6 ತಿಂಗಳು ಮಗುವಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಪುನೀತ್ ರಾಜ್‌ಕುಮಾರ್‌ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಬಗ್ಗೆ ಅಭಿಮಾನಿಗಳು ಚಿತ್ರ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ ಇದು ಪವರ್‌ ಹುಟ್ಟುಹಬ್ಬಕ್ಕೆ ಗಿಫ್ಟ್‌ ಆಗಿ ನೀಡಲಿದ್ದಾರೆ.

ಅಭಿಮಾನಿ ದೇವರ ಚಿನ್ನದ ಗಿಫ್ಟ್ ತಿರಸ್ಕರಿಸಿದ ಪುನೀತ್!

ಹೌದು! ಯಂಗ್ ಫಿಲ್ಮ್‌ ಮೇಕರ್ಸ್‌ ತೇಜಸ್‌ ರಂಗನಾಥ್, ಮನೋಜ್‌ ಕುಮಾರ್‌, ವಿಶ್ವನಾಥ್‌ ಗೌಡ, ಶರತ್‌ ಕುಮಾರ್‌, ಪೃಥ್ವಿರಾಜ್‌, ತಿಲಕ್‌ ಗೌಡ, ಸಮಂಜು ಮಣಿ ಕೈ ಜೋಡಿಸಿ ಕಿರು ಚಿತ್ರವನ್ನು ತಯಾರಿ ಮಾಡುತ್ತಿದ್ದಾರೆ.

'ಪವರ್'ಫುಲ್ ಫ್ಯಾಕ್ ಬರೋಕೆ ಇದೇ ಕಾರಣ; ಪುನೀತ್ ವರ್ಕೌಟ್ ವಿಡಿಯೋ ವೈರಲ್!

ಪವರ್‌ ಜೀವನಚರಿತ್ರೆಗೆ 'ಅಜಾತಶತ್ರು' ಎಂದು ಶೀರ್ಷಿಕೆ ನೀಡಲಾಗಿದೆ. ಮಾರ್ಚ್‌ 17ರಂದು ಯೂಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಮಾಡಲಾಗುತ್ತದೆ. ಕಿರುಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಪುನೀತ್‌ ಸೋದರಳಿಯ ನಟ ರೇನ್‌ ಶುಭಕೋರಿದ್ದಾರೆ.