Asianet Suvarna News Asianet Suvarna News

ತುಂಬಾ ಬೇಜಾರು, ಸಂಕಟ ಆಗುತ್ತಿದೆ: ಕಣ್ಣೀರಾದ ರಚಿತಾ ರಾಮ್

ಕೈ ನಡುಗುತ್ತಿದೆ. ಮಾತು ಬರುತ್ತಿಲ್ಲ. ಗುರುಕಿರಣ್ ಬರ್ತ್‌ಡೇ ಪಾರ್ಟಿಯಲ್ಲಿ ಸಿಕ್ಕಿ, ಬಾಯ್ ಎಂದಿದ್ದೆ. ಹುಷಾರು ಎಂದಿದ್ದೆ, ಮೂರು ವರ್ಷ ಆದ ನಂತರ ನನಗೆ ಅವರು ಸಿಕ್ಕಿದ್ದರು ಎಂದು ನಟಿ ರಚಿತಾ ರಾಮ್ ಕಣ್ಣೀರು ಹಾಕಿದ್ದಾರೆ.

Kannada Actor Puneeth Rajkumar No More Actress Rachita Ram Condolences
Author
Bangalore, First Published Oct 30, 2021, 7:28 PM IST
  • Facebook
  • Twitter
  • Whatsapp

ಪುನೀತ್ ರಾಜ್ ಕುಮಾರ್ (Puneeth Rajkumar) ಜೊತೆ ಕಡೆಯದಾಗಿ ಭೇಟಿ ಮಾಡಿದಾಗ ಟೇಕ್ ಕೇರ್, ಬಾಯ್ ಅಂತಾ ನಾನು ಹೇಳಿದ್ದೆ. ಈಗ ಅವರು ಬಾರದ ಲೋಕಕ್ಕೇ ಹೋಗಿ ಬಿಟ್ಟಿದ್ದಾರೆ ಎನ್ನುತ್ತಾ ಅಳು ತಡೆಯದೆ ನಟಿ ರಚಿತಾ ರಾಮ್ (Rachita Ram) ಕಣ್ಣೀರು ಹಾಕಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್​​​ಕುಮಾರ್ ಪಾರ್ಥೀವ ಶರೀರದ ದರ್ಶನ ಮಾಡಿದ ನಂತರ ಮಾತನಾಡಿದ ಅವರು, ಕೈ ನಡುಗುತ್ತಿದೆ. ಮಾತು ಬರುತ್ತಿಲ್ಲ ಎಂದು ಬೇಸರಗೊಂಡರು. ಗುರುಕಿರಣ್ ಬರ್ತ್‌ಡೇ ಪಾರ್ಟಿಯಲ್ಲಿ ಸಿಕ್ಕಿ, ಬಾಯ್ ಎಂದಿದ್ದೆ. ಹುಷಾರು ಎಂದಿದ್ದೆ, ಮೂರು ವರ್ಷ ಆದ ನಂತರ ನನಗೆ ಅವರು ಸಿಕ್ಕಿದ್ದರು. ಮೊನ್ನೆ ರಾತ್ರಿ 11.45ಕ್ಕೆ ಅವರು ಮತ್ತು ಅಶ್ವಿನಿ ಲಿಫ್ಟ್‌ನಲ್ಲಿ ಹೋಗುವಾಗ ಟೇಕ್ ಕೇರ್ ಬಾಯ್ ಅಂತಾ ಹೇಳಿದ್ದೆ. 

ಆದರೆ, ಈಗ ಹೀಗಾಗಿದೆ ತುಂಬಾ ಬೇಜಾರು, ಸಂಕಟ ಆಗುತ್ತಿದೆ. ಹೇಳೋದಕ್ಕೆ ಆಗ್ತಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹಾಗೂ ನಾನು ಅಣ್ಣಾವ್ರ ಮಕ್ಕಳ ಜೊತೆ ಕೆಲಸ ಮಾಡಬೇಕು ಎಂದು ನಮ್ಮ ತಾಯಿಗೆ ಆಸೆ ಇತ್ತು. ಅದಕ್ಕೆ ಅವಕಾಶವನ್ನೂ ರಾಜ್ ಕುಟುಂಬ ಕಲ್ಪಿಸಿತ್ತು. ಹಾಗಾಗಿ, ದೇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದರು.

ಪುನೀತ್ ನಿಧನಕ್ಕೆ ಆನಂದ್ ಆಡಿಯೋ ಯೂಟ್ಯೂಬ್‌ ಚಾನೆಲ್‌ನಿಂದ ವಿಶೇಷ ಹಾಡು

ಪುನೀತ್ ರಾಜ್‌ ಕುಮಾರ್ ಅವರ ಅಕಾಲಿಕ ನಿಧನ ಎಲ್ಲರನ್ನೂ ಆಘಾತಕ್ಕೆ ದೂಡಿದೆ. ನಂಬಲಾಗದ ಸತ್ಯವನ್ನು ಅರಗಿಸಿಕೊಳ್ಳಲು ಚಿತ್ರರಂಗದವರು, ಅಭಿಮಾನಿಗಳು ಕಷ್ಟಪಡುತ್ತಿದ್ದಾರೆ. ಪುನೀತ್ ಅವರು ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಪುನೀತ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಸಹಸ್ರಾರು ಅಭಿಮಾನಿಗಳು ಅಗಲಿದ ಪುನೀತ್ ರಾಜ್ ಕುಮಾರ್ ಅವರ ದರ್ಶನ ಮಾಡುತ್ತಿದ್ದಾರೆ. 

ಪುನೀತ್‌ ರಾಜ್‌ಕುಮಾರ್‌ಗೆ ಭಾವುಕ ಪತ್ರ ಬರೆದ ಕಿಚ್ಚ ಸುದೀಪ್!

ನಾನಾ ಊರುಗಳಿಂದ ಬಂದು ಪ್ರೀತಿಯ ನಟ ಅಪ್ಪು ಅಗಲಿಕೆಯನ್ನು ನೋಡಿ ಕಣ್ಣೀರು ಸುರಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪುನೀತ್ ಅಗಲಿಕೆ ಬಗ್ಗೆ ನೋವನ್ನು ಹೊರಹಾಕುತ್ತಿದ್ದಾರೆ. ಮತ್ತು ಪುನೀತ್​ ರಾಜ್​ಕುಮಾರ್ ಅಂತ್ಯ ಸಂಸ್ಕಾರ ಭಾನುವಾರ  ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಕೆ ಮಾಡಲಾಗುವುದು.

"

Follow Us:
Download App:
  • android
  • ios