ಫೀಲ್ಡ್‌ಮಾರ್ಷಲ್‌ ಕಾರ್ಯಪ್ಪ ಅವರ ಜೀವನ ಕತೆ ಆಧರಿಸಿದ ಸಿನಿಮಾ ತಯಾರಾಗುತ್ತಿದೆ. ಆ ಚಿತ್ರದಲ್ಲಿ ಫೀಲ್ಡ್‌ಮಾರ್ಷಲ್‌ ಕಾರ್ಯಪ್ಪ ಪಾತ್ರದಲ್ಲಿ ನೆನಪಿರಲಿ ಪ್ರೇಮ್‌ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಡಾ ರಾಘವೇಂದ್ರ ಅವರೇ ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ.

ಪ್ರೇಮ್‌ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಚಿತ್ರವನ್ನು ರೂಪಿಸಿದ ತಂಡವೇ ಈ ಚಿತ್ರದ ತಯಾರಿ ಯೋಜನೆಯಲ್ಲಿ ನಿರತವಾಗಿದೆ. ಈ ಚಿತ್ರದ ಮೇಕಿಂಗ್‌ ಅದ್ದೂರಿಯಾಗಿ ಮಾಡುವ ಆಲೋಚನೆ ಇದೆ. ಈ ನಿಟ್ಟಿನಲ್ಲಿ ಹಾಲಿವುಡ್‌ ತಂತ್ರಜ್ಞರನ್ನು ಕರೆತರುವ ಪ್ಲಾನ್‌ ಇದೆ ಎಂಬುದು ನಿರ್ದೇಶಕ ಹಾಗೂ ನಿರ್ಮಾಪಕ ಡಾ ರಾಘವೇಂದ್ರ ಬಿಎಸ್‌ ಕೊಡುವ ಮಾಹಿತಿ. ಈ ಕಾರಣದಿಂದ ಇದೊಂದು ದೊಡ್ಡ ಬಜೆಟ್‌ನ ಸಿನಿಮಾವಾಗಲಿದೆ ಎನ್ನುತ್ತಾರೆ ಅವರು.

ಅಕ್ಟೋಬರ್ 29ಕ್ಕೆ ಲವ್ಲಿ ಸ್ಟಾರ್ ಪ್ರೇಮ್‌ನ 'ಪ್ರೇಮಂ ಪೂಜ್ಯಂ' ರಿಲೀಸ್!

ಈಗಾಗಲೇ ಹಾಲಿವುಡ್‌ ತಂತ್ರಜ್ಞರ ಜತೆ ಮಾತುಕತೆ ಮಾಡಿದ್ದು, ಚಿತ್ರದ ಬಹುತೇಕ ಶೂಟಿಂಗ್‌ ವಿದೇಶಗಳಲ್ಲೇ ನಡೆಯಲಿದೆ. ಕಾರ್ಯಪ್ಪ ಅವರ ಬದುಕಿನ ನೈಜ ಘಟನೆಗಳನ್ನು ಆಧರಿಸಿ ಕತೆ ಮಾಡಲಾಗುತ್ತಿದೆ. ‘ಪ್ರೇಮಂ ಪೂಜ್ಯಂ’ ಚಿತ್ರ ಬಿಡುಗಡೆಯಾದ ಕೂಡಲೇ ಈ ಹೊಸ ಚಿತ್ರಕ್ಕೆ ಚಾಲನೆ ಕೊಡಲಾಗುವುದು. ಸದ್ಯದಲ್ಲೇ ಚಿತ್ರದ ಟೈಟಲ್‌ ಬಿಡುಗಡೆ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ.

ಕೊಡಗಿನ ವೀರನಿಗೆ ಕೊಡವ ಭಾಷೆಯಲ್ಲೇ ಶುಭ ಕೋರಿದ ರಾಷ್ಟ್ರಪತಿ!

‘ಕನ್ನಡ ನಾಡು ಕಂಡ ವೀರ ಯೋಧನ ಕತೆಯನ್ನು ಆಧರಿಸಿ ಈ ಸಿನಿಮಾ ಮಾಡಲಿದ್ದು, ಹಾಲಿವುಡ್‌ ತಾಂತ್ರಿಕತೆಯಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ರೂಪಿಸುವ ಉದ್ದೇಶ ನಮ್ಮದು. ಈ ಕಾರಣಕ್ಕೆ ಚಿತ್ರಕ್ಕೆ ಬಹು ಕೋಟಿ ವೆಚ್ಚ ಆಗಲಿದೆ’ ಎಂಬುದು ಡಾ. ರಾಘವೇಂದ್ರ ಬಿ ಎಸ್‌ ಮಾತು.