Asianet Suvarna News Asianet Suvarna News

ಶಂಕರ್‌ ನಾಗ್-ಅರುಂಧತಿ ನಾಗ್ ಒಮ್ಮೆ ಮದುವೆ ಆಗದಿರಲು ನಿರ್ಧರಿಸಿದ್ದು ಯಾಕೆ? ಕಾರಣ ಏನಾಗಿತ್ತು..?

ನಟ ಶಂಕರ್‌ ನಾಗ್ ಅವರು ಮೂವತ್ತೈದೇ ವರ್ಷಗಳು ಬದುಕಿದ್ದರೂ ಕೂಡ, ಅಷ್ಟರಲ್ಲಿ ಹಲವು ಸಿನಿಮಾಗಳು, ಧಾರಾವಾಹಿಗಳಲ್ಲಿ ನಟಿಸಿದ್ದರು. ಜತೆಗೆ, ಡಾ ರಾಜ್‌ಕುಮಾರ್ ನಟನೆಯ 'ಒಂದು ಮುತ್ತಿನ ಕಥೆ' ಸೇರಿದಂತೆ ಹಲವಾರು ಸಿನಿಮಾಗಳಿಗೆ ನಿರ್ದೇಶನವನ್ನೂ ಮಾಡಿದ್ದರು...

Kannada actor Shankar Nag and Arundhati Nag love story starts at college days srb
Author
First Published Aug 18, 2024, 6:22 PM IST | Last Updated Aug 18, 2024, 6:22 PM IST

ನಟ, ನಿರ್ದೇಶಕ ಶಂಕರ್‌ನಾಗ್ (Shankar Nag) ಅವರನ್ನು ಮೊದಲ ಸಲ ನೋಡಿದಾಗಲೇ ಅರುಂಧತಿ ಅವರು ಇಷ್ಟಪಟ್ಟಿದ್ದರಂತೆ. ಆಗ ಶಂಕರ್‌ ನಾಗ್ ಅವರಿಗೆ 19 ವರ್ಷ ಆಗಿತ್ತು. ಅರುಂಧತಿ ಅವರಿಗೆ ಆಗ 17 ವರ್ಷ. ಬೇರೆ ಬೇರೆ ಕಾಲೇಜಿನಲ್ಲಿ ಓದುತ್ತಿದ್ದ ಇಬ್ಬರನ್ನೂ ಒಂದು ಮಾಡಿದ್ದು ಇಂಟರ್‌ನ್ಯಾಷನಲ್ ಥಿಯೇಟರ್‌ ಎನ್ನಲಾಗಿದೆ. ಯುನಿವರ್ಸಿಟಿ ಕಾಂಪಿಟೀಶನ್‌ನಲ್ಲಿ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಪಡೆದವರನ್ನು ಒಟ್ಟಾಗಿಸಿ ಗುಜರಾತ್‌ನಲ್ಲಿ ಇಂಟರ್‌ ನ್ಯಾಷನಲ್ ಥಿಯೇಟರ್‌ನಲ್ಲಿ ಭಾಗಿಯಾಗುವಂತೆ ಮಾಡಲಾಗಿತ್ತು. 

ಗುಜರಾತ್‌ನಲ್ಲಿ ನಾಟಕದ ಸಲುವಾಗಿ ಒಟ್ಟಿಗೇ ಇದ್ದರು ಶಂಕರ್‌ ನಾಗ್ ಹಾಗು ನಟಿ ಅರುಂಧತಿ. ಆ ವೇಳೆಯಲ್ಲಿಯೇ ನಟಿ ಅರುಂಧತಿ (Arundhati Nag) ಅವರಿಗೆ ನಟ ಶಂಕರ್ ನಾಗ್ ತುಂಬಾ ಇಷ್ಟವಾಗಿದ್ದರಂತೆ. ಬಳಿಕ ಆರು ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರೀತಿಸಿ, ಅರ್ಥೈಸಿಕೊಂಡರು. ಜೊತೆಯಾಗಿ ಓಡಾಡಿ ಕಷ್ಟ-ಸುಖ ಎಲ್ಲವನ್ನೂ ಹಂಚಿಕೊಂಡಿದ್ದರು. ಜೀವನ ಸಂಗಾತಿಗಳಾಗಬೇಕೆಂದು ಬಯಸಿದ್ದ ಅವರಿಬ್ಬರಲ್ಲೂ ಒಮ್ಮೆ 'ಯಾಕೋ ಈ ಸಂಬಂಧ ಬೇಡ' ಎನ್ನಿಸಿತ್ತಂತೆ. 

ಚಿಕ್ಕ ವಯಸ್ಸಿನಲ್ಲೇ ನಮ್ಮನ್ನಗಲಿದ ಕನ್ನಡ ಚಿತ್ರತಾರೆಗಳು; ಕಂಬನಿಯಾಗಿ ಜಾರುವ ನೆನಪುಗಳು!

