ರಕ್ಷಿತ್‌ ಹೊಸ ಸಿನಿಮಾ ಫಿಕ್ಸ್; 'ಸಪ್ತಸಾಗರದಾಚೆ ಎಲ್ಲೋ' ದಾಟ್ತಾರಾ ಶೆಟ್ರು?

ಗೋಧಿ ಬಣ್ಣ ಸಾಧಾ​ರಣ ಮೈಕ​ಟ್ಟು’ ಚಿತ್ರದ ನಂತರ ಸೇಮ್‌ ಕಾಂಬಿ​ನೇ​ಷನ್‌ ಮತ್ತೊಮ್ಮೆ ಜತೆ​ಯಾ​ಗು​ತ್ತಿದೆ.  ‘777 ಚಾರ್ಲಿ’ ಶೂಟಿಂಗ್‌​ನಲ್ಲಿ ಬ್ಯುಸಿ​ಯಾ​ಗಿ​ರುವ ರಕ್ಷಿತ್‌ ಶೆಟ್ಟಿಮುಂದಿನ ಚಿತ್ರಕ್ಕೆ ಹೇಮಂತ್‌ ರಾವ್‌ ನಿರ್ದೇ​ಶನ ಹೇಳು​ತ್ತಿ​ದ್ದಾರೆ. ಈ ಚಿತ್ರದ ಹೆಸರು ‘ಸಪ್ತ​ಸಾ​ಗ​ರದ ಆಚೆ ಎಲ್ಲೋ’.

Kannada actor Rakshit Shetty new movie Sapta sagaradache ello

ರಕ್ಷಿತ್‌ ಶೆಟ್ಟಿಮತ್ತೊಂದು ಸಿನಿಮಾ ಒಪ್ಪಿ​ಕೊಂಡಿ​ದ್ದಾರೆ. ‘777 ಚಾರ್ಲಿ’ ಶೂಟಿಂಗ್‌​ನಲ್ಲಿ ಬ್ಯುಸಿ​ಯಾ​ಗಿ​ರುವ ರಕ್ಷಿತ್‌ ಶೆಟ್ಟಿಮುಂದಿನ ಚಿತ್ರಕ್ಕೆ ಹೇಮಂತ್‌ ರಾವ್‌ ನಿರ್ದೇ​ಶನ ಹೇಳು​ತ್ತಿ​ದ್ದಾರೆ. ಪುಷ್ಕರ್‌ ಮಲ್ಲಿ​ಕಾ​ರ್ಜು​ನಯ್ಯ ಅವರೇ ಈ ಚಿತ್ರ​ವನ್ನು ನಿರ್ಮಾಣ ಮಾಡು​ತ್ತಿ​ದ್ದಾರೆ. ಈ ಚಿತ್ರದ ಹೆಸರು ‘ಸಪ್ತ​ಸಾ​ಗ​ರದ ಆಚೆ ಎಲ್ಲೋ’.

‘ಗೋಧಿ ಬಣ್ಣ ಸಾಧಾ​ರಣ ಮೈಕ​ಟ್ಟು’ ಚಿತ್ರದ ನಂತರ ಸೇಮ್‌ ಕಾಂಬಿ​ನೇ​ಷನ್‌ ಮತ್ತೊಮ್ಮೆ ಜತೆ​ಯಾ​ಗು​ತ್ತಿದೆ. ಜೂನ್‌ ತಿಂಗ​ಳಲ್ಲಿ ಈ ಸಿನಿಮಾ ಶೂಟಿಂಗ್‌ ಮೈದಾ​ನಕ್ಕೆ ಇಳಿ​ಯ​ಲಿದೆ. ಅಪ್ಪಟ ಪ್ರೇಮಕತೆ ಹಾಗೂ ಆ್ಯಕ್ಷನ್‌ ಕೇಂದ್ರ​ವಾ​ಗಿ​ಟ್ಟು​ಕೊಂಡು ಈ ಚಿತ್ರಕ್ಕೆ ಹೇಮಂತ್‌ ರಾವ್‌ ಅವರೇ ಕತೆ ಚಿತ್ರ​ಕಥೆ ಹಾಗೂ ಸಂಭಾ​ಷಣೆ ಬರೆ​ದಿ​ದ್ದಾರೆ.

ಈ ಚಿತ್ರಕ್ಕೆ ಹಣ ಕೊಡ್ತೇವೆ, ರೀ ರಿಲೀಸ್ ಮಾಡಿ ಎನ್ನುತ್ತಿದ್ದಾರೆ ಪ್ರೇಕ್ಷಕರು!

ಈ ಹಿಂದೆ ಬಂದ ‘ಗೋಧಿ ಬಣ್ಣ ಸಾಧಾ​ರಾಣ ಮೈಕ​ಟ್ಟು’ ಹಾಗೂ ‘ಕವ​ಲು​ದಾ​ರಿ’ ಚಿತ್ರ​ಗಳಂತೆ ಈ ಚಿತ್ರ​ವನ್ನೂ ಹೊಸ ರೀತಿ​ಯಲ್ಲಿ ರೂಪಿ​ಸುವ ಪ್ಲಾನ್‌ ಹೇಮಂತ್‌ ಅವ​ರದ್ದು. ‘ಈ ಚಿತ್ರದ ಕತೆ ರಕ್ಷಿತ್‌ ಶೆಟ್ಟಿಅವ​ರಿಗೆ ತುಂಬಾ ಸೂಕ್ತವಾಗಿದೆ. ಪ್ರಯೋ​ಗದ ಜತೆಗೆ ಒಂದು ದೊಡ್ಡ ಕಮ​ರ್ಷಿ​ಯಲ್‌ ಸಿನಿಮಾ ಇದು.

