ಬೆಂಗಳೂರು (ಜ. 22): ನಟ ನಿಖಿಲ್ ಕುಮಾರ್ ಅವರಿಗೆ ಜನ್ಮದಿನದ ಸಂಭ್ರಮ. ಜ.22 ರಂದು ಅಭಿಮಾನಿಗಳು ಹಾಗೂ ಚಿತ್ರೋದ್ಯಮದ ಆಪ್ತರ ಜತೆಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ನಿಖಿಲ್ ರಾಜಕಾರಣಿಯೂ ಆಗಿರುವುದರಿಂದ ಜೆಡಿಎಸ್ ಪಕ್ಷದ ಯುವ ಘಟಕದ ಕಾರ್ಯಕರ್ತರು ಕೂಡ ನಿಖಿಲ್ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ತಯಾರಿ ಮಾಡಿಕೊಂಡಿದ್ದಾರೆ. ಸದ್ಯ ನಿಖಿಲ್ ಅವರ ಮೂರು ಹೊಸ ಚಿತ್ರಗಳು ಘೋಷಣೆ ಆಗುವ ಸಾಧ್ಯತೆಗಳಿವೆ. ನಿರ್ದೇಶಕರಾದ ಎ ಪಿ ಅರ್ಜುನ್, ತೆಲುಗಿನ ವಿಜಯ್‌ಕುಮಾರ್ ಕೊಂಡ ಹಾಗೂ ಲೈಕಾ ಪ್ರೊಡಕ್ಷನ್ ಸಾರಥ್ಯದ ಚಿತ್ರಗಳು ನಿಖಿಲ್ ಅವರ ಖಾತೆಗೆ ನಾಲ್ಕು ಚಿತ್ರಗಳು ಸೇರಿದಂತೆ ಆಗಿವೆ.

'ಭಾಗ್ಯದ ಬಳೆಗಾರ' ಹಾಡಿಗೆ ಚಿಣ್ಣರ ಜೊತೆ ರೋರಿಂಗ್ ಸ್ಟಾರ್ ಸ್ಟೆಪ್..!

ಆ ಮೂಲಕ ಈ ಬಾರಿ ನಿಖಿಲ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ಸಿನಿಮಾ ರಂಗು ಜೋರಾಗಿದೆ. ವಿಶೇಷ ಪೂಜೆ ಹಾಗೂ ಅಭಿಮಾನಿಗಳ ಜತೆ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಭಿಮಾನಿಗಳಿಂದ ವಿವಿಧ ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಧನುಷ್ ಐಪಿಎಸ್ ಆದ ನಿಖಿಲ್

ಮುನಿರತ್ನ ನಿರ್ಮಾಣದಲ್ಲಿ ಸೆಟ್ಟೇರಿರುವ ‘ಧನುಷ್ ಐಪಿಎಸ್’ ಚಿತ್ರದಲ್ಲಿ ನಿಖಿಲ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು ಘೋಷಣೆ ಆಗಿದ್ದು, ಇದರ ನಿರ್ದೇಶಕರು ಯಾರು, ಯಾವಾಗ ಚಿತ್ರೀಕರಣ ಆಗಲಿದೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದರೆ, ‘ಕುರುಕ್ಷೇತ್ರ’ ಸಿನಿಮಾ ನಂತರ ಮತ್ತೊಮ್ಮೆ ಮುನಿರತ್ನ ಬ್ಯಾನರ್‌ನಲ್ಲಿ ನಿಖಿಲ್ ಕುಮಾರ್ ಅವರು ನಟಿಸುತ್ತಿರುವುದು ವಿಶೇಷ. ಚಿತ್ರದ ಹೆಸರಿನಲ್ಲೇ ಇರುವಂತೆ ಇಲ್ಲಿ ಪೊಲೀಸ್ ಪಾತ್ರದಲ್ಲಿ ನಿಖಿಲ್, ಕಾಣಿಸಿಕೊಳ್ಳಲಿದ್ದಾರೆಯೇ ಎನ್ನುವ ಕುತೂಹಲ ಹುಟ್ಟು ಹಾಕಿದೆ.