ಯಾಕೆ ಹಾಗೆ ಅನ್ನಿಸಿತು ಎಂಬುದಕ್ಕೆ ಅವರು ಕೊಟ್ಟ ಕಾರಣ, 'ನಮ್ಮ ನಮ್ಮ ಮನೆಗಳಲ್ಲಿ ನಮ್ಮಿಬ್ಬರ ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಗ್ರೀನ್ ಸಿಗ್ನಲ್ ಕೊಡುತ್ತಾರೆ ಎಂಬ ಖಾತ್ರಿ ಇರಲಿಲ್ಲ. ಹೀಗಾಗಿ ಮನೆಯವರನ್ನ ಎದುರು ಹಾಕಿಕೊಂಡು ಮದುವೆಯಾಗುವುದು ಬೇಡ ಎಂಬ ತೀರ್ಮಾನಕ್ಕೆ ಒಮ್ಮೆ ಬಂದಿದ್ವಿ. ಆದರೆ, ಬಳಿಕ ನಮ್ಮ ನಿರ್ಧಾರ ಬದಲಾಗಿ ಇಬ್ಬರೂ ಮತ್ತೆ ಒಂದಾದೆವು' ಎಂದಿದ್ದಾರೆ ಶಂಕರ್‌ ನಾಗ್-ಅರುಂಧತಿ ನಾಗ್ ಜೋಡಿ. 

1980ರಲ್ಲಿ ನಟ ಶಂಕರ್‌ ನಾಗ್ ಹಾಗು ನಟಿ ಅರುಂಧತಿ ನಾಗ್ ಅವರಿಬ್ಬರೂ ಮದುವೆಯಾದರು. ಆದರೆ ಅರಿಬ್ಬರೂ ದಾಂಪತ್ಯ ನಡೆಸಲು ಸಾಧ್ಯವಾಗಿದ್ದು ಕೇವಲ ಹತ್ತು ವರ್ಷಗಳಷ್ಟೇ. ಕಾರಣ, 30 ಸೆಪ್ಟೆಂಬರ್ 1990ರಂದು ನಟ ಶಂಕರ್‌ ನಾಗ್ ಅವರು ಕಾರು ಅಪಘಾತದಲ್ಲಿ ದುರಂತ ಮರಣ ಕಂಡರು. 09 ನವೆಂಬರ್ 1954ರಂದು ಜನಿಸಿದ್ದ ಶಂಕರ್‌ ನಾಗ ಅವರು ಬದುಕಿದ್ದು ಕೇವಲ 35 ವರ್ಷಗಳು ಮಾತ್ರ. ಆದರೆ. ಅಷ್ಟರಲ್ಲಾಗಲೇ ಅವರು ಸಾಧಿಸಿದ್ದು ಅಪಾರ. 

ಎಂಡಿ ಶ್ರೀಧರ್ ಚಿತ್ರದಲ್ಲಿ ನಾಯಕಿ ಹೆಸರು ಅಂಕಿತಾ ಅಂತ್ಲೇ ಯಾಕಿರುತ್ತೆ..! ಯಕ್ಷಪ್ರಶ್ನೆಗೆ ಸಿಕ್ತಾ ಉತ್ತರ?

ಹೌದು, ನಟ ಶಂಕರ್‌ ನಾಗ್ ಅವರು ಮೂವತ್ತೈದೇ ವರ್ಷಗಳು ಬದುಕಿದ್ದರೂ ಕೂಡ, ಅಷ್ಟರಲ್ಲಿ ಹಲವು ಸಿನಿಮಾಗಳು, ಧಾರಾವಾಹಿಗಳಲ್ಲಿ ನಟಿಸಿದ್ದರು. ಜತೆಗೆ, ಡಾ ರಾಜ್‌ಕುಮಾರ್ ನಟನೆಯ 'ಒಂದು ಮುತ್ತಿನ ಕಥೆ' ಸೇರಿದಂತೆ ಹಲವಾರು ಸಿನಿಮಾಗಳಿಗೆ ನಿರ್ದೇಶನವನ್ನೂ ಮಾಡಿದ್ದರು. ಕನ್ನಡದ ಹಿರಿಯ ನಟ ಅನಂತ್‌ ನಾಗ್  ಅವರು ಶಂಕರ್‌ ನಾಗ್ ಅವರ ಅಣ್ಣ ಎಂಬುದು ಹಲವರಿಗೆ ಗೊತ್ತಿರುವ ಸಂಗತಿ. ಅವರಿಬ್ಬರೂ ಒಟ್ಟಾಗಿ ನಟಿಸಿದ್ದಾರೆ ಕೂಡ. 

Latest Videos
Follow Us:
Download App:
  • android
  • ios