ಸಿನಿಮಾ ನಿರ್ಮಾ​ಣ​ದಲ್ಲಿ ತುಂಬಾ ಕನ​ಸು​ಗ​ಳನ್ನು ಕಟ್ಟಿ​ಕೊಂಡಿ​ರುವ ಪುಷ್ಕರ್‌ ಮಲ್ಲಿ​ಕಾ​ರ್ಜು​ನಯ್ಯ ಈ ಚಿತ್ರ​ ನಿರ್ಮಾಣಕ್ಕೆ ಮುಂದಾ​ಗಿ​ರು​ವುದರಿಂದ ನಾನು ನಿರೀಕ್ಷೆ ಮಾಡಿ​ದಂತೆ ಈ ಚಿತ್ರ ಬರ​ಲಿದೆ. ಬೆಂಗ​ಳೂರು ಸುತ್ತ​ಮುತ್ತ 65 ರಿಂದ 75 ದಿನ​ಗಳ ಕಾಲ ಚಿತ್ರೀ​ಕ​ರಣ ನಡೆ​ಯ​ಲಿದೆ’ ಎನ್ನು​ತ್ತಾರೆ ನಿರ್ದೇ​ಶಕ ಹೇಮಂತ್‌ ರಾವ್‌.

ಅದ್ವೈತ್‌ ಗುರು​ಮೂರ್ತಿ ಕ್ಯಾಮೆರಾ, ಚರಣ್‌ ಸಂಗೀತ ಈ ಚಿತ್ರ​ಕ್ಕಿದೆ. ಹೇಮಂತ್‌ ರಾವ್‌ ಹಾಗೂ ರಕ್ಷಿತ್‌ ಕಾಂಬಿ​ನೇ​ಷ​ನ್‌​ನಲ್ಲಿ ‘ತೆನಾಲಿ’ ಸಿನಿ​ಮಾ ಬರ​ಬೇ​ಕಿತ್ತು. ಇದು ದೊಡ್ಡ ಕತೆಯ ಚಿತ್ರ. ಸ್ವಾತಂತ್ರ್ಯದ ದಿನ​ಗಳ ಹಿನ್ನೆ​ಲೆ​ಯಲ್ಲಿ ಮೂಡುವ ಕತೆ. ಹೀಗಾಗಿ ಇದಕ್ಕೆ ಸಾಕಷ್ಟುತಯಾರಿ ಬೇಕು. ಸಮಯ ತೆಗೆ​ದು​ಕೊಂಡು ಈ ಸಿನಿಮಾ ಮಾಡ​ಬೇ​ಕಿ​ದ್ದ​ರಿಂದ ಈ ಮೊದಲೇ ಕೇಳಿ ಮೆಚ್ಚಿದ್ದ ‘ಸಪ್ತ​ಸಾ​ಗ​ರದ ಆಚೆ ಎಲ್ಲೋ’ ಚಿತ್ರ​ವನ್ನು ಶುರು ಮಾಡು​ತ್ತಿ​ದ್ದಾರೆ.

ರಕ್ಷಿತ್‌ ನಟ​ನೆಯ ‘777 ಚಾರ್ಲಿ’ ಚಿತ್ರಕ್ಕೆ ಶೂಟಿಂಗ್‌ ಮುಗಿ​ಯುತ್ತಾ ಬಂದಿದೆ. ಏಪ್ರಿಲ್‌ ತಿಂಗಳ ಮೊದಲ ವಾರ​ದ ಹೊತ್ತಿಗೆ ಈ ಚಿತ್ರಕ್ಕೆ ಚಿತ್ರೀ​ಕ​ರ​ಣ ಕೆಲ​ಸ​ಗಳು ಮುಕ್ತಾ​ಯ​ವಾ​ಗಿ​ಲಿದ್ದು, ಈ ನಂತರ ಹೇಮಂತ್‌ ರಾವ್‌ ನಿರ್ದೇ​ಶನ ಮಾಡ​ಲಿ​ರುವ ‘ಸಪ್ತ​ಸಾ​ಗ​ರದ ಆಚೆ ಎಲ್ಲೋ’ ಸಿನಿಮಾ ಸೆಟ್ಟೇ​ರಲಿದೆ.

‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿಎರಡು ಗೆಟ​ಪ್‌​ಗ​ಳಲ್ಲಿ ಕಾಣಿ​ಸಿ​ಕೊ​ಳ್ಳು​ತ್ತಿ​ದ್ದಾರೆ. ಆಗಷ್ಟೆಕಾಲೇಜು ಮುಗಿ​ಸಿದ ಹುಡುಗ ಹಾಗೂ ಹತ್ತು ವರ್ಷಗಳ ನಂತ​ರದ ಕಾಲೇಜು ಹುಡು​ಗನ ಪಾತ್ರ ಹೀಗೆ ಭಿನ್ನ ರೀತಿಯ ಪಾತ್ರ ಮಾಡು​ತ್ತಿ​ದ್ದಾರೆ.

- ಹೇಮಂತ್‌ರಾವ್‌

Latest Videos
Follow Us:
Download App:
  • android
  • ios