Asianet Suvarna News Asianet Suvarna News

ವಿದೇಶಗಳಿಂದ ಅತ್ಯಾಧುನಿಕ ಕ್ಯಾಮರಾ ತರಿಸಿದ್ದ ಪುನೀತ್ ರಾಜ್‌ಕುಮಾರ್

ಪುನೀತ್ ತರಿಸಿದ್ದ ಕ್ಯಾಮರಾಗಳು ಆ ಕಾಲಕ್ಕೆ ಅತ್ಯುತ್ಕೃಷ್ಟ ಮಟ್ಟದ ಕ್ಯಾಮರಾಗಳೇ ಆಗಿದ್ದವು. ಆ ಹೊತ್ತಿಗೆ ಅಷ್ಟು ಸುಧಾರಿತ ಕ್ಯಾಮರಾಗಳು ಭಾರತಕ್ಕೇ ಬಂದಿರಲಿಲ್ಲ. ಹೀಗೆ ತಂತ್ರಜ್ಞಾನದಲ್ಲಿ ಯಾವತ್ತೂ ಒಂದು ಹೆಜ್ಜೆ ಮುಂದಿದ್ದರು.

Kannada Actor Puneet Rajkumar brought sophisticated camera abroad
Author
Bangalore, First Published Oct 30, 2021, 2:36 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ನ (Sandalwood) ಪವರ್‌ಸ್ಟಾರ್ ನಟ ಪುನೀತ್ ರಾಜ್‌ ಕುಮಾರ್ (Puneeth Rajkumar) ಹೃದಯಾಘಾತದಿಂದ ( Heart attack) ನಿನ್ನೆ ನಿಧನರಾಗಿದ್ದಾರೆ. ನಟ ಪುನೀತ್ ರಾಜ್ ಕುಮಾರ್‌ಗೆ ಹೃದಯಾಘಾತ ಸಂಭವಿಸಿ, ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ (Vikram Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಪುನೀತ್ ಅವರು ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

"

ಇನ್ನು ಪುನೀತ್ ಆಗಷ್ಟೇ 2 ಸಿನಿಮಾಗಳಲ್ಲಿ ನಟಿಸಿದ್ದರು. ಎರಡೂ ಗೆದ್ದಿದ್ದವು. ಆ ಹೊತ್ತಲ್ಲಿ ಅವರನ್ನು ಸಂದರ್ಶಿಸಲು ಹೋದ ಪತ್ರಕರ್ತರಿಗೆ ಆಶ್ಚರ್ಯ ಕಾದಿತ್ತು. ಪುನೀತ್ ಸುತ್ತಲೂ ಒಂದಷ್ಟು ಕ್ಯಾಮರಾಗಳಿದ್ದವು. ಪುನೀತ್ ಆ ಕ್ಯಾಮರಾಗಳನ್ನೆಲ್ಲ ವಿದೇಶದಿಂದ ತರಿಸಿದ್ದರು. ತಮ್ಮ ಮುಂದಿನ ಸಿನಿಮಾಗಳಲ್ಲಿ ಅವನ್ನೆಲ್ಲ ಬಳಸುವುದಾಗಿ ಹೇಳಿದ್ದರು. ಹಾಗೆಯೇ ಚಿತ್ರೀಕರಣ, ಸಂಕಲನ, ಧ್ವನಿಗ್ರಹಣಗಳ ಕುರಿತು ಸುದೀರ್ಘವಾಗಿ ಮಾತಾಡಿದ್ದರು. 

"

