ಕೊಡಗಿನ ವೀರನಿಗೆ ಕೊಡವ ಭಾಷೆಯಲ್ಲೇ ಶುಭ ಕೋರಿದ ರಾಷ್ಟ್ರಪತಿ!

ದೇಶದ ಹೆಮ್ಮೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರ ಜನ್ಮದಿನೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಸ್ಮರಿಸಿಕೊಂಡಿದ್ದಾರೆ.
 

President Kovind pays tribute to K M Cariappa in kodava language

ಮಡಿಕೇರಿ[ಜ.28]: ಇಂದು ಭಾರತ ದೇಶದ ರಕ್ಷಣಾ ಪಡೆಯ ಇತಿಹಾಸದಲ್ಲಿ ದಂತ ಕಥೆಯಾಗಿರುವ ಹಾಗೂ ಸೇನಾ ಇತಿಹಾಸದ ಏಕೈಕ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪಅವರ 120ನೇ ಜನ್ಮ ದಿನಾಚರಣೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸರಣಿ ಟ್ವೀಟ್ ಮಾಡಿ ಕಾರ್ಯಪ್ಪನವರ ಗುಣಗಾನ ಮಾಡಿದ್ದಾರೆ, ಈ ಟ್ವೀಟ್ ಗಳನಗ್ನು ಕೊಡವ ಭಾಷೆಗಳಲ್ಲೇ ಮಾಡಿದ್ದಾರೆ ಎಂಬುವುದು ಉಲ್ಲೇಖನೀಯ.

ಟ್ವೀಟ್ ಮಾಡಿರುವ ರಾಷ್ಟ್ರಪತಿಗಳು 'ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪನವರ ಜನ್ಮದಿನದ ಸ್ಮರಣ, ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರರಾದ ಫೀಲ್ಡ್ ಮಾರ್ಷೆಲ್ ಕೆ.ಎಂ.ಕಾರಿಯಪ್ಪನವರು ನಮ್ಮ ಅತ್ಯುತ್ತಮ ಸೇನಾ ದಂಡನಾಯಕರಲ್ಲಿ ಒಬ್ಬರು ಹಾಗೂ ಅತ್ಯಂತ ನೆಚ್ಚಿನ ರಾಷ್ಟ್ರದ ನಾಯಕರಾಗಿ ಉಳಿದಿರುತ್ತಾರೆ' ಎಂದಿದ್ದಾರೆ.

ಸೇನಾ ಇತಿಹಾಸದ ಏಕೈಕ ಮಹಾ ದಂಡನಾಯಕ, ಯೋಧರ ನಾಡಿನ  ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪಅವರ ಜನ್ಮ ದಿನಾಚರಣೆಯನ್ನು ಅವರ ತವರುನಾಡಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಡಿಕೇರಿ ನಗರದ ಮುಖ್ಯ ದ್ವಾರದಲ್ಲಿರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಅಪ್ರತಿಮ ವೀರ ಸೇನಾನಿಯನ್ನ ಸ್ಮರಿಸಿದ್ರು. ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಪ್ರಯುಕ್ತ ಕಾರ್ಯಪ್ಪ ಅವರು ಹುಟ್ಟಿದ ಮನೆ ಹಾಗೂ ಅವರ ಸಮಾಧಿ ಇರುವ ನಗರದ ರೋಶನಾರ ಬಳಿ ಪೂಜೆ ಸಲ್ಲಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳು ವೀರ ಸೇನಾನಿಯನ್ನು ಸ್ಮರಿಸಿದರು. 

ಇನ್ನು ಕಾರ್ಯಪ್ಪ ಹುಟ್ಟು ಹಬ್ಬದ ಹಿನ್ನಲೆ ನಗರದ ಪ್ರಮುಖ ಬೀದಿಗಳಲ್ಲಿ ಮಾಜಿ ಸೈನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು  ಮೆರವಣಿಗೆ ನಡೆಸಿದ್ರು. ಭಾರತದ ಮಹಾದಂಡನಾಯಕನ ಹುಟ್ಟು ಹಬ್ಬದ ಪ್ರಯುಕ್ತ  ವಿವಿಧ ಕಲಾ ತಂಡಗಳು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗುವ ಮೂಲಕ ಆಕರ್ಷಸಿದವು. ಕೊಡಗು ಜಿಲ್ಲಾಡಳಿತ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ನಿಂದ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.

Latest Videos
Follow Us:
Download App:
  • android
  • ios