ಕೊರೋನಾ ಸಂಕಷ್ಟ ದೂರವಾಗಲು ನೆನ​ಪಿ​ರಲಿ ಪ್ರೇಮ್‌ ಉರುಳು ಸೇವೆ

ಕೊರೋನಾ ವೈರಸ್ ಆರ್ಭಟಕ್ಕೆ ಇಡೀ ದೇಶವೇ ಆತಂಕದಲ್ಲಿದೆ. ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ನೆನಪಿರಲಿ ಪ್ರೇಮ್ ಕೊರೋನಾದಿಂದ ಯಾರಿಗೂ ಅನಾಹುತವಾಗದಿರಲಿ ಎಂದು ಉರುಳು ಸೇವೆ ಸಲ್ಲಿಸಿದ್ದಾರೆ. 

kannada actor Nenapirali Prem performs special pooja for Corona Control

ಬೆಂಗಳೂರು (ಮಾ. 19): ಕೊರೋನಾ ವೈರಸ್‌ ಸಂಕ​ಷ್ಟ​ದಿಂದ ಎಲ್ಲ​ರನ್ನೂ ಪಾರು ಮಾಡು​ವಂತೆ ಬೇಡಿ​ಕೊಂಡು ನಟ ಪ್ರೇಮ್‌ ಅವರು ದೇವರ ಮುಂದೆ ಉರುಳುಸೇವೆ ಮಾಡಿ​ದ್ದಾರೆ.

ರಕ್ಷಿತ್‌ ಹೊಸ ಸಿನಿಮಾ ಫಿಕ್ಸ್; 'ಸಪ್ತಸಾಗರದಾಚೆ ಎಲ್ಲೋ' ದಾಟ್ತಾರಾ ಶೆಟ್ರು?

ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಉರುಳು ಸೇವೆ ಮಾಡಿದ್ದು, ಸ್ನೇಹಿತರಿಗೆ, ಬಂದುಗಳಿಗೆ ಅಭಿಮಾನಿಗಳಿಗೆ ಹಾಗೂ ಚಿತ್ರ​ರಂಗ​ದ​ವ​ರಿಗೆ ಕೊರೋನಾ ವೈರ​ಸ್‌​ನಿಂದ ಯಾವುದೇ ರೀತಿಯ ತೊಂದರೆ ಆಗ​ದಿ​ರಲಿ ಎಂದು ಬೇಡಿ​ಕೊಂಡಿ​ದ್ದಾರೆ.

 

ಕೊರೋನಾ ಹಾವಳಿಯಿಂದ ಪ್ರಪಂಚವನ್ನ ಪಾರು ಮಾಡು ಎನ್ನುತ್ತ ಪ್ರೇಮ್‌ ಮಾಡಿ​ರುವ ಈ ಉರುಳುಸೇವೆ ವಿಡಿಯೋ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಸದ್ದು ಮಾಡು​ತ್ತಿದೆ.

Latest Videos
Follow Us:
Download App:
  • android
  • ios