ಹೊಂಬಾಳೆ ಫಿಲ್ಮ್ಸ್ ಜೊತೆ ಫಹಾದ್ ಸಿನಿಮಾ; ಪುನೀತ್ ಮಾಡಬೇಕಿದ್ದ ದ್ವಿತ್ವಗೆ ಹೀರೋ ಆಗ್ತಾರಾ ಮಲಯಾಳಂ ಸ್ಟಾರ್?

ಹೊಂಬಾಳೆ ಫಿಲ್ಮ್ಸ್ ಫಹಾದ್ ಫಾಸಿಲ್ ಅವರಿಗೆ ಜನ್ಮದಿನಕ್ಕೆ ವಿಶ್ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಫಹಾದ್ ಫೋಟೋ ಶೇರ್ ಮಾಡಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಸಾಮಾನ್ಯವಾಗಿ ಹೊಂಬಾಳೆ ಫಿಲ್ಮ್ಸ್ ಬೇರೆ ಭಾಷೆಯ ಕಲಾವಿದರೆ ವಿಶ್ ಮಾಡಲ್ಲ. ಹುಟ್ಟುಬ್ಬಕ್ಕೆ ವಿಶ್ ಮಾಡಿದ್ದಾರೆ ಅಂದರೆ ಪಕ್ಕ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಗೊತ್ತಾಗಿದೆ. ಹಾಗಾಗಿ ಇದೀಗ ಫಹಾದ್‌ಗೆ ವಿಶ್ ಮಾಡುತ್ತಿದ್ದಂತೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ನಟನೆಯರಾಜನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ. 

kannada hombale films birthday wish to malayalam actor Fahadh Faasil sgk

ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಅವರಿಗೆ ಇಂದು (ಆಗಸ್ಟ್ 9) ಹುಟ್ಟುಹಬ್ಬದ ಸಂಭ್ರಮ. ಪತ್ನಿ, ನಟಿ ನಜ್ರಿಯಾ ಜೊತೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಫಹಾದ್ ಅವರಿಗೆ ಅಭಿಮಾನಿಗಳು ಮತ್ತು ಸಿನಿ ಗಣ್ಯರು ವಿಶ್ ಮಾಡುತ್ತಿದ್ದಾರೆ. ಮಲಯಾಳಂ ಸ್ಟಾರ್ ಸದ್ಯ ಬೇರೆ ಬೇರೆ ಭಾಷೆಯಲ್ಲೂ ಮಿಂಚುತ್ತಿದ್ದಾರೆ.  ಈಗಾಗಲೇ ತೆಲುಗು ಮತ್ತು ತಮಿಳಿನಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಹೃದಯಗೆದ್ದಿರುವ ಫಹಾದ್ ಇದೀಗ ಕನ್ನಡದಲ್ಲಿ ಮಿಂಚಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಅದೂ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಜೊತೆ. ಈ ಸುದ್ದಿ ವೈರಲ್ ಆಗಲು ಕಾರಣ ಇಂದು ಹೊಂಬಾಳೆ ಫಿಲ್ಮ್ಸ ಫಹಾದ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವುದು. 

ಹೌದು, ಹೊಂಬಾಳೆ ಫಿಲ್ಮ್ಸ್ ಫಹಾದ್ ಫಾಸಿಲ್ ಅವರಿಗೆ ಜನ್ಮದಿನಕ್ಕೆ ವಿಶ್ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಫಹಾದ್ ಫೋಟೋ ಶೇರ್ ಮಾಡಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಸಾಮಾನ್ಯವಾಗಿ ಹೊಂಬಾಳೆ ಫಿಲ್ಮ್ಸ್ ಬೇರೆ ಭಾಷೆಯ ಕಲಾವಿದರೆ ವಿಶ್ ಮಾಡಲ್ಲ. ಹುಟ್ಟುಬ್ಬಕ್ಕೆ ವಿಶ್ ಮಾಡಿದ್ದಾರೆ ಅಂದರೆ ಪಕ್ಕ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಗೊತ್ತಾಗಿದೆ. ಹಾಗಾಗಿ ಇದೀಗ ಫಹಾದ್‌ಗೆ ವಿಶ್ ಮಾಡುತ್ತಿದ್ದಂತೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ನಟನೆಯರಾಜನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ. 

