ಚಾಮರಾಜನಗರ(ಜ.22): ಕೊಳ್ಳೇಗಾಲದಲ್ಲಿ ಭಾಗ್ಯದ ಬಳೆಗಾರ ಹಾಡಿಗೆ ನೃತ್ಯ ಪ್ರದರ್ಶಿಸುತ್ತಿದ್ದ ಶಾಲಾ ಮಕ್ಕಳ ನೃತ್ಯ ವೀಕ್ಷಿಸಲು ಅರಣ್ಯ ಇಲಾಖೆ ರಾಯಭಾರಿಗಳು, ಚಲಚಿತ್ರ ನಟರೂ ಆದ ಶ್ರೀಮುರುಳಿ ಶಾಲಾ ವಿದ್ಯಾರ್ಥಿಗಳ ನಡುವೆ ಕುಳಿತು ಗಮನ ಸೆಳೆದಿದ್ದಾರೆ.

ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ ಹಾಡಿಗೆ ಶಾಲಾ ಮಕ್ಕಳು ನರ್ತಿಸಲು ಪ್ರಾರಂಭಿಸಿದರು. ಈ ನಡುವೆ ವೇದಿಕೆಯಲ್ಲಿದ್ದ ಶ್ರೀಮುರಳಿ ತಾವೇ ನೇರ ಎದ್ದು ಬಂದು ಶಾಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕುಳಿತು ನೃತ್ಯ ವೀಕ್ಷಿಸಿದರು. ಕೊನೆ ಹಂತದಲ್ಲಿ ಮಕ್ಕಳೊಂದಿಗೆ ನರ್ತಿಸಿ ಚಪ್ಪಾಳೆ ಗಿಟ್ಟಿಸಿದ್ದಾರೆ.

ಸಕ್ಕರೆ ಕಾರ್ಖಾನೆ ಹಾಳಾಗಿದ್ದು ಮೈತ್ರಿ ಸರ್ಕಾರದಿಂದ: ಸಿದ್ದರಾಮಯ್ಯ

ಇದಕ್ಕೂ ಮುನ್ನ ಮಕ್ಕಳ ನಡುವೆ ಮುರಳಿ ಕುಳಿತುಕೊಳ್ಳುತ್ತಿದ್ದಂತೆ ಪೋಟೊ ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಮೊದಲು ನೃತ್ಯ ನೋಡಿ ಆಮೇಲೆ ಪೋಟೊ ಎಂದು ಮಕ್ಕಳ ನೃತ್ಯವನ್ನು ಮಕ್ಕಳ ನಡುವೆಯೇ ವೀಕ್ಷಿಸಿ ಮಕ್ಕಳನ್ನು ಹುರಿದುಂಬಿಸುವ ಮೂಲಕ ಪ್ರೋತ್ಸಾಹಿಸಿದ್ದಾರೆ. ಕಾರ್ಯಕ್ರಮದಲ್ಲಿ ತಾವೇ ನಟಿಸಿದ ಭರಾಟೆ, ಸೇರಿದಂತೆ ಹಲವು ಸಿನಿಮಾಗಳ ಹಾಡನ್ನು ಹಾಗೂ ಡೈಲಾಗ್‌ ಹೇಳಿ ರಂಜಿಸಿದರು.

ಡಿ-ಬಾಸ್‌ ಮೇಲೆ ಈ ಹೀರೋಗೆ ಲವ್ವಾಯ್ತು, 'ಮತ್ತೆ ಉಧ್ಭವ' ಟ್ರೈಲರ್‌ ಹೀಗಿದೆ ನೋಡಿ!