'ಜಾಗ್ವಾರ್‌' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿಖಿಲ್‌ ಕುಮಾರಸ್ವಾಮಿ ಗಾಂಧಿ ನಗರದಲ್ಲಿ ಮದುವೆ ವಿಚಾರದ ಬಗ್ಗೆ ಹರಿದಾಡುತ್ತಿರುವ ಗಾಸಿಪ್‌ಗಳಿಗೆ ಬ್ರೇಕ್‌ ಹಾಕಿದ್ದಾರೆ. ತನ್ನ ಕನಸಿನ ರಾಣಿ ಬಗ್ಗೆ ಮಾತನಾಡಿದ್ದಾರೆ.

'ನಾನು ಮದುವೆ ಆಗುವ ಹುಡುಗಿ ಯಾರು ಅಂತ ಶೀಘ್ರದಲ್ಲಿಯೇ ರಿವೀಲ್ ಮಾಡುವೆ. ನಾನು ಮದುವೆ ಆಗುವ ಹುಡುಗಿಗೂ, ಚಿತ್ರರಂಗಕ್ಕೂ ಯಾವುದೇ ಸಂಬಂಧವಿಲ್ಲ. ಆಕೆ ನಮ್ಮ ಸಂಸ್ಕೃತಿ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾಳೆ. ತುಂಬಾ ಸಿಂಪಲ್‌. ನನ್ನ ಮದುವೆ ಬಗ್ಗೆ ಅಪ್ಪ-ಅಮ್ಮ ಡಿಸೈಡ್‌ ಮಾಡುತ್ತಾರೆ. ಅವರು ಹೇಳಿದ್ದೇ ಫೈನಲ್‌' ಎಂದಿದ್ದಾರೆ. 

7ನೇ ಕ್ಲಾಸಿನಲ್ಲೇ ನಿಖಿಲ್ ಬಳಿ ಇತ್ತು ಕಾರು; ಇಲ್ಲಿದೆ ಕುಮಾರಸ್ವಾಮಿ ಪುತ್ರನ 'ಕಾರುಬಾರು'!

'ಸೀತಾರಾಮ' ಕಲ್ಯಾಣ ಚಿತ್ರದಲ್ಲಿ ರಚಿತಾ ರಾಮ್‌ಗೆ ಜೋಡಿಯಾಗಿ ಕಾಣಿಸಿಕೊಂಡ ನಿಖಿಲ್‌ ಅವರನ್ನು ಎಲ್ಲೇ ಹೋದರೂ ಅಭಿಮಾನಿಗಳು ಕೇಳುತ್ತಿದ್ದ ಒಂದೇ ಪ್ರಶ್ನೆ 'ಮದುವೆ ಯಾವಾಗ?' ಅಥವಾ 'ನಿಮ್ಮ ಹಾಗೂ ರಚಿತಾ ನಡುವೆ ಲವ್‌ ಆಗಿದ್ಯಾ?' ಎಂದು. ಈ ಚಿತ್ರದ ಪ್ರಮೋಷನ್ ಟೈಮಲ್ಲಿ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ 'ನಾನು ಮದುವೆಯಾಗುವ ಹುಡುಗ ಗೌಡನೇ ಆಗಿರಬೇಕು,' ಎಂದು ಹೇಳಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಇದಕ್ಕೆ ಇಂಬು ನೀಡುವಂತೆ ಕಳೆದ ವಾರ ಶೃಂಗೇರಿಯಲ್ಲಿ ದೇವೇಗೌಡರ ಕುಟುಂಬ 5 ದಿನಗಳ ಕಾಲ ಮಹಾ ಯಾಗ ನಡೆಸಿತ್ತು. ಅದರ ಪೂರ್ಣಾಹುತಿ ವೇಳೆ ರಚಿತಾ ಕಾಣಿಸಿಕೊಂಡಿದ್ದು, ಹತ್ತು ಹಲವು ಸುದ್ದಿ ಹರಿದಾಡಲು ಕಾರಣವಾಗಿತ್ತು. ಇವರಿಬ್ಬರ ಮದುವೆ ಪಕ್ಕಾ ಎನ್ನುವಂತೆಯೇ ಸುದ್ದಿಗಳು ಹೊರ ಬಿದ್ದಿದ್ದವು. 

ಸ್ಯಾಂಡಲ್‌ವುಡ್ ಯುವರಾಜನಿಗೆ ಮೂವತ್ತು, ನಿಖಿಲ್‌ ಬಗ್ಗೆ ನಿಮಗೆಷ್ಟು ಗೊತ್ತು!?

ಆದರೆ, ರಚಿತಾ ರಾಮ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಮದುವೆ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ನನ್ನ ಮದುವೆ ನಿಶ್ಚಯವಾಗಿಲ್ಲ, ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ ಎಲ್ಲರ ಸಮ್ಮುಖದಲ್ಲಿಯೇ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ. ಸುಳ್ಳು ವದಂತಿಗಳನ್ನು ನಂಬಿ, ವೈಯಕ್ತಿಕ ವಿಚಾರಗಳನ್ನು ನಗೆಪಾಟಿಲಿನ ವಿಷಯ ಮಾಡಬೇಡಿ,' ಎಂದು ವಿನಮ್ರತೆಯಿಂದ ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ನಿಖಿಲ್ ತಮ್ಮ ಮದುವೆಯಾಗುವ ಹುಡುಗಿ ಬಗ್ಗೆ ಕೆಲವು ವಿಷಯಗಳನ್ನು ಹೇಳಿರುವುದಾಗ ಕನ್ನಡ ವೆಬ್‌ಸೈಟ್‌ವೊಂದು ವರದಿ ಮಾಡಿದೆ, ಹರಡುತ್ತಿದ್ದ ಗಾಳಿ ಸುದ್ದಿಗಳಿಗೆ ಬ್ರೇಕ್ ಹಾಕಲು ಯತ್ನಿಸಿದ್ದಾರೆ.

ವಿದೇಶಿ ನೆಲದಲ್ಲಿ ಮಗನೊಂದಿಗೆ ಅನಿತಾ ಕುಮಾರಸ್ವಾಮಿ ಮಾಡರ್ನ್ ಲುಕ್!