ಪುನೀತ್ ತರಿಸಿದ್ದ ಕ್ಯಾಮರಾಗಳು ಆ ಕಾಲಕ್ಕೆ ಅತ್ಯುತ್ಕೃಷ್ಟ ಮಟ್ಟದ ಕ್ಯಾಮರಾಗಳೇ ಆಗಿದ್ದವು. ಆ ಹೊತ್ತಿಗೆ ಅಷ್ಟು ಸುಧಾರಿತ ಕ್ಯಾಮರಾಗಳು ಭಾರತಕ್ಕೇ ಬಂದಿರಲಿಲ್ಲ. ಹೀಗೆ ತಂತ್ರಜ್ಞಾನದಲ್ಲಿ ಯಾವತ್ತೂ ಒಂದು ಹೆಜ್ಜೆ ಮುಂದಿದ್ದ ಪುನೀತ್, ಕತೆ ಯಾವುದೇ ಇರಲಿ, ಚಿತ್ರಕತೆ ಏನೇ ಇರಲಿ, ಅದು ಕಲಾತ್ಮಕ ಸಿನಿಮಾ ಆದರೂ ಸರಿಯೇ, ತಾಂತ್ರಿಕವಾಗಿ ಮುಂದೆ ಇರಬೇಕು ಎನ್ನುತ್ತಿದ್ದರು. ಧನುಷ್ ನಿರ್ಮಾಣದ 'ಕಾಕ ಮೊಟ್ಟೈ' ಚಿತ್ರವನ್ನು ನೋಡಿ ಬಹಳ ಮೆಚ್ಚಿಕೊಂಡಿದ್ದರು.

ದೆಹಲಿಗೆ ಆಗಮಿಸಿದ Puneeth Rajkumar ದೊಡ್ಡ ಮಗಳು ದೃತಿ!

ಅಂಥದ್ದೊಂದು ಕಲಾತ್ಮಕ ಎನ್ನಬಹುದಾದ  ಚಿತ್ರವನ್ನು ನಿರ್ಮಾಣ ಮಾಡುವಾಗಲೂ ನಿರ್ದೇ ಶಕ ತೆಗೆದುಕೊಂಡ ಎಚ್ಚರ, ತಾಂತ್ರಿಕವಾಗಿ ಅದನ್ನು ಕಟ್ಟಿಕೊಟ್ಟ ರೀತಿಯನ್ನು ಕೊಂಡಾಡಿದ್ದರು. ಪುನೀತ್ ಅವರ ಪ್ರತಿಯೊಂದು ಸಿನಿಮಾಗಳು ಕೂಡ ತಾಂತ್ರಿಕವಾಗಿ ಬೇರೆಯೇ ಎತ್ತರದಲ್ಲಿ ಇರುತ್ತಿದ್ದವು. ಪ್ರತಿಬಾರಿ ವಿದೇಶಕ್ಕೆ ಭೇಟಿ ನೀಡಿದಾಗಲೂ ಅವರು ಹೊಸದಾಗಿ ಬಂದ ಕ್ಯಾಮರಾ, ಫೋನ್, ಡ್ರೋನ್ ಮುಂತಾದ ಆಧುನಿಕ ಚಿತ್ರೀಕರಣ ಘಟಕಗಳನ್ನು ಕೊಂಡುಕೊಳ್ಳು ತ್ತಿದ್ದರು. ತಾನೇ ಚಿತ್ರ ನಿರ್ದೇಶನ ಮಾಡುವ ಹೊತ್ತಿಗೆ ಅದೊಂದು ಅತ್ಯುತ್ತಮ ತಂತ್ರಜ್ಞಾನದ ಸಂಗಮದಂತೆ ಇರಬೇಕು ಅನ್ನುವ ಆಸೆ ಅವರಿಗಿತ್ತು. 

ನಮ್ಮ ಚಿತ್ರಗಳಲ್ಲಿ ಕತೆಗೆ ಪ್ರಾಧಾನ್ಯ ಇತ್ತು: ಪಾರ್ವತಮ್ಮ
'ಇವನೇನಾದರೂ ಅವರಪ್ಪನ ಸಿನಿಮಾ ನಿರ್ದೇಶನ ಮಾಡಿದ್ದಿದ್ದರೆ ಹಾಲಿವುಡ್ ಚಿತ್ರವನ್ನು ನಿವಾಳಿಸಿ ಎಸೆಯುವಂತೆ ಇರುತ್ತಿತ್ತು. ನಮ್ಮ ಚಿತ್ರಗಳಲ್ಲಿ ಕತೆಗೆ ಪ್ರಾಧಾನ್ಯ ಇತ್ತು. ಮಿಕ್ಕ ಅಂಶಗಳು ಅಷ್ಟಕ್ಕಷ್ಟೆ. ಆದರೆ ನಮ್ಮ ಅಪ್ಪು ಮಿಕ್ಕಿದ್ದೆಲ್ಲವೂ ಶ್ರೇಷ್ಠವಾಗಿರುವಂತೆ ನೋಡಿಕೊಳ್ಳುತ್ತಾನೆ ಎಂದು ಮಗನ ತಂತ್ರಜ್ಞಾನದ ಆಸಕ್ತಿಯನ್ನು ಕಂಡ ಅವರ ತಾಯಿ ಪಾರ್ವತಮ್ಮ ಹೇಳಿದ್ದರು.