ಫಹಾದ್ ಅವರಿಗೆ ಹೊಂಬಾಳೆ ಫಿಲ್ಮ್ ವಿಶ್ ಮಾಡುತ್ತಿದ್ದಂತೆ ಅಭಿಮಾನಿಗಳು ಯಾವ ಸಿನಿಮಾ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಪವನ್ ಕುಮಾರ್ ನಿರ್ದೇಶನದ ದ್ವಿತ್ವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡಬೇಕಿದ್ದ ದ್ವಿತ್ವ ಸಿನಿಮಾದಲ್ಲಿ ಫಹಾದ್ ಫಾಸಿಲ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ವಿಭಿನ್ನವಾಗಿರುವ ದ್ವಿತ್ವ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡಬೇಕಿತ್ತು. ಆದರೆ ಅದಕ್ಕೂ ಮೊದಲೇ ಅಪ್ಪು ಬಾರದ ಲೋಕಕ್ಕೆ ಹೊರಟು ಹೋದರು. ಅಪ್ಪು ಮಾಡಬೇಕಿದ್ದ ಸಿನಿಮಾಗೆ ಮತ್ತೋರ್ವ ಖ್ಯಾತ ನಟನ ಹುಡುಕಾಟದಲ್ಲಿತ್ತು ಹೊಂಬಾಳೆ.  ಇದೀಗ ಫಹಾದ್ ಎಂಟ್ರಿ ಕೊಟ್ಟಿದ್ದು ದ್ವಿತ್ವದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಕ್ಕೆ ಎಂಟ್ರು ಕೊಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಹೊಂಬಾಳೆ ಫಿಲ್ಮ್ಸ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

ಹೊಂಬಾಳೆ ಜೊತೆ ಮಾನುಷಿ ಚಿಲ್ಲರ್ ಸಿನಿಮಾ; ಪೃಥ್ವಿರಾಜ್‌ಗೆ ಜೋಡಿಯಾಗ್ತಾರಾ ವಿಶ್ವ ಸುಂದರಿ?

ಅಂದಹಾಗೆ ಹೊಂಬಾಳೆ ಫಿಲ್ಮ್ಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದೆ. KGF 2 ಸಿನಿಮಾ ಬಳಿಕ ಹೊಂಬಾಳೆಯಿಂದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಕೆಜಿಎಫ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದು ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿದೆ. ಈ ಸಿನಿಮಾ ಬಳಿಕ ಹೊಂಬಾಳೆ ಫಿಲ್ಮ್ಸ್ ಮಾಡುವ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ಹೊಂಬಾಳೆ ಬಳಿ ಕಾಂತಾರಾ, ರಾಘವೇಂದ್ರ ಸ್ಟೋರ್ಸ್, ಸಲಾರ್, ಟೈಸನ್, ಬಘೀರ, ರಿಚರ್ಡ್ ಆಂಟನಿ ಸಿನಿಮಾಗಳಿವೆ. ಇತ್ತೀಚಿಗಷ್ಟೆ ಹೊಂಬಾಳೆ ಫಿಲ್ಮ್ಸ್ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಜೊತೆ ಸಿನಿಮಾ ಅನೌನ್ಸ್ ಮಾಡಿತ್ತು. ಪೃಥ್ವಿರಾಜ್ ಜೊತೆ ಹೊಂಬಾಳೆ ಫಿಲ್ಮ್ಸ್ ಟೈಸನ್ ಸಿನಿಮಾ ಮಾಡುತ್ತಿದೆ. ಇದೀಗ ಮತ್ತೋರ್ವ ಮಲಯಾಳಂ ಸ್ಟಾರ್ ಫಹಾದ್ ಜೊತೆ ಸಿನಿಮಾ ಮಾಡಲು ಮುಂದಾಗಿದೆ. 

'ಟೈಸನ್' ಆ್ಯಕ್ಷನ್ ಪ್ಯಾಕ್ಡ್ ಸೋಶಿಯೋ ಥ್ರಿಲ್ಲರ್ ಸಿನಿಮಾ: ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ನಟ ಪೃಥ್ವಿರಾಜ್

ಒಂದು ವೇಳೆ ಫಹಾದ್ ದ್ವಿತ್ವದಲ್ಲಿ ಕಾಣಿಸಿಕೊಳ್ಳುವುದು ನಿಜವೇ ಆಗಿದ್ದರೆ ಸದ್ಯದಲ್ಲೇ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡುವ ಸಾಧ್ಯತೆ ಇದೆ. ಅಭಿಮಾನಿಗಳು ಸಹ ಈ ಬಗ್ಗೆ ಕಾತರರಾಗಿದ್ದಾರೆ. ನಟಭಯಂಕರನನ್ನು ಕನ್ನಡದಲ್ಲೂ ನೋಡಲು ಕಾಯುತ್ತಿದ್ದಾರೆ. 

Latest Videos
Follow Us:
Download App:
  • android
  • ios