ಡಾ. ರಾಜ್‌ಕುಮಾರ್ ಕುಟುಂಬದ ಸರಳತೆಗೆ ಇದೊಂದು ಸಾಕ್ಷಿಯ ಘಟನೆ. ನೆಚ್ಚಿನ ನಟರನ್ನು ನೋಡಬೇಕು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಅಭಿಮಾನಿಗಳು ಊರಿಂದೂರಿಗೆ ಬರುತ್ತಾರೆ. ಅದರಲ್ಲೂ ಅಭಿಮಾನಿಗಳೇ ದೇವರು ಎಂದು ಪಾಲಿಸಿ ಪೂಜಿಸುವ ಅಪ್ಪಾಜಿ ಅವರ ಕುಟುಂಬ, ಮನೆ ಬಾಗಿಲಿಗೆ ಬರುವ ಅಭಿಮಾನಿಗಳಿಗೆ ಔತಣ ವ್ಯವಸ್ಥೆಯೂ ಮಾಡುತ್ತಾರೆ. ಡಾ.ರಾಜ್ ಅವರಂತೆಯೇ ಅವರ ಮಕ್ಕಳೂ ಅಭಿಮಾನಿಗಳನ್ನು ದೇವರೆಂದು ಕಾಣುತ್ತಾರೆ.

ಪವರ್ ಸ್ಟಾರ್ ಹೆಗಲಿಗೆ ಹೊಸ ಹೊಣೆ, ಬಿಎಂಟಿಸಿಗೆ ಪುನೀತ್ 'ರಾಜ'

ಇತ್ತೀಚಿಗೆ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಚಿನ್ನದ ಸರ ಹಾಗೂ ರಾಜ್‌ ಅವರ ಚಿನ್ನದ ಪೆಂಡೆಂಟ್‌ ಸರವನ್ನು ಪುನೀತ್‌ಗೆ ಉಡುಗೊರೆಯಾಗಿ ನೀಡಲು ಆಗಮಿಸಿದ್ದರು. ಅವರಿಗೆ ನಿರಾಸೆ ಮಾಡಬಾರದು ಎಂದು ಪುನೀತ್ ಅದನ್ನು ಒಮ್ಮೆ ಧರಿಸಿ, ತಕ್ಷಣವೇ ತೆಗೆದು ಗಿಫ್ಟ್ ಕೊಟ್ಟ ಅಭಿಮಾನಿ ಕೊರಳಿಗೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

'ಪವರ್'ಫುಲ್ ಫ್ಯಾಕ್ ಬರೋಕೆ ಇದೇ ಕಾರಣ; ಪುನೀತ್ ವರ್ಕೌಟ್ ವಿಡಿಯೋ ವೈರಲ್!

ಕೆಲ ತಿಂಗಳ ಹಿಂದೆ ಹೀಗೆ ಒಬ್ಬ ಅಭಿಮಾನಿ ಪುನೀತ್ ಭೇಟಿ ಮಾಡಬೇಕೆಂದು, ದೂರದ ಊರಿನಿಂದ ಊಟದ ಸಮಯಕ್ಕೆ ನಿವಾಸ ತಲುಪುತ್ತಾರೆ. ಅವರನ್ನು ಮಾತನಾಡಿಸಿ ಯೋಗ ಕ್ಷೇಮ ವಿಚಾರಿಸಿಕೊಂಡ ಪುನೀತ್ ಪಕ್ಕದಲ್ಲಿದ್ದ ಹೊಟೇಲ್‌ನಲ್ಲಿ ಊಟದ ವ್ಯವಸ್ಥೆ ಮಾಡಿಸಿ, ತಪ್ಪದೆ ಊಟ ಮಾಡಿಕೊಂಡು ಹೋಗುವಂತೆ ಮನವಿ ಮಾಡಿಕೊಳ್ಳುತ್ತಾರೆ. ಈ ವಿಡಿಯೋವನ್ನು ಅಭಿಮಾನಿಯೊಬ್ಬ ಫ್ಯಾನ್‌ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

"

ಅಭಿಮಾನಿಗಳನ್ನು ದೇವರೆಂದೇ ಸಂಭೋದಿಸುತ್ತಿದ್ದ ಡಾ.ರಾಜ್ ವ್ಯಕ್ತಿತ್ವ ಎಲ್ಲರಿಗೂ ಮಾದರಿ. ಅಭಿಮಾನಿಗಳಿಗೆ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ನೀಡಿದ್ದ ಕರುನಾಡ ನಟ ಸಾರ್ವಭೌಮ ಅವರ ನಡೆ ನುಡಿ ಪ್ರತಿಯೊಬ್ಬ ಕಲಾವಿದರಿಗೂ ಮಾದರಿ. ತಂದೆಯಂತೆಯೇ ಮಕ್ಕಳೂ ಅಭಿಮಾನಿಗಳ ಪ್ರೀತಿಯನ್ನು ಗೌರವಿಸುತ್ತಾರೆ ಎಂಬುವುದು ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ಈ ನಡೆಯೇ ಹೇಳುತ್ತದೆ.