ಪಿಆರ್‌ಕೆ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದ ಪುನೀತ್
ಚಿತ್ರರಂಗದ ಅಭಿವೃದ್ಧಿಗಾಗಿ ಬಹು ದೊಡ್ಡ ಕನಸು ಕಂಡಿದ್ದವರು ಪುನೀತ್‌ ರಾಜ್‌ಕುಮಾರ್‌. ಹೊಸ ಹೊಸ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಅವಕಾಶ ಕೊಡಬೇಕು, ಕ್ಲಾಸಿಕ್‌ ಕತೆಗಳನ್ನು ಸಿನಿಮಾ ಮಾಡಬೇಕು,  ಕನ್ನಡದಲ್ಲೂ ಇಂಗ್ಲಿಷ್‌ ಮಾದರಿಯ ಸಿನಿಮಾಗಳನ್ನು ನಿರ್ಮಿಸುವ ಬಹು ದೊಡ್ಡ ಕನಸು ಕಂಡಿದ್ದರು. ಆ ಉದ್ದೇಶದಿಂದಲೇ ತಮ್ಮ ಸಾರಥ್ಯದಲ್ಲಿ ಪಿಆರ್‌ಕೆ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಲಾ, ಫ್ರೆಂಚ್‌ ಬಿರಿಯಾನಿ, ಮಾಯಾಬಜಾರ್‌, ಕವಲುದಾರಿ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದರು. ಅಲ್ಲದೆ ಹೊಸಬರ ಚಿತ್ರಗಳ ಹಾಡುಗಳನ್ನು ಮಾರುಕಟ್ಟೆ ಮಾಡುತ್ತಿದ್ದರು. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಕಂಟೆಂಟ್‌ ಆಧಾರಿತ ಸಿನಿಮಾಗಳು ಹೆಚ್ಚೆಚ್ಚು ಬರಬೇಕು ಎಂದು ಕನಸು ಪುನೀತ್ ಕಂಡಿದ್ದರು. 

ಪುನೀತ್‌ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಜಗ್ಗೇಶ್‌ ಆಗ್ರಹ

ಇನ್ನು ಪುನೀತ್ ಅಡ್ವೆಂಚರ್‌ ಆಧಾರಿತ 90 ನಿಮಿಷಗಳ ಆವಧಿಯ 'ಗಂಧದ ಗುಡಿ' ಸಿನಿಮಾ ರೂಪಿಸಿದ್ದು, ಇದರ ಟ್ರೇಲರ್‌ ನ.1ಕ್ಕೆ ಬಿಡುಗಡೆ ಮಾಡುವುದಾಗಿ ಸ್ವತಃ ಅವರೇ ಘೋಷಣೆ ಮಾಡಿದ್ದರು. ಇದರ ಜತೆಗೆ ಸಾಕಷ್ಟು ಕತೆಗಳನ್ನು ಕೇಳಿದ್ದರು. ಹಾಗೂ ಪವನ್‌ಕುಮಾರ್‌ನಿರ್ದೇಶನದ ದ್ವಿತ್ವ, ರಿಷಭ್‌ಶೆಟ್ಟಿ ನಿರ್ದೇಶನದ ಚಿತ್ರ, ದಿನಕರ್‌ತೂಗುದೀಪ ನಿರ್ದೇಶನದ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆದರೆ, ಈಗ ಹಠಾತ್‌ ನಿಧನದಿಂದ ಪುನೀತ್‌ ಅವರಿಗಾಗಿ ಕಾಯುತ್ತಿದ್ದ ಸಿನಿಮಾಗಳು, ಕತೆಗಳು ಅನಾಥವಾಗಿವೆ. ಅಭಿಮಾನಿಗಳ ಜತೆ  ನಿರ್ಮಾಪಕರಿಗೂ ಈ ಸುದ್ದಿ ದೊಡ್ಡ ಆಘಾತ ನೀಡಿದೆ. 

Follow Us:
Download App:
  • android
  • ios