ಅಪ್ಪನ ಹಾಗೆ ಮಗಳು ಅದ್ಭುತ ಕಲಾವಿದೆ. ಫಹಾದ್ ಫಾಸಿಲ್ ಜೊತೆ ರಾಜೇಶ್ ನಟರಂಗ ಪುತ್ರಿ ಧ್ವನಿ ನಟಿಸಿದ್ದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ಯಾರಿಗೆ ತಾನೆ ಗೊತ್ತಿಲ್ಲ. ಅನೇಕ ಸಿನಿಮಾಗಳಲ್ಲಿ ಮಿಂಚಿರುವ ರಾಜೇಶ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಅಮೃತಧಾರೆ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ರಾಜೇಶ್ ನಟರಂಗ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಅವರ ಮಗಳ ಬಗ್ಗೆ ಎಷ್ಟೊ ಜನಕ್ಕೆ ಗೊತ್ತಿಲ್ಲ. ರಾಜೇಶ್ ಅವರಿಗೆ ಒಬ್ಬಳು ಮಗಳಿದ್ದಾಳೆ, ಅವಳು ಕೂಡ ಅದ್ಭುತ ಕಲಾವಿದೆ. ಅಪ್ಪನ ಹಾಗೆ ಮಗಳು ಕೂಡ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಕನ್ನಡ ಸಿನಿಮಾವಲ್ಲ, ಮಲಯಾಳಂ ಚಿತ್ರದಲ್ಲಿ. ರಾಜೇಶ್ ನಟರಂಗ ಪುತ್ರಿ ಧ್ವನಿ ರಾಜೇಶ್ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಜೊತೆ ಫಹಾದ್ ಸಿನಿಮಾ; ಪುನೀತ್ ಮಾಡಬೇಕಿದ್ದ ದ್ವಿತ್ವಗೆ ಹೀರೋ ಆಗ್ತಾರಾ ಮಲಯಾಳಂ ಸ್ಟಾರ್?

ಫಹಾದ್ ಫಾಸಿಲ್ ನಟನೆಯ 'ಪಚುವುಂ ಅದ್ಭುತ ವಿಳಕ್ಕುಂ' ಸಿನಿಮಾದಲ್ಲಿ ಧ್ವನಿ ರಾಜೇಶ್ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಧ್ವನಿ ಮಿಂಚಿದ್ದಾರೆ. ನಿಧಿ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಅಭಿಮಾನಿಗಲ ಹೃದಯ ಗೆದ್ದಿದ್ದಾರೆ. ಈಗಾಗಲೇ ಈ ಸಿನಿಮಾ ರಿಲೀಸ್ ಆಗಿದ್ದು ಮಲಯಾಳಂ ಪ್ರೇಕ್ಷಕರು ಮಾತ್ರವಲ್ಲದೇ ಬೇರ ಬೇರೆ ಭಾಷೆಯ ಪ್ರೇಕ್ಷಕರ ಮನಗೆದ್ದಿದೆ. ಅದರಲ್ಲೂ ನಿಧಿ ಪಾತ್ರಕ್ಕೆ ಮೆಚ್ಚುಗೆಗೆ ವ್ಯಕ್ತವಾಗುತ್ತಿದೆ. ಮಲಯಾಳಂ ಗೊತ್ತಿಲ್ಲದಿದ್ದರೂ ನಿಧಿ ಪಾತ್ರಕ್ಕೆ ಜೀವ ತುಂಬಿದ್ದಾರೆ ಧ್ವನಿ. 

ಹೊಂಬಾಳೆಯ ಮತ್ತೊಂದು ಸಿನಿಮಾದಲ್ಲಿ ಫಹಾದ್; ಸಿಬಿಐ ಅಧಿಕಾರಿಯಾಗಿ ಕನ್ನಡಿಗರ ಮುಂದೆ 'ಪುಷ್ಪ' ಸ್ಟಾರ್

ಅಂದಹಾಗೆ ಧ್ವನಿ ಈಗಾಗಲೇ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಇರಾನಿ ನಿರ್ದೇಶಕ ಮಜೀದ್‌ ಮಜೀದಿ ಅವರ ‘ಬಿಯಾಂಡ್‌ ದಿ ಕ್ಲೌಡ್‌’ ಎಂಬ ಸಿನಿಮಾದಲ್ಲಿಯೂ ನಟಿಸಿದ್ದರು. ಬಾಲನಟಿಯಾಗಿ ಧ್ವನಿ ಎಲ್ಲ ಗಮನ ಸೆಳೆದಿದ್ದರು. ಇದೀಗ ಈಗ ಫಹಾದ್‌ ಫಾಸಿಲ್‌ ಜೊತೆ ಪಾಚುವುಂ ಅದ್ಭುತ ವಿಲಕ್ಕುಂ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಧ್ವನಿ ಜಾಹೀರಾತಿನ ಮೂಲಕ ಖ್ಯಾತಿ ಗಳಿಸಿದ್ದರು. ಹಾರ್ಲಿಕ್ಸ್ ಜಾಹೀರಾತಿನಲ್ಲಿ ನಟಿಸಿದ್ದರು. ಹಾಗೆ ಪರಿಚಯವಾದ ಧ್ವನಿ ಇದೀಗ ಮಲಯಾಳಂ ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ. 

ಧ್ವನಿ ಹೇಳಿದ್ದೇನು?

ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದ ಬಗ್ಗೆ ನಟಿ ಧ್ವನಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿ ಸತಂಸ ಹಂಚಿಕೊಂಡಿದ್ದರು. 'ಚಿಕ್ಕ ವಯಸ್ಸಿನಲ್ಲೇ ಫಹದ್ ಅವರಂತ ಅವರಂತಹ ನುರಿತ ನಟನೊಂದಿಗೆ ನಾನು ಕೆಲಸ ಮಾಡಿದ್ದು ನನಗೆ ಖುಷಿಯಾಗಿದೆ. ಅವರು ನಟನಾ ಸಂಸ್ಥೆ. ಅವರ ಡೈಲಾಗ್ ಡೆಲಿವರಿಯಾಗಿರಲಿ ಅಥವಾ ಅವರ ಮ್ಯಾನರಿಸಂ ಅವರನ್ನು ಅಸಾಧಾರಣ ನಟರನ್ನಾಗಿ ಮಾಡುತ್ತದೆ' ಎಂದು ಹೇಳಿದ್ದಾರೆ.