿರುವ ಗಿಫ್ಟ್‌. ಮೇ 14 ನಟಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬದ ಸಂಭ್ರಮ. ಲಾಕ್‌ಡೌನ್‌ ಹೊತ್ತಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗದ ಚಿತ್ರತಂಡ, ನಾಯಕಿ ಪಾತ್ರದ ದೃಶ್ಯಗಳನ್ನು ಒಳಗೊಂಡು ಮೇಕಿಂಗ್‌ ವಿಡಿಯೋ ಬಿಡುಗಡೆ ಮಾಡುವ ಮೂಲಕ ವಿಶೇಷವಾಗಿ ತಮ್ಮ ಚಿತ್ರದ ನಟಿಗೆ ಶುಭ ಕೋರಲಾಗಿದೆ.

ನನ್ನ ಆಲೋಚನೆ, ಕೆಲಸವನ್ನು ನಿಲ್ಲಿಸಿಲ್ಲ: ರಕ್ಷಿತ್‌ ಶೆಟ್ಟಿ ಲಾಕ್‌ಡೌನ್‌ ಅನುಭವ ಕಥನ!

ತಮ್ಮ ಫೇಸ್‌ಬುಕ್‌ಪೇಜ್‌ನಲ್ಲಿ ರಕ್ಷಿತ್‌ ಶೆಟ್ಟಿಬಿಡುಗಡೆ ಮಾಡಿರುವ ಈ ವಿಡಿಯೋ ಸಾಕಷ್ಟುಮೆಚ್ಚುಗೆಗೆ ಪಾತ್ರವಾಗುತ್ತಿದೆ. ಕಿರಣ್‌ ರಾಜ್‌ ಕೆ ನಿರ್ದೇಶನದ ಈ ಚಿತ್ರದಲ್ಲಿ ಸಂಗೀತ ಶೃಂಗೇರಿ ಅವರದ್ದು ದೇವಿಕಾ ಹೆಸರಿನ ಪಾತ್ರ. ಕಾಲೇಜು, ಸ್ಕೂಲ್‌, ಉದ್ಯೋಗಿ ಹೀಗೆ ವಿವಿಧ ರೀತಿಯ ಶೇಡ್‌ಗಳಿರುವ ಪಾತ್ರದಲ್ಲಿ ಸಂಗೀತಾ ಶೃಂಗೇರಿ ಕಾಣಿಸಿಕೊಂಡಿದ್ದಾರೆಂಬ ಸೂಚನೆ ಕೊಡುವ ವಿಡಿಯೋ ಇದು. ರಕ್ಷಿತ್‌ ಶೆಟ್ಟಿ, ಚಾರ್ಲಿ, ನಾಯಕಿ ಹೀಗೆ ಮೂವರು ಈ ಮೇಕಿಂಗ್‌ ವಿಡಿಯೋದಲ್ಲಿ ಗಮನ ಸೆಳೆಯುತ್ತಿದ್ದಾರೆ.

ಫಸ್ಟ್‌ ಹಾಫ್‌ ರೆಡಿ ಇದೆ

ನಿರ್ದೇಶಕ ಕಿರಣ್‌ ರಾಜ್‌ ಕೆ ತಾವು ಅಂದುಕೊಂಡಂತೆ ಇಲ್ಲಿಯವರೆಗೂ ಚಿತ್ರೀಕರಣ ಮಾಡಿದ್ದಾರೆ. ಗುಜರಾತ್‌, ರಾಜಸ್ಥಾನ, ಪಂಜಾಬ್‌ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದು, ಲಾಕ್‌ಡೌನ್‌ ಆಗಿರುವ ಕಾರಣಕ್ಕೆ ಇನ್ನೂ 25 ರಿಂದ 30 ದಿನಗಳ ಶೂಟಿಂಗ್‌ ಬಾಕಿ ಉಳಿಸಿಕೊಂಡಿದ್ದಾರೆ. ಕೊಡೈಕೆನಾಲ್‌, ಶಿಮ್ಲಾ, ಹಿಮಾಚಲಪ್ರದೇಶ, ಕಾಶ್ಮಿರ ಮುಂತಾದ ಕಡೆ ಉಳಿದ ಚಿತ್ರೀಕರಣ ಮಾಡುವ ಪ್ಲಾನ್‌ ನಿರ್ದೇಶಕರದ್ದು.

 

ನಾವು ಈಗ ಮೊದಲ ಭಾಗದ ಚಿತ್ರೀಕರಣ ಮುಗಿಸಿದ್ದು, ಅದರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಕೂಡ ಮುಕ್ತಾಯ ಆಗಿವೆ. ಫಸ್ಟ್‌ ಹಾಫ್‌ ಸಿನಿಮಾ ಬಿಡುಗಡೆ ಮಾಡಬಹುದು ಆ ಮಟ್ಟಿಗೆ ರೆಡಿ ಇದೆ. ಒಬ್ಬ ನಿರ್ದೇಶಕನಾಗಿ ನಾನು ನಿರೀಕ್ಷೆ ಮಾಡಿದ್ದಕ್ಕಿಂತ ತುಂಬಾ ಚೆನ್ನಾಗಿ ಶೂಟಿಂಗ್‌ ಮಾಡಿದ್ದೇವೆ. ತೆರೆ ಮೇಲೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಹಿಂದೆ ರಕ್ಷಿತ್‌ ಶೆಟ್ಟಿಹುಟ್ಟುಹಬ್ಬಕ್ಕೂ ಹೀಗೆ ಮೇಕಿಂಗ್‌ ವಿಡಿಯೋ ಬಿಡುಗಡೆ ಮಾಡಿದ್ವಿ. ಈಗ ನಾಯಕಿ ಹುಟ್ಟು ಹಬ್ಬ. ಅವರಿಗೆ ಇದೊಂದು ಸಪ್ರೈರ್‍ಸ್‌ ಎನ್ನುವಂತೆ ಮೇಕಿಂಗ್‌ ವಿಡಿಯೋ ಬಿಡುಗಡೆ ಮಾಡಲಾಗಿದೆ. ಲಾಕ್‌ಡೌನ್‌ ಮುಗಿದ ಮೇಲೆಯೇ ನಮ್ಮ ಉಳಿದ ಚಿತ್ರೀಕರಣ ನಡೆಯಲಿದೆ ಎಂಬುದು ನಿರ್ದೇಶಕ ಕಿರಣ್‌ ರಾಜ್‌ ಮಾತು.